ಮಳೆಗೆ ಕೊಚ್ಚಿ ಹೋದ ಬೆಳೆ, ರೈತನ ಗೋಳು ಕೇಳೋರು ಯಾರು?
ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಹೀಗೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ನೀರು ಹೊಲಗಳಿಗೂ ನುಗ್ಗಿ ಬೆಳೆಗಳೆಲ್ಲಾ ಜಲಾವೃತಗೊಂಡಿವೆ. ಎಲ್ಲಿ ನೋಡಿದರೂ ನೀರೇ ನೀರು ಕಾಣುತ್ತಿದೆ. ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿ ಮತ್ತಿತರ ಕಡೆ ಜಮೀನುಗಳಲ್ಲಿ ಹರಿಯುತ್ತಿರೋ ನೀರಿನಿಂದಾಗಿ ಗೇಣುದ್ದದ ಬೆಳೆಗಳು ಕೊಚ್ಚಿ ಹೋಗುತ್ತಿವೆ. ತೊಗರಿ, ಹೆಸರು, ಉದ್ದು, ಎಳ್ಳು ಇತ್ಯಾದಿ ಬಿತ್ತನೆ ಮಾಡಿದ್ದ ರೈತರು ಈಗ ಮಳೆ ನಿರಂತರವಾಗಿ ಮುಂದುವರಿದಿರೋದ್ರಿಂದ ಅಪಾರ ಪ್ರಮಾಣದ ಹಾನಿಯನ್ನು ಅನುಭವಿಸುವಂತಾಗಿದೆ.
ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಹೀಗೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ನೀರು ಹೊಲಗಳಿಗೂ ನುಗ್ಗಿ ಬೆಳೆಗಳೆಲ್ಲಾ ಜಲಾವೃತಗೊಂಡಿವೆ. ಎಲ್ಲಿ ನೋಡಿದರೂ ನೀರೇ ನೀರು ಕಾಣುತ್ತಿದೆ.
ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿ ಮತ್ತಿತರ ಕಡೆ ಜಮೀನುಗಳಲ್ಲಿ ಹರಿಯುತ್ತಿರೋ ನೀರಿನಿಂದಾಗಿ ಗೇಣುದ್ದದ ಬೆಳೆಗಳು ಕೊಚ್ಚಿ ಹೋಗುತ್ತಿವೆ. ತೊಗರಿ, ಹೆಸರು, ಉದ್ದು, ಎಳ್ಳು ಇತ್ಯಾದಿ ಬಿತ್ತನೆ ಮಾಡಿದ್ದ ರೈತರು ಈಗ ಮಳೆ ನಿರಂತರವಾಗಿ ಮುಂದುವರಿದಿರೋದ್ರಿಂದ ಅಪಾರ ಪ್ರಮಾಣದ ಹಾನಿಯನ್ನು ಅನುಭವಿಸುವಂತಾಗಿದೆ.