Horse Rescued From Well ಗ್ರಾಮದ ಬಳಿ ಪಾಳು ಬಾವಿಗೆ ಬಿದ್ದಿದ್ದ ಕುದುರೆಯ ರಕ್ಷಣೆ
Horse Rescued From Well ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕುದುರೆಯೊಂದು ಪಾಳು ಬಾವಿಗೆ ಬಿದ್ದಿತ್ತು. ಬುಧವಾರ ಈ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಕುದುರೆಗೆ ಹುಲ್ಲು ಹಾಕುವ ಮೂಲಕ ಆಹಾರ ತಲುಪಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.

ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕುದುರೆಯೊಂದು ಪಾಳು ಬಾವಿಗೆ ಬಿದ್ದಿತ್ತು. ಬುಧವಾರ ಈ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಕುದುರೆಗೆ ಹುಲ್ಲು ಹಾಕುವ ಮೂಲಕ ಆಹಾರ ತಲುಪಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಜತೆಗೆ ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.
ನಿನ್ನೆ ರಾತ್ರಿ ಆಗಮಿಸಿದ ಹೂವಿನ ಹಡಗಲಿ ಅಗ್ನಿಶಾಮಕ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಕಾರ್ಯಾಚರಣೆ ನಡೆಸಿ ಕುದುರೆಯನ್ನ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ. ಇನ್ನು ವೇಗವಾಗಿ ಓಡಿಬಂದು ಕುದುರೆ ಪಾಳು ಬಾವಿಗೆ ಬಿದ್ದಿರೋದ್ರಿಂದ ಕುದುರೆಯ ಮುಂಗಾಲು ಮುರಿದಿದೆ. ಕುದುರೆಗೆ ಚಿಕಿತ್ಸೆ ನೀಡಲು ಈ ವಿಚಾರವನ್ನು ಪಶುವೈದ್ಯರಿಗೆ ತಿಳಿಸಲಾಗಿದೆ. ಉತ್ತಂಗಿ ಗ್ರಾಮದ ಜಮೀನುವೊಂದರ ಪಾಳುಬಾವಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಗ್ರಾಮಸ್ಥರು ಕುದುರೆಯ ರಕ್ಷಣ ಮಾಡಿದ್ದು ಅದರ ಚಿಕಿತ್ಸೆಗೆ ಮುಂದಾಗಿದ್ದಾರೆ.

ಪಾಳು ಬಾವಿಗೆ ಬಿದ್ದ ಕುದುರೆಯನ್ನು ರಕ್ಷಿಸುತ್ತಿರುವ ದೃಶ್ಯ

ಪಾಳು ಬಾವಿಗೆ ಬಿದ್ದ ಕುದುರೆಯನ್ನು ರಕ್ಷಿಸುತ್ತಿರುವ ದೃಶ್ಯ
ಇದನ್ನೂ ಓದಿ: Uttarakhand Glacier Burst: ಸುರಂಗದಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ; ಸೇನಾ ಕಾರ್ಯಾಚರಣೆಗೆ ದೇಶದ ಸೆಲ್ಯೂಟ್




