Ibrahim Sutar : ನನ್ನವ್ವ ನಂಬಿದ ‘ಕಟಕ್​ ರೊಟ್ಟಿ ಖಾರಾ ಎಣ್ಣಿ’ ಎಂಬ ಮೃಷ್ಟಾನ್ನಕ್ಕೆ ಶರಣುಶರಣೆನ್ನುತ್ತಿದ್ದ ಆ ದಿನಗಳು

Childhood of Ibrahim Sutar : ‘ನಮಗೆ ಬಡತನ ಎಷ್ಟಿತ್ತೆಂದರೆ ಎರಡುಪವಾಸ ಮಲಗುವುದಲ್ಲದೇ, ಉಳಿದ ಹುಡುಗರಿಗೆ ತಾಯಿ ದವಾಖಾನೆಗೆ ತೋರಿಸಲಿಕ್ಕೂ ಅನುಕೂಲವಿರಲಿಲ್ಲ. ಗುಳಿಗೆ ಔಷಧ ತರಲಿಕ್ಕೂ ಅನುಕೂಲವಿರಲಿಲ್ಲ.’ ಇಬ್ರಾಹಿಂ ಸುತಾರ

Ibrahim Sutar : ನನ್ನವ್ವ ನಂಬಿದ ‘ಕಟಕ್​ ರೊಟ್ಟಿ ಖಾರಾ ಎಣ್ಣಿ’ ಎಂಬ ಮೃಷ್ಟಾನ್ನಕ್ಕೆ ಶರಣುಶರಣೆನ್ನುತ್ತಿದ್ದ ಆ ದಿನಗಳು
ಇಬ್ರಾಹಿಂ ಸುತಾರರ ಹಸ್ತಾಕ್ಷರ
Follow us
ಶ್ರೀದೇವಿ ಕಳಸದ
|

Updated on:Feb 05, 2022 | 12:35 PM

ಇಬ್ರಾಹಿಂ ಸುತಾರ | Ibrahim Sutar : (10.5.1940-5.2.2022) :  ಪ್ರವಚನಕಾರ ಇಬ್ರಾಹಿಂ ಸುತಾರರ ತಂದೆ ನಬೀಸಾಹೇಬ, ತಾಯಿ ಆಮೀನಾಬಿ. ತಂದೆಯ ಊರು ರನ್ನನ ಮುಧೋಳ. ತಾಯಿ ಬೆಲ್ಲದ ನಾಡು ಮಹಾಲಿಂಗಪುರದ ‘ನಾಲಬಂದ’ ಮನೆತನದವರು. ಮನೆತನದ ಮೂಲ ಹೆಸರು ‘ಬಿಸ್ತಿ’. ತಂದೆ ಬಡಿಗತನ ಕಾಯಕ ಮಾಡುತ್ತಿದ್ದುದರಿಂದ ಮನೆತನದ ಹೆಸರು ‘ಸುತಾರ’ (ಬಡಿಗೇರ) ಎಂದು ರೂಢಿಯಲ್ಲಿ ಬಂದು ಅದೇ ಮುಂದುವರಿಕೆಯಾಯಿತು. ಇವರು ಹುಟ್ಟಿದ್ದು ಮಹಾಲಿಂಗಪುರದಲ್ಲಿ. ಕಡುಬಡತನದಲ್ಲಿ ಹುಟ್ಟಿದ ಇವರಿಗೆ ನಿಯಮಿತವಾಗಿ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಕಾರಣ, ಇವರ ತಂದೆ ಕೆಲ ತಿಂಗಳು ಲೋಕಾಪುರದ ಪಾಟಿ ಕಾರ್ಖಾನೆಯಲ್ಲಿ, ಕೆಲ ತಿಂಗಳು ಮಹಾಲಿಂಗಪುರದಲ್ಲಿ, ಇನ್ನೂ ಕೆಲ ತಿಂಗಳು ಮುಧೋಳದಲ್ಲಿ ನೆಲೆಸುತ್ತಿದ್ದುದರಿಂದ ಶಾಲೆ ಅಸ್ತವ್ಯಸ್ತವಾಗುತ್ತ ಹೋಯಿತು. ಆದರೆ ಗೆಳೆಯರ ಜೊತೆಗೆ ಆಟವಾಡುತ್ತ ಆ ಊರುಗಳಲ್ಲಿದ್ದ ಉರ್ದು ಶಾಲೆಗೆ ಹೋಗಿಬಂದು ಅಕ್ಷರದ ದಾಹವನ್ನು ತಣಿಸಿಕೊಳ್ಳುತ್ತಿದ್ದರು. ಓದಬೇಕೆನ್ನುವ ಆಸೆ ಅದಮ್ಯವಾಗಿದ್ದರೂ ಪರಿಸ್ಥಿತಿ ಸಹಕರಿಸಲಿಲ್ಲ. ಇಬ್ರಾಹಿಂ ಅವರೇ ದಾಖಲಿಸಿದ ಅವರ ಬಾಲ್ಯದ ನೆನಪುಗಳನ್ನು ಓದಿ.

