ಪಂಚಾಯ್ತಿ ಅಧ್ಯಕ್ಷೆ ದರ್ಪ: ಮನೆ ಸೌಂದರ್ಯಕ್ಕೆ ಅಡ್ಡಿಯೆಂದು ಬ.ನಿಲ್ದಾಣವನ್ನೇ ಧ್ವಂಸ ಮಾಡೋದಾ
ಚಿಕ್ಕಮಗಳೂರು: ಮನೆಯ ಸೌಂದರ್ಯಕ್ಕೆ ಧಕ್ಕೆಯಾಗುತ್ತೆ ಎಂದು ಸರ್ಕಾರಿ ಬಸ್ ನಿಲ್ದಾಣವನ್ನು ಧ್ವಂಸಗೊಳಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದರ್ಪ ಮೆರೆದಿದ್ದಾರೆ. ಕಡೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎಸ್. ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಣಮ್ಮ ತಮ್ಮ ಮನೆಯ ಸೌಂದರ್ಯಕ್ಕೆ ಬಸ್ ನಿಲ್ದಾಣ ಅಡ್ಡಿಯೆಂದು ಅದನ್ನು ತೆರವುಗೊಳಿಸಿ ತಮ್ಮ ಅಧ್ಯಕ್ಷ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಬಸ್ ನಿಲ್ದಾಣವನ್ನು ಧ್ವಂಸ ಮಾಡಿದ್ದಾರೆ. ಅಧ್ಯಕ್ಷೆಯ ಮಕ್ಕಳಾದ ಪ್ರಭಾಕರ್ ಮತ್ತು ಜಗದೀಶ್ ತೆರವು ಕಾರ್ಯದಲ್ಲಿ ಭಾಗಿಯಾಗಿದ್ದರು. […]
Follow us on
ಚಿಕ್ಕಮಗಳೂರು: ಮನೆಯ ಸೌಂದರ್ಯಕ್ಕೆ ಧಕ್ಕೆಯಾಗುತ್ತೆ ಎಂದು ಸರ್ಕಾರಿ ಬಸ್ ನಿಲ್ದಾಣವನ್ನು ಧ್ವಂಸಗೊಳಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದರ್ಪ ಮೆರೆದಿದ್ದಾರೆ. ಕಡೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಎಸ್. ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಣಮ್ಮ ತಮ್ಮ ಮನೆಯ ಸೌಂದರ್ಯಕ್ಕೆ ಬಸ್ ನಿಲ್ದಾಣ ಅಡ್ಡಿಯೆಂದು ಅದನ್ನು ತೆರವುಗೊಳಿಸಿ ತಮ್ಮ ಅಧ್ಯಕ್ಷ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಬಸ್ ನಿಲ್ದಾಣವನ್ನು ಧ್ವಂಸ ಮಾಡಿದ್ದಾರೆ.
ಅಧ್ಯಕ್ಷೆಯ ಮಕ್ಕಳಾದ ಪ್ರಭಾಕರ್ ಮತ್ತು ಜಗದೀಶ್ ತೆರವು ಕಾರ್ಯದಲ್ಲಿ ಭಾಗಿಯಾಗಿದ್ದರು. ಬಸ್ ನಿಲ್ದಾಣವಿಲ್ಲದೆ ಗ್ರಾಮಸ್ಥರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.