ಕೊರೊನಾ ಎರಡನೇ ಅಲೆಯನ್ನು ನಿರ್ಲಕ್ಷ್ಯ ಮಾಡಬೇಡಿ..; ಜೂನ್​ ಮೊದಲ ವಾರದ ಹೊತ್ತಿಗೆ ಮತ್ತಷ್ಟು ಭೀಕರತೆ ಸೃಷ್ಟಿಸಲಿದೆ ಸೋಂಕು !

ಕೊರೊನಾ ವೈರಸ್​ ಎರಡನೇ ಅಲೆ ದೇಶದಲ್ಲಿ ವಿಪರೀತವಾಗಿದೆ. ಕೆಲವು ರಾಜ್ಯದಲ್ಲಿ ಮತ್ತೆ ನೈಟ್​ ಕರ್ಫ್ಯೂ ಸೇರಿ, ಕೊರೊನಾ ನಿಯಂತ್ರಣದ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಒಂದು ದಿನದಲ್ಲಿ ಕೊರೊನಾದಿಂದ ಸಾಯುವವರ ಸಂಖ್ಯೆ ಸಾವಿರವನ್ನೂ ಮೀರಿಸುತ್ತಿದೆ. ಒಂದೆಡೆ ವ್ಯಾಕ್ಸಿನೇಶನ್​ ನಡೆಯುತ್ತಿದ್ದರೂ ಕೊರೊನಾ ನಿಯಂತ್ರಣವಾಗುತ್ತಿಲ್ಲ. ