ತಂಗಳು ತಿಂದ ಸಿದ್ದರಾಮಯ್ಯ ಸಿಎಂ ಆದ್ರು.. ಅರಸುರಂತೆ ಜನನಾಯಕರಾದರು: ಎಚ್. ವಿಶ್ವನಾಥ್

  • TV9 Web Team
  • Published On - 12:56 PM, 21 Oct 2020
ತಂಗಳು ತಿಂದ ಸಿದ್ದರಾಮಯ್ಯ ಸಿಎಂ ಆದ್ರು.. ಅರಸುರಂತೆ ಜನನಾಯಕರಾದರು: ಎಚ್. ವಿಶ್ವನಾಥ್

ಮೈಸೂರು: ತಂಗಳು ಅನ್ನ ತಿಂದ ಸಿದ್ದರಾಮಯ್ಯ ಸಿಎಂ ಆದ್ರು.. ಅರಸುರಂತೆ ಜನನಾಯಕರಾದರು ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹೆಚ್. ವಿಶ್ವನಾಥ್ ಸಿದ್ದರಾಮಯ್ಯ ಹಾಗೂ ದೇವರಾಜ ಅರಸರನ್ನು ಹೊಗಳಿದ್ದಾರೆ.

ಮೈಸೂರು ರಾಜಕಾರಣದ ಬಗ್ಗೆ ದಾಖಲೆಯಾಗಬೇಕು. ಮೈಸೂರಿನ ಇಬ್ಬರು ನಾಯಕರು ಸಿಎಂ ಆಗಿದ್ದಾರೆ. ತಂಗಳು ಅನ್ನಕ್ಕೆ ಹೋಟೆಲ್​ನಿಂದ ಸಾಂಬರ್ ತಂದು ತಿಂದ ಸಿದ್ದರಾಮಯ್ಯ ಸಿಎಂ ಆದ್ರು. ದೇವರಾಜ್ ಅರಸುರಂತ ಜನನಾಯಕನ ಒಳ್ಳೆ ಕೆಲಸ ಜನರಿಗೆ ಗೊತ್ತಾಗಲಿಲ್ಲ. ಇವೆಲ್ಲವೂ ಪುಸ್ತಕದಲ್ಲಿ ದಾಖಲಾಗಬೇಕು ಎಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಶ್ವನಾಥ್ ತಿಳಿಸಿದರು.