ನಟ, ಗಾಯಕ ದಿಲ್ಜಿತ್​ ದೋಸಾಂಜ್​ ಹಾಸ್ಯಪ್ರಜ್ಞೆ ಅಭಿಮಾನಿಗಳು ಫಿದಾ: ಇಲ್ಲಿವೆ ಅವರ ಫನ್ನಿ ಪೋಸ್ಟ್​ಗಳು

| Updated By: ರಾಜೇಶ್ ದುಗ್ಗುಮನೆ

Updated on: Jan 07, 2021 | 4:29 PM

ದಿಲ್ಜಿತ್​ ದೋಸಾಂಜ್ ಕೂಡ ಸೋಷಿಯಲ್​ ಮೀಡಿಯಾಗಳಲ್ಲಿ ತುಂಬ ಆ್ಯಕ್ಟಿವ್​. ಕೆಲವು ಬಾರಿ ಫನ್ನಿ ಪೋಸ್ಟ್​ಗಳಿಂದ ಅಭಿಮಾನಿಗಳನ್ನು ಮನರಂಜಿಸಿದರೆ, ಇನ್ನೂ ಕೆಲವು ಬಾರಿಯಂತೂ ತಮ್ಮದೇ ಮೀಮ್ಸ್​ಗಳುಳ್ಳ ವಿಚಿತ್ರ ಪೋಸ್ಟ್​ಗಳನ್ನು ಹಾಕುವ ಮೂಲಕ ದಿಗ್ಭ್ರಮೆಯಾಗುವಂತೆ ಮಾಡಿದ್ದಾರೆ. ಅಂಥ ಪೋಸ್ಟ್​ಗಳು ಸಿಕ್ಕಾಪಟೆ ವೈರಲ್​ ಆಗಿವೆ ಕೂಡ.

ನಟ, ಗಾಯಕ ದಿಲ್ಜಿತ್​ ದೋಸಾಂಜ್​ ಹಾಸ್ಯಪ್ರಜ್ಞೆ ಅಭಿಮಾನಿಗಳು ಫಿದಾ: ಇಲ್ಲಿವೆ ಅವರ ಫನ್ನಿ ಪೋಸ್ಟ್​ಗಳು
ದಿಲ್ಜಿತ್​ ದೋಸಾಂಜ್​
Follow us on

ಪಂಜಾಬಿ ನಟ, ಗಾಯಕ ದಿಲ್ಜಿತ್ ದೋಸಾಂಜ್ ನಿನ್ನೆ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದಿಲ್ಜಿತ್ ಕೇವಲ ಪಂಜಾಬ್​ ಸಿನಿಕ್ಷೇತ್ರದಲ್ಲಷ್ಟೇ ಅಲ್ಲ, ಬಾಲಿವುಡ್​ನಲ್ಲೂ ಚಾಪು ಮೂಡಿಸಿದವರು. ವಿಡಿಯೋ ಸಾಂಗ್​​ಗಳಲ್ಲಿ, ಸಿನಿಮಾಗಳಲ್ಲಿ ತಮ್ಮ ಹಾಡು, ಅದಕ್ಕೆ ತಕ್ಕಂತ ಪ್ರದರ್ಶನಗಳಿಂದ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಇಂಥ ಬಹುಮುಖ ಪ್ರತಿಭೆ ದಿಲ್ಜಿತ್​​ ದೋಸಾಂಜ್​ರಿಗೆ ನಿನ್ನೆ ಸಿಕ್ಕಾಪಟೆ ಅಭಿಮಾನಿಗಳು ಬರ್ತ್​ ಡೇ ವಿಶ್​ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ದಿಲ್ಜಿತ್​ರ ವಿವಿಧ ಫೋಟೋ, ಕಾಮಿಡಿ ದೃಶ್ಯಗಳ ಫೋಟೋ ಹಾಕಿ, ನೆಚ್ಚಿನ ನಟ, ಗಾಯಕನಿಗೆ ಶುಭ ಹಾರೈಸಿದ್ದಾರೆ.