*

(ಭಾಗ – 1)

ಮೃತ್ಯುವಿನ ಬಾಯಿಯಿಂದ ಪಾರಾದೆ

ಒಂದು ದಿನ ಲೋಕಾಪುರದಲ್ಲಿದ್ದಾಗ ನಾನು ಗೆಳೆಯರ ಜೊತೆಗೆ ಹಳ್ಳಕ್ಕೆ ಸ್ನಾನಕ್ಕೆಂದು ಹೋಗಿದ್ದೆ. ನನಗೆ ಈಜು ಬರುತ್ತಿರಲಿಲ್ಲ. ನನ್ನ ಸ್ನೇಹಿತರು ಈಜಾಡುವುದನ್ನು ನೋಡಿ ನನಗೂ ಹುಮ್ಮಸ್ಸು ಬಂದು ಆಳವಾದ ನೀರಿಗಿಳಿದೆ. ಈಜಲು ಸಾಧ್ಯವಾಗದೇ ಎರಡು-ಮೂರು ಸಲ ಆಳವಾದ ನೀರಿನಲ್ಲಿ ತಳದವರೆಗೆ ಮುಳು-ಮುಳುಗಿ ಎದ್ದೆ. ನನ್ನ ಸ್ನೇಹಿತರು ನಾ ಮುಳುಗಿ ಏಳುವುದನ್ನು ನೋಡಿ ಸತ್ತೇ ಹೋದವೆಂದು ಚೀರಾಡುತ್ತಿದ್ದರು. ಇನ್ನೇನು ಮುಳುಗಿ ಸಾಯವುದರಲ್ಲಿದ್ದೆ, ಆದರೆ ದೈವಾನುಗ್ರಹದಿಂದ ನಾನು ಅದ್ಹೇಗೋ ಬದುಕಿ ಉಳಿದೆ! ಆಗ ನನಗೆ ಆರು ವರ್ಷ ವಯಸ್ಸಿರಬಹುದು.

