ಕೊಲೆಯಲ್ಲಿ ಅಂತ್ಯವಾದ ಗ್ರಾ.ಪಂ. ಚುನಾವಣಾ ವಿಜಯೋತ್ಸವ: ಗೆದ್ದ ಅಭ್ಯರ್ಥಿಯ ಸಂಬಂಧಿ ಸಾವು
ಗ್ರಾಮ ಪಂಚಾಯಿತಿ ಚುನಾವಣಾ ವಿಜಯೋತ್ಸವ ಕೊಲೆಯಲ್ಲಿ ಅಂತ್ಯವಾಗಿದೆ. ಗೆದ್ದ ಅಭ್ಯರ್ಥಿಯ ಸಂಬಂಧಿ ಮೃತಪಟ್ಟಿದ್ದಾನೆ.
ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣಾ ವಿಜಯೋತ್ಸವ ಕೊಲೆಯಲ್ಲಿ ಅಂತ್ಯವಾಗಿದೆ. ಗೆದ್ದ ಅಭ್ಯರ್ಥಿಯ ಸಂಬಂಧಿ ಮೃತಪಟ್ಟಿದ್ದಾನೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾಪುರ ಗ್ರಾಮದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಮತ್ತು ತದನಂತರ ನಿನ್ನೆಯ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಈ ದುರಂತ ಘಟನೆ ನಡೆದಿದ್ದು, ರೊಚ್ಚಿಗೆದ್ದ ಪರಸ್ಪರ ಗುಂಪುಗಳು ಬಡಿದಾಟದಲ್ಲಿ ತೊಡಗಿ, ಒಬ್ಬ ವ್ಯಕ್ತಿಯ ಸಾವಿನಲ್ಲಿ ಅಂತ್ಯವಾಗಿದೆ.
ಬಶೀರ ಮುಲ್ಲಾ, ಶಬ್ಬೀರ ಮುಲ್ಲಾ ಗ್ರಾ. ಪಂ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು. ಚುನಾಚಣೆಯಲ್ಲಿ ಬಶೀರ ಮುಲ್ಲಾ ಗೆಲುವು ಸಾಧಿಸಿದ್ದು, ಶಬ್ಬೀರ ಮುಲ್ಲಾಗೆ ಸೋಲುಂಟಾಗಿತ್ತು. ಗೆದ್ದ ಅಭ್ಯರ್ಥಿಯು ಸೋತ ಅಭ್ಯರ್ಥಿ ಮನೆ ಮುಂದೆ ವಿಜಯೋತ್ಸವ ಮಾಡಿದ್ದ. ಈ ವಿಜಯೋತ್ಸವ ಹಿನ್ನೆಲೆ ಪರಸ್ಪರ ಗುಂಪುಗಳು ಮಾರಕಾಸ್ತ್ರಗಳಿಂದ ತೀವ್ರವಾಗಿ ಕಾದಾಟದಲ್ಲಿ ತೊಡಗಿದ್ದವು. ಆ ವೇಳೆ, ಗೆದ್ದ ಬಶೀರ ಮುಲ್ಲಾನ ಸಹೋದರ ಶಾನೂರ ಮುಲ್ಲಾ(50) ಸಾವಿಗೀಡಾಗಿದ್ದಾನೆ.
ಶಬ್ಬೀರ ಮುಲ್ಲಾ ಸಂಬಂಧಿಕರು ಮಾರಕಾಸ್ತ್ರಗಳಿಂದ ಶಾನೂರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 6 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಒಂದು ಗಂಟೆಯಲ್ಲಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾ.ಪಂ. ಚುನಾವಣೆ: ಸೋತ ಅಭ್ಯರ್ಥಿ ಮನೆ ಮುಂದೆ ಪಟಾಕಿ ಹಚ್ಚಿ ಸಂಭ್ರಮ.. ಬೆಂಬಲಿಗರು, ಕುಟುಂಬಸ್ಥರ ನಡುವೆ ಮಾರಾಮಾರಿ
Published On - 1:08 pm, Thu, 31 December 20