ಫನ್ನಿ ಪೋಸ್ಟ್ ಹಾಕ್ತಾರೆ ದಿಲ್ಜಿತ್​
ಇನ್ನು ದಿಲ್ಜಿತ್​ ದೋಸಾಂಜ್ ಕೂಡ ಸೋಷಿಯಲ್​ ಮೀಡಿಯಾಗಳಲ್ಲಿ ತುಂಬಾನೇ ಆ್ಯಕ್ಟಿವ್​. ಕೆಲವು ಬಾರಿ ಫನ್ನಿ ಪೋಸ್ಟ್​ಗಳಿಂದ ಅಭಿಮಾನಿಗಳನ್ನು ಮನರಂಜಿಸಿದರೆ, ಇನ್ನೂ ಕೆಲವು ಬಾರಿಯಂತೂ ತಮ್ಮದೇ ಮೀಮ್ಸ್​ಗಳುಳ್ಳ ವಿಚಿತ್ರ ಪೋಸ್ಟ್​ಗಳನ್ನು ಹಾಕುವ ಮೂಲಕ ದಿಗ್ಭ್ರಮೆಯಾಗುವಂತೆ ಮಾಡಿದ್ದಾರೆ. ಅಂಥ ಪೋಸ್ಟ್​ಗಳು ಸಿಕ್ಕಾಪಟೆ ವೈರಲ್​ ಆಗಿವೆ ಕೂಡ.

ಹಾಗೇ ಸಿಕ್ಕಾಪಟೆ ನಗು ಹುಟ್ಟಿಸಿದ ದಿಲ್ಜಿತ್​ ಅವರ ಒಂದಷ್ಟು ಸೋಷಿಯಲ್​ ಮೀಡಿಯಾ ಪೋಸ್ಟ್​ಗಳು ಇಲ್ಲಿವೆ ನೋಡಿ..

ನಾವು ಚಿಕ್ಕವರಿದ್ದಾಗ ಸಾಮಾನ್ಯವಾಗಿ ನಮ್ಮ ಮನೆಗೆ ಬರುವ ಅತಿಥಿಗಳು ಹೋಗುವಾಗ ಹಣ ಕೊಡುವ ಒಂದು ಪದ್ಧತಿಯಿದೆ. ಅದಕ್ಕೆ ಸಂಬಂಧಪಟ್ಟಂತೆ ದಿಲ್ಜಿತ್​ ತಮ್ಮದೇ ಎಕ್ಸ್​ಪ್ರೆಶನ್​ ಇರುವ ಮೀಮ್ಸ್​ವೊಂದನ್ನು ಹಾಕಿ, ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ಇದು..

 

ಕೆಲವು ನಟರು, ಸೆಲೆಬ್ರಿಟಿಗಳು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ವರ್ಕೌಟ್​ ವಿಡಿಯೋಗಳನ್ನು ಶೇರ್​ ಮಾಡುವುದು ಸಾಮಾನ್ಯ. ಅದಕ್ಕೆ ಟಾಂಗ್​ ನೀಡುವಂತ ಮೀಮ್ಸ್​ ಫೊಟೋವನ್ನು ದಿಲ್ಜಿತ್​ ಹಾಕಿದ್ದರು. ಯಾರದ್ದೋ ದೇಹಕ್ಕೆ ತಮ್ಮ ಮುಖ ಅಂಟಿಸಿ, ಕೈಯಲ್ಲೊಂದು ಪ್ಲೇಕಾರ್ಡ್ ಹಿಡಿದ ಪೋಸ್ಟ್ ಹಾಕಿದ್ದರು. ಆ ಪ್ಲೇಕಾರ್ಡ್ ಮೇಲೆ, stop posting your home workouts (ಮನೆಯಲ್ಲಿ ಮಾಡುವ ವರ್ಕೌಟ್​ ಗಳ ಪೋಸ್ಟ್​ಗಳನ್ನು ಹಾಕುವುದು ನಿಲ್ಲಿಸಿ) ಎಂದು ಬರೆದುಕೊಂಡಿತ್ತು. ಈ ಫೋಟೋವಂತೂ ಸಿಕ್ಕಾಪಟೆ ವೈರಲ್ ಆಗಿತ್ತು.

 

