ಮುಖದ ಮೇಲೆ ಮೊಡವೆ ಏಳದಂತೆ ನೋಡಿಕೊಳ್ಳಲು ಇಲ್ಲಿದೆ ಸುಲಭ ಟಿಪ್ಸ್​

| Updated By: ಆಯೇಷಾ ಬಾನು

Updated on: Dec 28, 2020 | 6:29 AM

ಮೊಡವೆ ಆಗದಂತೆ ನೋಡಿಕೊಳ್ಳಲು ಅನೇಕರು ನಾನಾ ಕ್ರೀಮ್​ಗಳನ್ನು ಬಳಕೆ ಮಾಡುತ್ತಾರೆ. ಕೆಲ ಕ್ರೀಮ್​ಗಳು ನಿಮ್ಮ ದೇಹಕ್ಕೆ ತೊಂದರೆ ಕೂಡ ಉಂಟು ಮಾಡಬಹುದು. ಅಲರ್ಜಿ ಕೂಡ ಉಂಟಾಗಬಹುದು. ಹಾಗಾದರೆ, ನೈಸರ್ಗಿಕವಾಗಿ ಮೊಡವೆ ಹೋಗಿಸೋದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಮುಖದ ಮೇಲೆ ಮೊಡವೆ ಏಳದಂತೆ ನೋಡಿಕೊಳ್ಳಲು ಇಲ್ಲಿದೆ ಸುಲಭ ಟಿಪ್ಸ್​
ಸಾಂದರ್ಭಿಕ ಚಿತ್ರ
Follow us on

ಯಾವುದೋ ವಿಶೇಷ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳಬೇಕಿರುತ್ತದೆ. ಈ ಸಂದರ್ಭದಲ್ಲೇ ನಿಮ್ಮ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. ಇದಕ್ಕಿಂತಲೂ ಬೇಸರ ಹಾಗೂ ಸಿಟ್ಟು ಬರುವ ವಿಚಾರ ಮತ್ತೊಂದಿರಲಿದೆಯೇ? ಹೀಗಾಗಿ, ಮೊಡವೆ ಆಗದಂತೆ ನೋಡಿಕೊಳ್ಳಲು ಅನೇಕರು ನಾನಾ ಕ್ರೀಮ್​ಗಳನ್ನು ಬಳಕೆ ಮಾಡುತ್ತಾರೆ. ಕೆಲ ಕ್ರೀಮ್​ಗಳು ನಿಮ್ಮ ದೇಹಕ್ಕೆ ತೊಂದರೆ ಉಂಟು ಮಾಡಬಹುದು. ಅಲರ್ಜಿ ಕೂಡ ಆಗಬಹುದು. ಹಾಗಾದರೆ, ನೈಸರ್ಗಿಕವಾಗಿ ಮೊಡವೆಗೆ ಕಡಿವಾಣ ಹಾಕುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹೆಚ್ಚು ನೀರು ಕುಡಿಯಿರಿ: ಹೆಚ್ಚು ಹೆಚ್ಚು ನೀರು ಕುಡಿಯವುದರಿಂದಲೂ ನೀವು ಮೊಡವೆಯನ್ನು ನಿಯಂತ್ರಿಸಬಹುದು. ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಪೋಷಣೆ ಹಾಗೂ ಆಮ್ಲಜನಕ ಸಿಗುತ್ತದೆ. ಇವು ಮೊಡವೆಕಾರಕಗಳನ್ನು ನಿಯಂತ್ರಿಸುತ್ತವೆ.

