Horoscope: ಮೇಷದಿಂದ ಮೀನದವರೆಗೆ ದ್ವಾದಶರಾಶಿಗಳ ಇಂದಿನ ದಿನಭವಿಷ್ಯ
Dina Bhavishya: ಫೆಬ್ರವರಿ 06, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನಭವಿಷ್ಯ.

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಕೃಷ್ಣಪಕ್ಷ, ನವಮಿ ತಿಥಿ, ಶನಿವಾರ, ಫೆಬ್ರವರಿ 6, 2021. ಅನೂರಾಧ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 9:37ರಿಂದ ಬೆಳಿಗ್ಗೆ 11:02. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.46. ಸೂರ್ಯಾಸ್ತ: ಸಂಜೆ 6.13
ತಾ.06-02-2021 ರ ಶನಿವಾರ ರಾಶಿಭವಿಷ್ಯ
ಮೇಷ: ಸಾಲಗಾರರ ತೊಂದರೆ ಇರುವದು. ಅನಾರೋಗ್ಯ, ವ್ಯವಹಾರದಲ್ಲಿ ಹಾನಿ ಕಂಡುಬರುವದು. ನಿಧಾನಗತಿಯ ಕೆಲಸದಿಂದ ಮನೋಕ್ಷೋಭೆ ಉಂಟಾಗುವ ಸಂಭವವಿದೆ. ಅದೃಷ್ಟ ಸಂಖ್ಯೆ: 6
ವೃಷಭ: ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೊಟ್ಟಸಾಲ ಮರುಪಾವತಿಯಾಗುವದು. ಅದೃಷ್ಟ ಸಂಖ್ಯೆ: 8
ಮಿಥುನ: ಆದಾಯ ಹೆಚ್ಚುವದು. ವ್ಯವಹಾರಿಕ ಏಳ್ಗೆ ಇರುವದು. ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವದು. ಶಾಂತಚಿತ್ತರಾಗಿ ವ್ಯವಹರಿಸಿರಿ. ಕೆಲಸದಲ್ಲಿ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವದು. ಅದೃಷ್ಟ ಸಂಖ್ಯೆ: 3
ಕರ್ಕ: ಮಹತ್ವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಯೋಗವಿದೆ. ವಿವಿಧ ಮೂಲಗಳಿಂದ ಸಹಾಯ ದೊರೆಯುವದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ: 1
ಸಿಂಹ: ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವದು. ಅದೃಷ್ಟ ಸಂಖ್ಯೆ: 4
ಕನ್ಯಾ: ಉದರಬೇನೆ ಬರುವ ಸಾಧ್ಯತೆ ಇದೆ ಆರೋಗ್ಯದ ಕಾಳಜಿವಹಿಸಿ. ಬಂಧುಮಿತ್ರರ ಭೇಟಿ, ಮನೆಯಲ್ಲಿ ಮಂಗಲಕಾರ್ಯ ಜರುಗುವ ಯೋಗವಿದೆ. ಕೋರ್ಟನಲ್ಲಿರುವ ವ್ಯಾಜ್ಯಗಳು ಕೊನೆಗೊಳ್ಳುವವು. ಅದೃಷ್ಟ ಸಂಖ್ಯೆ: 7
ತುಲಾ: ಆಗುವುದೆಲ್ಲ ಒಳಿತೆಂಬ ಭಾವನೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರದ ನೆಲೆ ದೊರಕಿ ಹರ್ಷ. ಮಹಿಳೆಯರಿಗೆ ಮನೆಯಲ್ಲಿನ ಆಂತರಿಕ ವಿರಸ ನೀಗಿ ಸೌಹಾರ್ದತೆ. ನೂತನ ವಿವಾದ ಹುಟ್ಟುಹಾಕದ ಹಾಗೆ ತಾಳ್ಮೆಯಡಿ ವರ್ತನೆ. ಅದೃಷ್ಟ ಸಂಖ್ಯೆ: 9
ವೃಶ್ಚಿಕ: ವ್ಯವಹಾರಿಕ ಸಂಪರ್ಕಗಳು ಹೆಚ್ಚುವವು ಅದರಂತೆ ಧನದ ಮೂಲಗಳೂ ಹೆಚ್ಚುವವು. ಸಾಲ ಮರುಪಾವತಿಯಾಗುವದು. ಮನೆಯಲ್ಲಿ ನೆಮ್ಮದಿ ಇರುವದು. ಅವಿವಾಹಿತರಿಗೆ ಕಂಕಣಬಲ ಕೂಡಿಬರುವದು. ಅದೃಷ್ಟ ಸಂಖ್ಯೆ: 3
ಧನು: ನೆನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆಯುವದು. ಮಾನಸಿಕ ಉತ್ಸಾಹ ಕಂಡುಬರುವದು. ಆತ್ಮೀಯರಿಗೆ ಉನ್ನತ ಅಧಿಕಾರ ದೊರೆಯುವದು. ಕಾರಣಾಂತರ ಅಧಿಕ ಖರ್ಚುಬರಬಹುದು. ಅದೃಷ್ಟ ಸಂಖ್ಯೆ: 1
ಮಕರ: ಸಹನೆ ಇಲ್ಲದ ಆತುರದ ನಡೆಯಿಂದ ಹಾನಿ ಸಂಭವ ಎಚ್ಚರಿಕೆ ವಹಿಸಿರಿ. ಅನೀರೀಕ್ಷಿತವಾಗಿ ಬರುವ ವಿಘ್ನಗಳು ತಾವಾಗಿಯೇ ಪರಿಹಾರ ಕಾಣುವವು. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅದೃಷ್ಟ ಸಂಖ್ಯೆ: 5
ಕುಂಭ: ಕುಟುಂಬದಲ್ಲಿ ವಾದ ಬೇಡ. ಉತ್ತಮ ಸಾಧನೆಯಿಂದ ಬಂಧುವರ್ಗದ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿಯ ಚತುರತೆ ಒಳ್ಳೆಯ ಆದಾಯವನ್ನು ತಂದು ಕೊಡುವದು. ಸಮತೋಲಿತ ಜೀವನವಿರುವದು. ಅದೃಷ್ಟ ಸಂಖ್ಯೆ: 6
ಮೀನ: ಯೋಜನೆಗಳಿಗೆ ಪೂರ್ವ ತಯಾರಿ ಮಾಡುವ ಅಗತ್ಯತೆ ಕಂಡುಬರುವದು. ಹಣಕಾಸಿನ ವಿಷಯದಲ್ಲಿ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವದು ಒಳಿತು. ಅದೃಷ್ಟ ಸಂಖ್ಯೆ: 9

ಡಾ. ಬಸವರಾಜ್ ಗುರೂಜಿ
(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 9972848937)
Published On - 1:19 pm, Sat, 6 February 21