ಕಳೆದ ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಕುಟುಂಬ ಸಮೇತ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಇವಾಂಕಾ ಟ್ರಂಪ್​ ತಾಜ್​ಮಹಲ್​ಗೆ ಭೇಟಿ ನೀಡಿದ್ದರು. ಅವರು ತಾಜ್​ಮಹಲ್​ನ ಎದುರಿನ ಕಲ್ಲುಬೆಂಚ್​ ಮೇಲೆ ಕುಳಿತಿದ್ದ ಫೋಟೋವನ್ನು ದಿಲ್ಜಿತ್​ ತಿರುಚಿ ಒಂದು ಮೀಮ್ಸ್ ಪೋಸ್ಟ್ ಮಾಡಿದ್ದರು. ಕಲ್ಲುಬೆಂಚ್​ ಮೇಲೆ ಇವಾಂಕಾ ಕುಳಿತಿದ್ದಾರೆ. ಅವರ ಪಕ್ಕ ತಾವು, ತಮ್ಮ ಎಡಗಾಲನ್ನ ಇವಾಂಕಾ ಕಾಲಿನ ಮೇಲೆ ಹಾಕಿಕೊಂಡು ಕುಳಿತಿರುವಂತೆ ಫೋಟೋಶಾಪ್​ ಮಾಡಿದ ಫೊಟೋ ಇದು. ಈ ಪೋಸ್ಟ್​ನ್ನು ನೋಡಿದ ಅಭಿಮಾನಿಗಳು ಸಿಕ್ಕಾಪಟೆ ನಕ್ಕಿದ್ದರು. ತುಂಬ ವೈರಲ್ ಕೂಡ ಆಗಿತ್ತು.

 

ಇಸ್ರೇಲಿ ನಟಿಯ ಕಾಲೆಳೆದಿದ್ದರು
ದಿಲ್ಜಿತ್ ಹಾಸ್ಯಪ್ರವೃತ್ತಿ ಎಷ್ಟಿದೆ ಎಂದರೆ, ಸೋಷಿಯಲ್​ ಮೀಡಿಯಾದಲ್ಲಿ ಬೇರೆ ಸೆಲೆಬ್ರಿಟಿಗಳ ಕೆಲವು ಪೋಸ್ಟ್​ಗಳಿಗೆ ಎಪಿಕ್ ಎನ್ನಿಸುವ ಕಾಮೆಂಟ್​ಗಳನ್ನು ಹಾಕುವ ಮೂಲಕವೂ ಗಮನ ಸೆಳೆದಿದ್ದಾರೆ. ಕೆಲವು ದಿನಗಳ ಹಿಂದೆ ಇಸ್ರೇಲಿ ನಟಿ, ವಂಡರ್ ವುಮೆನ್​ ಗಾಲ್ ಗಡೊಟ್, ತಾವು ಸಲಾಡ್ ಮಾಡುತ್ತಿರುವ ಫೋಟೋವೊಂದನ್ನು ಇನ್ಸ್ಟಾದಲ್ಲಿ ಹಾಕಿದ್ದರು. ಅದಕ್ಕೆ ಕಾಮೆಂಟ್ ಮಾಡಿದ್ದ ಪಂಜಾಬಿ ಗಾಯಕ, ನನಗೋಸ್ಕರ ಹೂಕೋಸಿನ (ಕ್ವಾಲಿಫ್ಲವರ್) ಪರೋಟ ಮಾಡಿಕೊಡಿ ಎಂದಿದ್ದರು. ಆ ಸ್ಕ್ರೀನ್​ಶಾಟ್​ಗಳನ್ನು ದಿಲ್ಜಿತ್ ಅಭಿಮಾನಿಗಳು ಭರ್ಜರಿ ವೈರಲ್ ಮಾಡಿಕೊಂಡಿದ್ದರು.

 

ಕೈಲಿ ಜೆನ್ನರ್
ಹಾಲಿವುಡ್​ ನಟಿ, ವಿಶ್ವದ ಕಿರಿಯದ ಬಿಲಿಯನೇರ್​ ಎಂದು ಖ್ಯಾತಿ ಪಡೆದಿರುವ ಕೈಲಿ ಜೆನ್ನರ್​ಗೆ ಅತಿದೊಡ್ಡ ಸಂಖ್ಯೆಯಲ್ಲಿ ಫಾಲೋವರ್ಸ್​, ಅಭಿಮಾನಿಗಳು ಇದ್ದಾರೆ. ಇವರ ವಿಚಾರದಲ್ಲೂ ಸಹ ದಿಲ್ಜಿತ್​ ಮೀಮ್ಸ್ ಮಾಡಿದ್ದರು. ತಾವು ಕೈಲಿ ಜೆನ್ನರ್ ಸೊಂಟವನ್ನು ಬಳಸಿರುವಂತೆ ಎನಿಮೇಟೆಡ್​ ಚಿತ್ರವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡ ಅವರು, ನಾನು ಡು ಯು ನೋ (Do You Know..) ಹಾಡು ಮಾಡಿದ್ದು ನಿಜಕ್ಕೂ ಕೈಲಿ ಜೆನ್ನರ್​ಗೋಸ್ಕರ ಎಂದು ಹೇಳಿದ್ದರು. ಇದೂ ಕೂಡ ತುಂಬ ವೈರಲ್ ಆಗಿತ್ತು.