ಮೃತ ಕೊರೊನಾ ವಾರಿಯರ್ ಕುಟುಂಬಕ್ಕೆ 5 ಲಕ್ಷ ಪರಿಹಾರ
ಗದಗ: ಹೃದಯಾಘಾತದಿಂದ ಮೃತಪಟ್ಟಿದ್ದ 108 ಌಂಬುಲೆನ್ಸ್ ಚಾಲಕನ ಕುಟುಂಬಕ್ಕೆ ಸರ್ಕಾರ 5ಲಕ್ಷ ಪರಿಹಾರ ಬಿಡುಗಡೆ ಮಾಡಿದೆ. ಮೃತ ಕೊರೊನಾ ವಾರಿಯರ್ ಕುಟುಂಬದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ವರದಿ ನಂತರ ಎಚ್ಚೆತ್ತ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಕೊವಿಡ್ ವಾರಿಯರ್ ಮೃತಪಟ್ರೂ ನೆರವಿಗೆ ನಿಲ್ಲದ ಸರ್ಕಾರ, ತಾಳಿ ಅಡವಿಟ್ಟು ಪತಿಯ ಕಾರ್ಯ ಮೇ 27ರಂದು 108 ಌಂಬುಲೆನ್ಸ್ ಚಾಲಕ ಕೊಣ್ಣೂರು ಗ್ರಾಮದ ಉಮೇಶ್(37) ಮೃತಪಟ್ಟಿದ್ದರು. ಮೃತ ಚಾಲಕನ ಕುಟುಂಬವನ್ನು ಜಿಲ್ಲಾಡಳಿತ ಭೇಟಿಯಾಗಿರಲಿಲ್ಲ. ಸೌಜನ್ಯಕ್ಕೂ ಅಧಿಕಾರಿಗಳಾಗಲಿ, […]
ಗದಗ: ಹೃದಯಾಘಾತದಿಂದ ಮೃತಪಟ್ಟಿದ್ದ 108 ಌಂಬುಲೆನ್ಸ್ ಚಾಲಕನ ಕುಟುಂಬಕ್ಕೆ ಸರ್ಕಾರ 5ಲಕ್ಷ ಪರಿಹಾರ ಬಿಡುಗಡೆ ಮಾಡಿದೆ. ಮೃತ ಕೊರೊನಾ ವಾರಿಯರ್ ಕುಟುಂಬದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ವರದಿ ನಂತರ ಎಚ್ಚೆತ್ತ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಕೊವಿಡ್ ವಾರಿಯರ್ ಮೃತಪಟ್ರೂ ನೆರವಿಗೆ ನಿಲ್ಲದ ಸರ್ಕಾರ, ತಾಳಿ ಅಡವಿಟ್ಟು ಪತಿಯ ಕಾರ್ಯ ಮೇ 27ರಂದು 108 ಌಂಬುಲೆನ್ಸ್ ಚಾಲಕ ಕೊಣ್ಣೂರು ಗ್ರಾಮದ ಉಮೇಶ್(37) ಮೃತಪಟ್ಟಿದ್ದರು. ಮೃತ ಚಾಲಕನ ಕುಟುಂಬವನ್ನು ಜಿಲ್ಲಾಡಳಿತ ಭೇಟಿಯಾಗಿರಲಿಲ್ಲ. ಸೌಜನ್ಯಕ್ಕೂ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಸಾಂತ್ವನ ಹೇಳಿರಲಿಲ್ಲ. ಮೃತನ ಹೆಂಡತಿ ತನ್ನ ತಾಳಿ ಅಡವಿಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಮೃತ ಚಾಲಕನ ಕುಟುಂಬದ ಪರಿಸ್ಥಿತಿ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು.ನಂತರ ವರದಿ ಗಮನಿಸಿ ಸಿಎಂ ಬಿಎಸ್ ಯಡಿಯೂರಪ್ಪ ಮೃತ ಌಂಬುಲೆನ್ಸ್ ಚಾಲಕನ ಪತ್ನಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಸದ್ಯ ಮೃತ ಉಮೇಶ್ ಕುಟುಂಬಕ್ಕೆ ಸರ್ಕಾರ 5 ಲಕ್ಷ ಪರಿಹಾರ ನೀಡಿದೆ.
Published On - 4:13 pm, Tue, 2 June 20