AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

I ticket, E ticket: ಐ-ಟಿಕೆಟ್, ಇ-ಟಿಕೆಟ್ -IRCTC ರೈಲು ಟಿಕೆಟ್ ಕಾಯ್ದಿರಿಸುವ ಮೊದಲು, ಈ ಎರಡು ಏನೆಂದು ತಿಳಿಯಿರಿ

ಇ-ಟಿಕೆಟ್ ಎಂದರೆ ಎಲೆಕ್ಟ್ರಾನಿಕ್ ಮುದ್ರಿತ ಟಿಕೆಟ್. ಪ್ರಯಾಣಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಟಿಕೆಟ್ ಅನ್ನು ಮುದ್ರಿಸಿಕೊಳ್ಳಬಹುದು ಅಂದರೆ ಕಾಪಿ ಡೌನ್​​​ಲೋಡ್​​ ಮಾಡಿಕೊಳ್ಳಬಹುದು. ಇ-ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮನೆಯಿಂದ ಅಥವಾ ಯಾವುದೇ ಕಂಪ್ಯೂಟರ್ ಸೆಂಟರ್​​​ನಿಂದ ಬುಕ್ ಮಾಡಬಹುದು.

I ticket, E ticket: ಐ-ಟಿಕೆಟ್, ಇ-ಟಿಕೆಟ್ -IRCTC ರೈಲು ಟಿಕೆಟ್ ಕಾಯ್ದಿರಿಸುವ ಮೊದಲು, ಈ ಎರಡು ಏನೆಂದು ತಿಳಿಯಿರಿ
ಇ-ಟಿಕೆಟ್, ಐ-ಟಿಕೆಟ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Apr 27, 2023 | 5:38 PM

Share

ಈ ಡಿಜಿಟಲ್ ಯುಗದಲ್ಲಿ ಈಗ ಬಹಳಷ್ಟು ರೈಲ್ವೆ ಪ್ರಯಾಣಿಕರು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಬಯಸುತ್ತಾರೆ. ಭಾರತೀಯ ರೈಲ್ವೆ ಇಲಾಖೆಯೂ (Indian Railways) ಪ್ರಯಾಣಿಕರಿಗೆ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು (train ticket) ಕಾಯ್ದಿರಿಸುವ (reservation) ಅವಕಾಶವನ್ನು ನೀಡಿದೆ ( ticket booking). ಅದುವೇ ಇ-ಟಿಕೆಟ್ ಅಥವಾ ಐ-ಟಿಕೆಟ್ ಆಗಿದೆ. ಇಂದು ನಾವು ಎರಡರ ನಡುವಿನ ವ್ಯತ್ಯಾಸವನ್ನು ಗಮನಿಸೋಣ . ನೀವು ರೈಲಿನಲ್ಲಿ ಪ್ರಯಾಣಿಸುವವರಾಗಿದ್ದರೆ ಇ-ಟಿಕೆಟ್, ಐ-ಟಿಕೆಟ್ ಬಗ್ಗೆ ಕೇಳಿರಬೇಕು. ಆದರೆ ಅನೇಕ ಜನರಿಗೆ ಇ-ಟಿಕೆಟ್ ಮತ್ತು ಐ-ಟಿಕೆಟ್ ಎಂದರೇನು ಮತ್ತು ಅವುಗಳ ನಡುವಿನ ವ್ಯತ್ಯಾಸವೇನು? ಎಂಬುದರ ಬಗ್ಗೆ ಅನೇಕ ಜನರಿಗೆ ತಿಳಿದಿರುವುದಿಲ್ಲ. ಈ ಬಗ್ಗೆ ಗೊಂದಲಗಳೂ ಇರುತ್ತವೆ. ಹಾಗಾದರೆ ಇಂದು ಇ-ಟಿಕೆಟ್ ಮತ್ತು ಐ-ಟಿಕೆಟ್ ಎಂದರೇನು ಎಂದು ತಿಳಿಯೋಣ. ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಲು ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವ ಆಯ್ಕೆಯನ್ನು ಪ್ರಯಾಣಿಕರು ಪಡೆಯುತ್ತಾರೆ. ಸಾಮಾನ್ಯವಾಗಿ, ಇ-ಟಿಕೆಟ್ ಮುದ್ರಿತ ಟಿಕೆಟ್ ಆಗಿದ್ದು, ಐ-ಟಿಕೆಟ್ ಅನ್ನು ಭಾರತೀಯ ರೈಲ್ವೆಯ ಪರವಾಗಿ ಪ್ರಯಾಣಿಕರಿಗೆ ಕೊರಿಯರ್ ಮಾಡಲಾಗುತ್ತದೆ.

IRCTC: ಇ-ಟಿಕೆಟ್ ಎಂದರೇನು?