ಆಲಿವ್​ ಆಯಿಲ್​ ಲೋಷನ್​: ಆಲಿವ್ ಆಯಿಲ್​ ಲೋಷನ್​ ಬಳಕೆಯಿಂದಲೂ ಮೊಡವೆ ಕಡಿಮೆ ಆಗಲಿದೆ ಎನ್ನುತ್ತಾರೆ ತಜ್ಞರು. ಈ ಲೋಷನ್​ ರಂಧ್ರಗಳನ್ನು ಮುಚ್ಚದೆ ಚರ್ಮದೊಳಗೆ ಇಳಿಯುತ್ತದೆ. ಇದರಿಂದ ಚರ್ಮವು ಉಸಿರಾಡಲು ಅನುವಾಗುತ್ತದೆ ಮತ್ತು ಇದು ಮೊಡವೆಗಳು ಏಳದಂತೆ ತಡೆಯಲು ಸಹಾಯ ಮಾಡುತ್ತದೆ.

ನಿಂಬೆ ಜ್ಯೂಸ್​: ನಿಂಬೆ ರಸದಿಂದ ಮಾಡಿದ ಜ್ಯೂಸ್ ದೇಹದಲ್ಲಿರುವ ಆಮ್ಲೀಯ ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ಸಿಟ್ರಿಕ್ ಆಮ್ಲದೊಂದಿಗೆ ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ. ಇದರಿಂದ ಚರ್ಮದ ಮೇಲಾಗುವ ಮೊಡವೆ ಕಡಿಮೆ ಆಗುತ್ತದೆ.

ಕಲ್ಲಂಗಡಿ: ಕಲ್ಲಂಗಡಿ ಹಣ್ಣನ್ನು ಅನೇಕರು ಇಷ್ಟಪಡುತ್ತಾರೆ. ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲು ಕಲ್ಲಂಗಡಿ ತುಂಬಾ ಉಪಯುಕ್ತವಾಗಿದೆ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ಇದು ಚರ್ಮವನ್ನು ಕಾಂತಿಯುತವಾಗಿರಿಸುವುದಲ್ಲದೆ, ವಿಕಿರಣಗಳಿಂದ ತಡೆಯುತ್ತದೆ.

ಹಾಲಿನ ಉತ್ಪನ್ನ: ಸಮತೋಲಿತ ಆಹಾರವನ್ನು ಸೇವಿಸುವುದು ಆರೋಗ್ಯಕರ ಚರ್ಮವನ್ನು ಹೊಂದಲು ಉತ್ತಮ ಮಾರ್ಗ. ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳು ವಿಟಮಿನ್ ಎ  ಹೊಂದಿರುತ್ತದೆ. ವಿಟಾಮಿನ್​ ಎ ಬಳಕೆಯಿಂದ ಚರ್ಮದ ಆರೋಗ್ಯ ಉತ್ತಮವಾಗುತ್ತದೆ.

ಮೊಸರು: ಮೊಸರಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಹೀಗಾಗಿ, ಮೊಡವೆಕಾರಕಗಳನ್ನು ಮೊಸರು ಸೇವನೆಯಿಂದ ನಾಶಮಾಡಬಹುದು.

ವಾಲ್​ನಟ್ಸ್​: ಇದನ್ನು ನಿಯಮಿತವಾಗಿ ತಿನ್ನುವುದರಿಂದ ಚರ್ಮದ ಮೃದುತ್ವ ಹೆಚ್ಚುತ್ತದೆ. ವಾಲ್​ನಟ್​ ಎಣ್ಣೆ ಲಿನೋಲಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಚರ್ಮದ ರಚನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸೇಬು: ಸೇಬುಗಳು ಸಾಕಷ್ಟು ಪೆಕ್ಟಿನ್ ಹೊಂದಿರುತ್ತವೆ. ಪೆಕ್ಟಿನ್​ ಮೊಡವೆಗಳ ಶತ್ರು. ಆದ್ದರಿಂದ, ಪೆಕ್ಟಿನ್ ಅಂಶ ಹೆಚ್ಚಿದ್ದರೆ ಮೊಡವೆಗಳು ಏಳುವುದಿಲ್ಲ.

ಕಫ-ಜ್ವರದಿಂದ ಮುಕ್ತರಾಗಬೇಕೆ? ಚಳಿಗಾಲದಲ್ಲಿ ತಪ್ಪದೇ ಇವನ್ನು ಸೇವಿಸಿ