ದಿನ ಭವಿಷ್ಯ | ವೃಶ್ಚಿಕ ರಾಶಿಯವರಿಗಿಂದು ಆಸಕ್ತಿ ಆಪತ್ತು ತರುವ ಸಂಭವವಿದೆ

Today Horoscope ಫೆಬ್ರವರಿ 11, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

ದಿನ ಭವಿಷ್ಯ | ವೃಶ್ಚಿಕ ರಾಶಿಯವರಿಗಿಂದು ಆಸಕ್ತಿ ಆಪತ್ತು ತರುವ ಸಂಭವವಿದೆ
ದಿನ ಭವಿಷ್ಯ
ಆಯೇಷಾ ಬಾನು Edited By:

Updated on: Feb 12, 2021 | 9:14 AM

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಕೃಷ್ಣಪಕ್ಷ, ಅಮಾವಾಸ್ಯೆ ತಿಥಿ, ಗುರುವಾರ, ಫೆಬ್ರವರಿ 11, 2021. ಶ್ರವಣ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 1.55 ರಿಂದ ಸಂಜೆ 3.21. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.44. ಸೂರ್ಯಾಸ್ತ: ಸಂಜೆ 6.15.

ತಾ.11-02-2021 ರ ಗುರುವಾರದ, ಅಮಾವಾಸ್ಯೆಯ ರಾಶಿ ಭವಿಷ್ಯ

ಮೇಷ: ಹಿತವಾದ ಮಾತುಗಳು ಗೌರವವನ್ನು ವೃದ್ಧಿಸುವವು. ಆರ್ಥಿಕ ಸಂಕಷ್ಟಗಳು ಎದುರಾಗುವವು. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ. ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ. ಶುಭ ಸಂಖ್ಯೆ: 8

ವೃಷಭ: ಆಸ್ತಿ ಖರೀದಿ ಅಥವಾ ಮಾರಾಟದ ವ್ಯವಹಾರಗಳು ಕುದುರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಯೋಗ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಯೋಗವಿದೆ. ಶುಭ ಸಂಖ್ಯೆ: 3

ಮಿಥುನ: ಎಲ್ಲವೂ ಇದ್ದಂತೆ ಇರಲಿ ಎಂಬ ಮನೋಭಾವನೆ ಇರುವುದು. ಕೆಲಸದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ವಿದೇಶ ಪ್ರಯಾಣದ ಯೋಗವಿದೆ. ಉದ್ಯೋಗದಲ್ಲಿ ಪ್ರಗತಿ ಮುಂದುವರೆಯುವುದು. ಶುಭ ಸಂಖ್ಯೆ: 9

ಕರ್ಕ: ಮಾತಿನಂತೆಯೇ ಎಲ್ಲವೂ ನಡೆಯುವುದಿಲ್ಲ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ದೊರೆಯುವುದು. ಲಾಭದಾಯಕ ಹುದ್ದೆ ದೊರೆಯುವುದು. ಶುಭ ಸಂಖ್ಯೆ: 2

ಸಿಂಹ: ಆಸ್ತಿ ವಿಷಯಕ್ಕೆ ಸಂಬಂಧಿಸಿಂತೆ ತೊಂದರೆಯಾಗುವ ಸಂಭವವಿದೆ. ಆದಾಯ ಉತ್ತಮವಾಗಿರುವುದು. ನೌಕರಿಯಲ್ಲಿ ಅಸಹಕಾರ ಎದುರಿಸಬೇಕಾಗುವುದು. ಗ್ರಹಸೌಖ್ಯವಿದ್ದರೂ ಮಾನಸಿಕ ನೆಮ್ಮದಿ ಇರಲಾರದು. ಶುಭ ಸಂಖ್ಯೆ: 7

ಕನ್ಯಾ: ಧನ ಅಪವ್ಯಯವಾಗುವ ಲಕ್ಷಣಗಳಿವೆ ಆದರೆ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವುದು. ಶ್ರಮಿಕವರ್ಗಕ್ಕೆ ಉನ್ನತಿ ಇರುವುದು. ಕೌಟುಂಬಿಕ ಸಂಬಂಧಗಳು ಫಲಿಸುವವು. ಋಣಪರಿಹಾರವಾಗುವುದು. ಶುಭ ಸಂಖ್ಯೆ: 4

ತುಲಾ: ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸಿ. ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವಿರಿ. ಸಾಮಜಿಕ ಗೌರವಗಳು ಅರಸಿಕೊಂಡು ಬರಲಿವೆ. ಮಾಲೀಕತ್ವದ ಆಸ್ತಿ ಕೈತಪ್ಪದಂತೆ ಎಚ್ಚರಿಕೆ ವಹಿಸಿರಿ. ಧನದ ಅಪವ್ಯಯ ಆಗದಂತೆ ನೋಡಿಕೊಳ್ಳಿ. ಶುಭ ಸಂಖ್ಯೆ: 6

ವೃಶ್ಚಿಕ: ಕುಟುಂಬದಲ್ಲಿ ಮನಸ್ತಾಪ ಕಂಡುಬರುವುದು. ಗೌಪ್ಯ ವ್ಯವಹಾರಗಳನ್ನು ಸರಿದೂಗಿಸಲು ಸಾಧ್ಯವಾಗದೇ ಪರಿತಪಿಸುವಿರಿ. ಆಸಕ್ತಿ ಆಪತ್ತು ತರುವ ಸಂಭವವಿದೆ. ಮಹತ್ವದ ನಿರ್ಧಾರಗಳಿಗೆ ಇದು ಸೂಕ್ತಕಾಲವಲ್ಲ. ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 5

ಧನು: ಹೊಸ ಆಲೋಚನೆಯೊಂದು ಕಾರ್ಯರೂಪಕ್ಕೆ ಬರುವುದು. ಸಹವರ್ತಿಗಳ ಅಸಹಕಾರ ಇದ್ದರೂ ತೊಂದರೆ ಆಗಲಾರದು. ಅನಪೇಕ್ಷಿತ ಸ್ಥಾನ ಬದಲಾವಣೆ ಆಗುವ ಸಾಧ್ಯತೆ ಇದೆ. ಸರಿಯಾದ ಧ್ಯೇಯದಿಂದ ಸಮಾಧಾನ ಇರುವುದು. ಶುಭ ಸಂಖ್ಯೆ: 3

ಮಕರ: ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಸಹೋದರ ಸಹಕಾರ ತೋರುವುದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 8

ಕುಂಭ: ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪಧನಲಾಭವಾದರೂ ಹಳೆಯ ಸಾಲ ತೀರುವದು. ವ್ಯಾಪಾರದಲ್ಲಿ ಅಭಿವೃದ್ಧಿಯಾಗುವದು. ವಿವಾಹ ಅಪೇಕ್ಷಿತರಿಗೆ ಕಂಕಣಬಲ ಕೂಡಿಬರುವದು. ಶುಭ ಸಂಖ್ಯೆ: 7

ಮೀನ: ನಿಶ್ಚಿತ ಆರ್ಥಿಕ ಸ್ಥಿತಿ ಇರುವದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಶುಭ ಸಂಖ್ಯೆ: 4

ಬಸವರಾಜ ಗುರೂಜಿ

(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 9972848937)

Published On - 6:53 am, Thu, 11 February 21

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us