AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡಲು ಪುಟ್ಟ ಎಲೆ, ಆರೋಗ್ಯಕ್ಕೆ ದೊಡ್ಡಮಟ್ಟದ ಅನುಕೂಲವಿದೆ! ಯಾವುದು ಗೊತ್ತಾ?

ಕೊರೊನಾ ವೈರಸ್ ರೋಗದಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಒಂದೆಲಗ ಸಸ್ಯದಿಂದ ಕೊರೊನಾ ವೈರಸ್ ಲಕ್ಷಣಗಳನ್ನು ತಡೆಹಿಡಿಯುವ ಮಾರ್ಗ ಕೈಗೊಳ್ಳಬಹುದು.

ನೋಡಲು ಪುಟ್ಟ ಎಲೆ, ಆರೋಗ್ಯಕ್ಕೆ ದೊಡ್ಡಮಟ್ಟದ ಅನುಕೂಲವಿದೆ! ಯಾವುದು ಗೊತ್ತಾ?
ಹಚ್ಚ ಹಸಿರಿನ ಒಂದೆಲಗ
shruti hegde
| Edited By: |

Updated on:Nov 28, 2020 | 12:36 PM

Share

ಹಳ್ಳಿಗಳಲ್ಲಿ ಜನರು ಅನಾರೋಗ್ಯ ಉಂಟಾದಾಗ ಆಸ್ಪತ್ರೆಗೆ ಹೋಗುವುದು ತುಂಬಾ ಕಡಿಮೆ. ಮನೆಯಲ್ಲಿಯೇ ಸಿಗುವಂತಹ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ಔಷಧ ತಯಾರಿಸುತ್ತಾರೆ. ಈ ಮಧ್ಯೆ, ಕೊರೊನಾ ವೈರಸ್ ರೋಗದಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಒಂದೆಲಗ ಸಸ್ಯದಿಂದ ಕೊರೊನಾ ವೈರಸ್ ಲಕ್ಷಣಗಳನ್ನು ತಡೆಹಿಡಿಯುವ ಮಾರ್ಗ ಕಂಡುಕೊಳ್ಳೂವತ್ತ ಗಮನಹರಿಸಬಹುದು.

ಈ ಸಸ್ಯದ ಹುಟ್ಟು: ಒಂದೆಲಗದ ಹುಟ್ಟು ಏಷ್ಯಾದಲ್ಲಿಯೇ ಇದೆ. ಸುಶ್ರುತ ಸಂಹಿತೆಯಲ್ಲಿ ಈ ಎಲೆಯ ಕುರಿತು ಹೇಳಿದ್ದಾರೆ. ಬ್ರಾಹ್ಮಿ ಔಷಧವಾಗಿ ಈ ಸಸ್ಯದ ಎಲೆಯನ್ನು ಬಳಸುತ್ತಾರೆ. ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಜನ ಇದರ ಉಪಯೋಗ ಪಡೆಯುತ್ತಿದ್ದಾರೆ.

ನೋಡಲು ಹೇಗಿರುತ್ತೆ? ಹಸಿರು ಮೈಬಣ್ಣ ಹೊಂದಿದೆ ಈ ಸಸ್ಯ. ಒಂದು ಕಾಂಡಕ್ಕೆ ಒಂದೇ ಎಲೆಯನ್ನು ಹೊಂದಿರುತ್ತದೆ. ಆದ್ದರಿಂದ ಒಂದೆಲಗ ಎಂಬ ಹೆಸರು ಬಂದಿದೆ. ದಟ್ಟವಾಗಿ ಬೆಳೆಯುತ್ತದೆ. ಹಳ್ಳಿಗಳಲ್ಲಿ ಹೆಚ್ಚು ಕಂಡುಬರುವುದು.

ಎಲ್ಲಿ ಹೆಚ್ಚಾಗಿ ಕಂಡುಬರುವುದು? ಕರಾವಳಿ, ಮಲೆನಾಡು ಪ್ರದೇಶದಲ್ಲಿ ಗದ್ದೆ, ತೋಟಗಳು ಕಂಡುಬರುವುದು ಹೆಚ್ಚು. ಈ ಸಸ್ಯಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇದೆ. ಮಣ್ಣಿನ ಫಲವತ್ತತೆ ಅಧಿಕವಿರುವ ಪ್ರದೇಶಗಳಲ್ಲಿ ಈ ಸಸ್ಯ ಕಂಡುಬರುತ್ತದೆ. ಈ ಸಸ್ಯದ ಕಾಂಡ ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ. ನೀರಿನ ಗುಣಮಟ್ಟ ಹೆಚ್ಚಿರುವ ಪ್ರದೇಶದಲ್ಲಿ ಸೊಂಪಾಗಿ ಬೆಳೆಯುತ್ತದೆ.

ಪ್ರಯೋಜನಗಳೇನು? ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆ: ಈ ಸಸ್ಯದ ಎಲೆಗಳಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಕೆಮ್ಮು, ಶೀತ, ಜ್ವರದಂತಹ ರೋಗಗಳಿಂದ ಪರಿಹಾರವಿದೆ. ಕೊರೊನಾ ಸಂಸರ್ಭದಲ್ಲಿ ವಾರಕ್ಕೆ ಮೂರು ಬಾರಿ ಈ ಎಲೆಗಳಿಂದ ತಯಾರಿಸಿದ ಕಷಾಯವನ್ನು ಜನರು ಸೇವಿಸುವುದರ ಮೂಲಕ ಕೊರೊನಾ ಲಕ್ಷಣಗಳನ್ನು ತಡೆಯಬಹುದು. ಹಳ್ಳಿಗಳಲ್ಲಿ ಈ ಎಲೆಗಳ ತಂಬುಳಿ ಮಾಡಿ ಜನರು ಸೇವಿಸುತ್ತಾರೆ. ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಔಷಧವಿದು.

ಏಕಾಗ್ರತೆಯ ಜೊತೆಗೆ ನೆನಪಿನ ಶಕ್ತಿ ಹೆಚ್ಚುತ್ತದೆ: ಪ್ರತಿ ದಿನವೂ ಬೆಳಿಗ್ಗೆ ಎದ್ದ ತಕ್ಷಣ 4-5 ಎಲೆಗಳನ್ನು ಸೇವಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಓದುವ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಒಂದೆಲಗ ಎಲೆಯನ್ನು ದಿನವೂ ಕೊಡುವ ಹವ್ಯಾಸ ಒಳ್ಳೆಯದು. ಚಿಕ್ಕಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಈ ಎಲೆ ಹೆಚ್ಚು ಉಪಯುಕ್ತವಾಗಿದೆ.

Published On - 12:35 pm, Sat, 28 November 20