AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಮಿಗಳ Hot Spot ನಂದಿ ಬೆಟ್ಟಕ್ಕೆ ಇನ್ನೂ ಯಾರೂ ಬರಬೇಡಿ.. ಯಾಕೆ?

ಚಿಕ್ಕಬಳ್ಳಾಫುರ: ಅದು ಹೇಳಿ ಕೇಳಿ ವಿಶ್ವವಿಖ್ಯಾತ ಹಿಲ್ ಸ್ಟೇಷನ್. ಅಲ್ಲಿಗೆ ಹೋಗಿ ಕೆಲಕಾಲ ವಿಶ್ರಾಂತಿ ಪಡೆದ್ರೆ ಏನೊ ಒಂಥರಾ ಆನಂದ ಉಲ್ಲಾಸ. ಅದೂ ರಾಜಧಾನಿ ಬೆಂಗಳೂರಿನ ಪಕ್ಕದಲ್ಲೆ ಇರುವ ಕಾರಣ ಬೆಂಗಳೂರಿಗರ ಹಾಟ್ ಫೇವರೆಟ್ ಸ್ಪಾಟ್. ಮೇ ಜೂನ್ ತಿಂಗಳು ಬಂದ್ರೆ ಸಾಕು ಅಲ್ಲಿ ಸ್ವರ್ಗವೇ ಧರೆಗಿಳಿದಿರುತ್ತೆ, ಒತ್ತಡಗಳ ಮಧ್ಯೆ ಅಲ್ಲಿಗೆ ಹೋಗಿ ರಿಲ್ಯಾಕ್ಸ್ ಆಗುತ್ತಿದ್ದ ಐ.ಟಿ-ಬಿ.ಟಿ ಟೆಕ್ಕಿಗಳು ಈಗ ಅಲ್ಲಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ! ಆದ್ರೆ ಜಿಲ್ಲಾಡಳಿತ ಅವರನ್ನು ನಿರಾಶೆಯ ಮಡುವಿಗೆ ತಳ್ಳಿದೆ ರಾಜಧಾನಿ ಬೆಂಗಳೂರಿನಿಂದ […]

ಪ್ರೇಮಿಗಳ Hot Spot ನಂದಿ ಬೆಟ್ಟಕ್ಕೆ ಇನ್ನೂ ಯಾರೂ ಬರಬೇಡಿ.. ಯಾಕೆ?
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು|

Updated on:Jun 02, 2020 | 7:27 PM

Share

ಚಿಕ್ಕಬಳ್ಳಾಫುರ: ಅದು ಹೇಳಿ ಕೇಳಿ ವಿಶ್ವವಿಖ್ಯಾತ ಹಿಲ್ ಸ್ಟೇಷನ್. ಅಲ್ಲಿಗೆ ಹೋಗಿ ಕೆಲಕಾಲ ವಿಶ್ರಾಂತಿ ಪಡೆದ್ರೆ ಏನೊ ಒಂಥರಾ ಆನಂದ ಉಲ್ಲಾಸ. ಅದೂ ರಾಜಧಾನಿ ಬೆಂಗಳೂರಿನ ಪಕ್ಕದಲ್ಲೆ ಇರುವ ಕಾರಣ ಬೆಂಗಳೂರಿಗರ ಹಾಟ್ ಫೇವರೆಟ್ ಸ್ಪಾಟ್. ಮೇ ಜೂನ್ ತಿಂಗಳು ಬಂದ್ರೆ ಸಾಕು ಅಲ್ಲಿ ಸ್ವರ್ಗವೇ ಧರೆಗಿಳಿದಿರುತ್ತೆ, ಒತ್ತಡಗಳ ಮಧ್ಯೆ ಅಲ್ಲಿಗೆ ಹೋಗಿ ರಿಲ್ಯಾಕ್ಸ್ ಆಗುತ್ತಿದ್ದ ಐ.ಟಿ-ಬಿ.ಟಿ ಟೆಕ್ಕಿಗಳು ಈಗ ಅಲ್ಲಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ! ಆದ್ರೆ ಜಿಲ್ಲಾಡಳಿತ ಅವರನ್ನು ನಿರಾಶೆಯ ಮಡುವಿಗೆ ತಳ್ಳಿದೆ

ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ವಿಶ್ವವಿಖ್ಯಾತ ದೇಶ ವಿದೇಶಿಗರ ಫೇವರೆಟ್ ಹಾಟ್ ಸ್ಪಾಟ್ ಇದೆ ನಂದಿ ಗಿರಿಧಾಮ. ಹೌದು! ಮಕ್ಕಳಿಂದ ಮುದುಕರವರೆಗೂ ಪ್ರೇಮಿಗಳಿಂದ ದಂಪತಿಗಳವರೆಗೂ ಎಲ್ಲಾ ವರ್ಗದ ಎಲ್ಲಾ ವಯಸ್ಸಿನ ಜನರ ಮನಗೆದ್ದಿರುವ ಪ್ರಕೃತಿ ತಾಣವೇ ನಂದಿ ಗಿರಧಾಮ. ಸಮುದ್ರ ಮಟ್ಟದಿಂದ 1600 ಮೀಟರ್ ಗಳ ಎತ್ತರದಲ್ಲಿರುವ ಗಿರಿಧಾಮದಲ್ಲಿ ವರ್ಷದ ಎಲ್ಲಾ ಋತುಗಳಲ್ಲಿ ತಂಪಾದ ಅಹ್ಲಾದಕರ ವಾತವರಣ ಇರುತ್ತೆ, ಗಿರಿಧಾಮಕ್ಕೆ ಹೋಗಿ ಕೆಲಕಾಲ ವಿಶ್ರಾಂತಿ ಪಡೆದ್ರೆ. ಅದೇನೊ ಒಂಥರ ಮನಸ್ಸು ರಿಲ್ಯಾಕ್ಸ್ ಆಗುತ್ತೆ.

ನಂದಿಬೆಟ್ಟದ ಸೌಂದರ್ಯಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕು! ಮತ್ತೊಂದೆಡೆ ಪುಂಡ ಪೋಕರಿಗಳ ಕಾಟವಿಲ್ಲದ ಕಾರಣ ಬೆಂಗಳೂರು ಸೇರಿದಂತೆ ದೇಶ ವಿದೇಶದ ಪ್ರೇಮಿಗಳು ಗಿರಿಧಾಮಕ್ಕೆ ಆಗಮಿಸಿ ರೋಮ್ಯಾನ್ಸ್ ನಲ್ಲಿ ತೊಡಗುತ್ತಾರೆ, ನಾನು ನೀನು ಒಂದಾದ ಮೇಲೆ ಇನ್ಯಾರ ಅಳಕು ಅನ್ನೊ ಹಾಗೆ ಸ್ವಚ್ಚಂದವಾಗಿ ಯಾರ ಭೀತಿ ಇಲ್ಲದೆ ಗಿರಿಧಾಮದ ಹಸಿರಿನ ಮಧ್ಯೆ ಪ್ರೇಮಿಗಳು ವಿಹರಿಸುತ್ತಾರೆ.

ಪ್ರೇಮಿಗಳು, ಪರಿಸರ ಪ್ರೇಮಿಗಳಿಗೆ ನಿರಾಶೆ! ಮಕ್ಕಳು ಮರಿ ಅಪ್ಪ ಅಮ್ಮ ಗಂಡ ಹೆಂಡತಿ ಅಂತ ಕುಟುಂಬ ಸಮೇತರಾಗಿ ಗಿರಿಧಾಮಕ್ಕೆ ಆಗಮಿಸಿ ದಿನವಿಡಿ ಕಾಲ ಕಳೆಯುತ್ತಾರೆ. ಗಿರಿಧಾಮದ ಹಸಿರ ಸಿರಿಯ ಮಧ್ಯೆ ನಳನಳಿಸುವ ವಿವಿಧ ಜಾತಿಯ ವಿವಿಧ ಬಣ್ಣಗಳ ಹೂ, ಗಿಡಮರ ಬಳ್ಳಿ, ಪಕ್ಷಿಗಳ ನಿನಾದ ಕೇಳಲು ಪ್ರಕೃತಿ ಪ್ರಿಯರ ದಂಡು ಇಲ್ಲಿಗೆ ಬರುತ್ತೆ.

ಲಾಕ್ ಡೌನ್ ಸಡಿಲಿಕೆಯಾದ್ರೂ ನಂದಿಬೆಟ್ಟಕ್ಕಿಲ್ಲ ಪ್ರವೇಶ! ಆದ್ರೆ ಕೊರೊನಾ ಸೋಂಕು ಹರಡದಂತೆ ತಡೆಯಲು ಕಳೆದ ಎರಡು ತಿಂಗಳಿಂದ ನಂಧಿಗಿರಿಧಾಮವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಪ್ರವಾಸಿಗರು ಬಾರದಂತೆ ಲಾಕ್ ಡೌನ್ ಮಾಡಿತ್ತು. ಆದ್ರೆ ಈಗ ಎಲ್ಲಡೆ ಲಾಕ್ ಡೌನ್ ನಿಯಮಗಳು ಸಡಿಲಗೊಂಡ್ರೂ. ಮತ್ತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಗಿರಿಧಾಮದ ಪ್ರವೇಶವನ್ನು ನಿಷೇಧಿಸಿ ಆದೇಶ ಮಾಡಿದ್ದಾರೆ. ಜೂನ್ ಒಂದರಿಂದ ಬೆಳಿಗ್ಗೆ 6 ಗಂಟೆಯಿಂದ ಜೂನ್ 30 ರ ರಾತ್ರಿ 12 ಗಂಟೆವರೆಗೂ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಇದ್ರಿಂದ ಪ್ರವಾಸಿಗರಲ್ಲಿ ನಿರಾಶೆ ಮೂಡಿದೆ.

Published On - 6:20 pm, Tue, 2 June 20

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