ಇ-ಟಿಕೆಟ್ ಎಂದರೆ ಎಲೆಕ್ಟ್ರಾನಿಕ್ ಮುದ್ರಿತ ಟಿಕೆಟ್. ಪ್ರಯಾಣಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಟಿಕೆಟ್ ಅನ್ನು ಮುದ್ರಿಸಿಕೊಳ್ಳಬಹುದು ಅಂದರೆ ಕಾಪಿ ಡೌನ್​​​ಲೋಡ್​​ ಮಾಡಿಕೊಳ್ಳಬಹುದು. ಇ-ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮನೆಯಿಂದ ಅಥವಾ ಯಾವುದೇ ಕಂಪ್ಯೂಟರ್ ಸೆಂಟರ್​​​ನಿಂದ ಬುಕ್ ಮಾಡಬಹುದು. ಇದರ ಸಿಂಧುತ್ವವು ರೈಲ್ವೆ ಬುಕಿಂಗ್ ಕೌಂಟರ್‌ನಿಂದ ನೀಡಲಾದ ಟಿಕೆಟ್‌ನಂತೆಯೇ ಇರುತ್ತದೆ. ಪ್ರಯಾಣಿಕರು ಇ-ಟಿಕೆಟ್ ಮೂಲಕ ಪ್ರಯಾಣಿಸಲು ತಮ್ಮ ಸರ್ಕಾರಿ ಗುರುತಿನ ಚೀಟಿಯನ್ನು (ಆಧಾರ್ ಕಾರ್ಡ್) ಇಟ್ಟುಕೊಳ್ಳಬೇಕು.

IRCTC: ಐ-ಟಿಕೆಟ್ ಎಂದರೇನು?

ಐ-ಟಿಕೆಟ್ ಅನ್ನು ಭಾರತೀಯ ರೈಲ್ವೆಯ ಪರವಾಗಿ ಪ್ರಯಾಣಿಕರ ವಿಳಾಸಕ್ಕೆ ಕೊರಿಯರ್ ಮಾಡಲಾಗುತ್ತದೆ. ಅಂದರೆ, ಈ ಟಿಕೆಟ್ ಅನ್ನು ಇಂಟರ್‌ನೆಟ್ ಮೂಲಕ ಬುಕ್ ಮಾಡಿದರೂ ಮುದ್ರಿಸಲು ಸಾಧ್ಯವಿಲ್ಲ. IRCTC ವೆಬ್‌ಸೈಟ್‌ನಲ್ಲಿ ನೋಂದಣಿ ಸಮಯದಲ್ಲಿ ನೀವು ನೀಡಿದ ವಿಳಾಸಕ್ಕೆ ರೈಲ್ವೆ ಕೊರಿಯರ್ ಮೂಲಕ ಕಳುಹಿಸಲಾಗುತ್ತದೆ. ಈ ಟಿಕೆಟ್ ಪ್ರಯಾಣಿಕರನ್ನು ತಲುಪಲು ಕನಿಷ್ಠ 48 ಗಂಟೆಗಳು ತೆಗೆದುಕೊಳ್ಳುತ್ತದೆ. ವಿಶೇಷವೆಂದರೆ ಐ-ಟಿಕೆಟ್‌ಗಳನ್ನು ಪ್ರಯಾಣದ ಎರಡು ದಿನಗಳ ಮೊದಲು ಕಾಯ್ದಿರಿಸಬೇಕು. ಟಿಕೆಟ್ ಸ್ವೀಕರಿಸಲು ಮನೆಯಲ್ಲಿಯೇ ಯಾರಾದರೂಬ್ಬರು ಇರಬೇಕು. ಇಲ್ಲದಿದ್ದರೆ ಪ್ರಕ್ರಿಯೆ ವಿಳಂಬವಾಗಬಹುದು.

IRCTC:  ಇದೇ ಎರಡರ ನಡುವಿನ ವ್ಯತ್ಯಾಸ:

ಇ-ಟಿಕೆಟ್‌ಗಳು ಐ-ಟಿಕೆಟ್‌ಗಿಂತ ಸ್ವಲ್ಪ ಅಗ್ಗವಾಗಿದೆ. ಕೊರಿಯರ್ ವೆಚ್ಚವನ್ನು ಸರಿದೂಗಿಸಲು ಐ-ಟಿಕೆಟ್ ವಿತರಣಾ ಶುಲ್ಕವನ್ನು ಸಹ ಭರಿಸಬೇಕಾಗುತ್ತದೆ. ನೀವು ಕ್ಷಣಾರ್ಧದಲ್ಲಿ ಇ-ಟಿಕೆಟ್‌ ಬುಕ್ ಮಾಡಬಹುದು. ಆದರೆ ಐ-ಟಿಕೆಟ್‌ಗಳನ್ನು ಎರಡು ದಿನ ಮುಂಚಿತವಾಗಿ ಕಾಯ್ದಿರಿಸಬೇಕು. ಇ-ಟಿಕೆಟ್‌ಗಳನ್ನು ರದ್ದುಗೊಳಿಸುವುದು ಸುಲಭ. ಇದನ್ನು ಆನ್‌ಲೈನ್‌ನಲ್ಲಿ ಮಾತ್ರ ರದ್ದುಗೊಳಿಸಬಹುದು. ಆದರೆ ಐ-ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ರದ್ದು ಮಾಡಲು ಸಾಧ್ಯವಿಲ್ಲ. ಇನ್ನು ಐ-ಟಿಕೆಟ್ ಗಾಗಿ ರೈಲ್ವೆ ನಿಲ್ದಾಣದಲ್ಲಿರುವ ಸೂಕ್ತ ಕೌಂಟರ್‌ಗೆ ಹೋಗಿ, ಫಾರ್ಮ್ ಅನ್ನು ಭರ್ತಿ ಮಾಡಿ ಪಡೆಯಬೇಕು.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