AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2ನೇ ಅಲೆ ಭೀತಿಯಿದ್ರೂ ಎಡವಿತಾ ಸರ್ಕಾರ, ಜನರಿಲ್ಲ ಅನ್ನೋ ನೆಪಕ್ಕೆ ಕೋವಿಡ್ ಕೇರ್ ಸೆಂಟರ್ ಬಂದ್..

ಬೆಂಗಳೂರು: ಕೊರೊನಾ ದಾಳಿ ಇಡುತ್ತಿದ್ದ ಸಂದರ್ಭದಲ್ಲಿ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್​ಗಳನ್ನು ತೆರೆದಿತ್ತು. ಆದರೆ ಈಗ ಅದಕ್ಕೆ ಬೀಗ ಹಾಕಲು ಮುಂದಾಗಿದೆ. ಕೊರೊನಾ 2ನೇ ಅಲೆ ವಕ್ಕರಿಸಿರುವಾಗಲೇ ಕೇರ್ ಸೆಂಟರ್​ಗಳಿಗೆ ಬೀಗ ಏತಕ್ಕಾಗಿ ಹಾಕಲಾಗುತ್ತಿದೆ. ಕೊರೊನಾರ್ಭಟ ಹೊತ್ತಲ್ಲೇ ರೆಡಿ ಇರಬೇಕಿದ್ದ ಸರ್ಕಾರ ಮಾಡ್ತಿರೋದೇನು? ಎಂಬ ಪ್ರಶ್ನೆಗಳೆದ್ದಿವೆ. ಸೋಂಕಿತರು ಬಾರದ ಹಿನ್ನೆಲೆಯಲ್ಲಿ ಸರ್ಕಾರ ನಿರ್ಮಿಸಿದ್ದ ಕೊವಿಡ್ ಕೇರ್ ಸೆಂಟರ್​ಗಳನ್ನು ಕ್ಲೋಸ್ ಮಾಡಲು ನಿರ್ಧರಿಸಲಾಗಿದೆ. ಸೋಂಕಿತರ ಆರೈಕೆಗೆ ಬೆಂಗಳೂರಿನಲ್ಲಿ 12 ಕೇರ್ […]

2ನೇ ಅಲೆ ಭೀತಿಯಿದ್ರೂ ಎಡವಿತಾ ಸರ್ಕಾರ, ಜನರಿಲ್ಲ ಅನ್ನೋ ನೆಪಕ್ಕೆ ಕೋವಿಡ್ ಕೇರ್ ಸೆಂಟರ್ ಬಂದ್..
ಆಯೇಷಾ ಬಾನು
|

Updated on:Oct 30, 2020 | 8:25 AM

Share

ಬೆಂಗಳೂರು: ಕೊರೊನಾ ದಾಳಿ ಇಡುತ್ತಿದ್ದ ಸಂದರ್ಭದಲ್ಲಿ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್​ಗಳನ್ನು ತೆರೆದಿತ್ತು. ಆದರೆ ಈಗ ಅದಕ್ಕೆ ಬೀಗ ಹಾಕಲು ಮುಂದಾಗಿದೆ. ಕೊರೊನಾ 2ನೇ ಅಲೆ ವಕ್ಕರಿಸಿರುವಾಗಲೇ ಕೇರ್ ಸೆಂಟರ್​ಗಳಿಗೆ ಬೀಗ ಏತಕ್ಕಾಗಿ ಹಾಕಲಾಗುತ್ತಿದೆ. ಕೊರೊನಾರ್ಭಟ ಹೊತ್ತಲ್ಲೇ ರೆಡಿ ಇರಬೇಕಿದ್ದ ಸರ್ಕಾರ ಮಾಡ್ತಿರೋದೇನು? ಎಂಬ ಪ್ರಶ್ನೆಗಳೆದ್ದಿವೆ.

ಸೋಂಕಿತರು ಬಾರದ ಹಿನ್ನೆಲೆಯಲ್ಲಿ ಸರ್ಕಾರ ನಿರ್ಮಿಸಿದ್ದ ಕೊವಿಡ್ ಕೇರ್ ಸೆಂಟರ್​ಗಳನ್ನು ಕ್ಲೋಸ್ ಮಾಡಲು ನಿರ್ಧರಿಸಲಾಗಿದೆ. ಸೋಂಕಿತರ ಆರೈಕೆಗೆ ಬೆಂಗಳೂರಿನಲ್ಲಿ 12 ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿತ್ತು. 12 ಕೇರ್ ಸೆಂಟರ್​ಗಳಲ್ಲಿ ಸುಮಾರು 14 ಸಾವಿರ ಬೆಡ್ ವ್ಯವಸ್ಥೆ ಇತ್ತು. ಆದರೆ, ಕೇರ್ ಸೆಂಟರ್​ಗಳಿಗೆ ಸೋಂಕಿತರು ಬಾರದ ಹಿನ್ನೆಲೆಯಲ್ಲಿ ಈಗಾಗಲೇ 8 ಕೊವಿಡ್ ಕೇರ್ ಸೆಂಟರ್​ಗಳನ್ನು ಕ್ಲೋಸ್ ಮಾಡಲಾಗಿದೆ. ಉಳಿದ 4 ಕೇರ್ ಸೆಂಟರ್​ಗಳನ್ನು ಶೀಘ್ರವೇ ಕ್ಲೋಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಒಂದೆಡೆ ಯುರೋಪ್​ ರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಹೀಗಾಗಿ ಯುರೋಪ್​ ರಾಷ್ಟ್ರಗಳಲ್ಲಿ ಮತ್ತೆ ಲಾಕ್​ಡೌನ್​ ಮಾಡಲಾಗುತ್ತಿದೆ.

ಒಂದೆಡೆ ಕೊರೊನಾ ಅಬ್ಬರ, ಮತ್ತೊಂದ್ಕಡೆ ಎಡವಟ್ಟಿನ ನಿರ್ಧಾರ ಜೊತೆಗೆ ದೇಶದಲ್ಲಿ ಈಗ ಚಳಿಗಾಲ ಆರಂಭವಾಗುತ್ತಿದೆ. ಚಳಿಗಾಲ ಡೇಂಜರ್ ಅಂತಾ ಆರೋಗ್ಯ ಸಚಿವರೇ ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೇರ್​ ಸೆಂಟರ್​ ಆರಂಭಿಸಬೇಕು. ಆದರೆ ರಾಜ್ಯದಲ್ಲಿ ಮಾತ್ರ ಕೊವಿಡ್​ ಕೇರ್​ ಸೆಂಟರ್ ಕ್ಲೋಸ್ ಮಾಡಲಾಗುತ್ತಿದೆ. ಎರಡನೇ ಅಲೆ ಹೇಗಿರಲಿದೆ ಎಂಬ ಯೋಚನೆಯೂ ಇಲ್ಲ. ಹೀಗಿರುವಾಗ ಕೇರ್ ಸೆಂಟರ್ ಮುಚ್ಚಬೇಕೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

Published On - 8:25 am, Fri, 30 October 20

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