ಭಯಂಕರ ಬಡತನ ನಮ್ಮ ತಾಯಿ ತಂದೆಗಳಿಗೆ ನಾವು ಹನ್ನೊಂದು ಜನ ಮಕ್ಕಳು. ಆರು ಜನ ಗಂಡುಮಕ್ಕಳು, ಐದು ಜನ ಹೆಣ್ಣುಮಕ್ಕಳು. ಈಗ ನಾವು ಉಳಿದವರು ಇಬ್ಬರು ಮಾತ್ರ, ನಾನು ಹಾಗೂ ನನ್ನ ತಮ್ಮನಾದ ಅಬ್ದುಲ್ ಸುರಾರ. ನನಗಿಂತ ಹೆಣ್ಣು ಮುಂಚೆ ಒಂದು ಗಂಡು ಮಗು ಹುಟ್ಟಿದ ತಕ್ಷಣ ನನ್ನ ತಮ್ಮ ಮೂರನೇಯವನು. ನಂತರದಲ್ಲಿ ನನ್ನ ಕಣ್ಣು ಮುಂದ ನಾಲ್ಕು ತೀರಿಕೊಂಡಿತಂತೆ. ಬಳಿಕ ನಾನು ಎರಡನೆಯವನು, ತಮ್ಮಂದಿರು ಮತ್ತು ನಾಲ್ಕು ಜನ ತಂಗಿಯರು ಸತ್ತು ಹೋದದ್ದನ್ನು ಕಂಡಿದ್ದೇನೆ. ಮೂರು ಹುಟ್ಟಿದ ಬಳಿಕ ಎರಡು ಚೆನ್ನಾಗಿರುತ್ತಿದ್ದರು. ನಾನು ಅವರನ್ನು ಎತ್ತಾಡಿಸಿದ್ದು, ನೆನಪಿದೆ, ಬಳಿಕ ಹಲ್ಲು ಬರುವುದಕ್ಕೆ ಪ್ರಾರಂಭವಾದಾಗಿನಿಂದ ಹಿಡಿದು ಕ್ರಮೇಣ ಕ್ಷೀಣಿಸುತ್ತ – ಕ್ಷೀಣಿಸುತ್ತ ಬಂದು ವಾಂತಿ-ಭೇದಿ ಪ್ರಾರಂಭವಾಗಿ ಸತ್ತೇ ಹೋಗುತ್ತಿದ್ದರು. ನಮಗೆ ಬಡತನ ಎಷ್ಟಿತ್ತೆಂದರೆ ಒಂದುಪವಾಸ ಅವರ ಜೊತೆಗೆ ಆಟವಾಡಿ ನಲಿದಾಡಿದ್ದು ನನಗೆ ಚೆನ್ನಾಗಿ ಎರಡುಪವಾಸ ಮಲಗುವು ದಲ್ಲದೇ, ಹುಡುಗರಿಗೆ ತಾಯಿ ದವಾಖಾನೆಗೆ ತೋರಿಸಲಿಕ್ಕೂ ಅನುಕೂಲವಿರಲಿಲ್ಲ. ಗುಳಿಗೆ ಔಷಧ ತರಲಿಕ್ಕೂ ಅನುಕೂಲವಿರಲಿಲ್ಲ. ನಮ್ಮ ತಂದೆಯವರಿಗೆ ಉದ್ಯೋಗವೂ ಕಡಿಮೆ ಇರುತ್ತಿತ್ತು. ಪಗಾರವೂ ಕಡಿಮೆ ಇರುತ್ತಿತ್ತು. ನಮ್ಮ ಸೋದರ ಮಾವನ ಮಕ್ಕಳು ಉಟ್ಟು ಬಿಟ್ಟ ಬಟ್ಟೆಗಳನ್ನು ನಾವು ತೊಡುತ್ತಿದ್ದೆವು. ನಮ್ಮ ಬೀಸುವ ಗಿರಣಿಯೊಳಗಿನ ಕೆಳಗೆ ಬಿದ್ದ ಹಿಟ್ಟು ಕೊಂಡುತಂದು ರೊಟ್ಟಿ ಮಾಡಿ ನಮಗೆ ಉಣಿಸುತ್ತಿದ್ದರು. ಇಂಥ ಭಯಂಕರ ಬಡತನ!

Ibrahim Sutar and his childhood

ತಂದೆಯೊಂದಿಗೆ ಮಗು ಇಬ್ರಾಹಿಂ

ನಮ್ಮ ತಾಯಿ ಶ್ರೀಮಂತರ ಮನೆಯಲ್ಲಿ ಹುಟ್ಟಿ ಬೆಳೆದವಳಾದರೂ ಕೂಡ ಬಡತನಕ್ಕೆ ಹೆದರಲಿಲ್ಲ. ಮಹಾಲಿಂಗಪುರದಲ್ಲಿ ನಾವಿದ್ದ ಓಣಿಯಲ್ಲಿಯೇ ನಮ್ಮ ತಾಯಿಯ ತವರುಮನೆ ಇತ್ತು. ತವರುಮನೆಯಲ್ಲಿ ಅಣ್ಣ-ತಮ್ಮಂದಿರು ದಿನಾಲು ಮೃಷ್ಟಾನ್ನ ಭೋಜನ ಊಟ ಮಾಡುತ್ತಿದ್ದರೂ ಕೂಡ ನಮ್ಮ ತಾಯಿ ಅದನ್ನು ಬಯಸಲಿಲ್ಲ. ಅಸೂಯೆ ಪಡಲಿಲ್ಲ. ನಮಗಿಲ್ಲೆಂದು ದುಃಖಿಸಲಿಲ್ಲ. ಉಪವಾಸವಿದ್ದರೂ ‘ಕಟಕರೊಟ್ಟಿ ಖಾರಾ ಎಣ್ಣೆ’ ತಿಂದರೂ ಸಂತೋಷದಿಂದ ಇರುತ್ತಿದ್ದರು. ಬಹಳ ಸಹನಶೀಲರಾಗಿದ್ದರು.

(ಮುಂದಿನ ಭಾಗ ನಿರೀಕ್ಷಿಸಿ)

(ಸೌಜನ್ಯ :  ಭಾವೈಕ್ಯ ದರ್ಶನ. ಸಂ : ಬಿ. ಎಂ. ಪಾಟೀಲ)

ಇದನ್ನೂ ಓದಿ : ಹೃದಯಾಘಾತದಿಂದ ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ನಿಧನ

Published On - 9:40 am, Sat, 5 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್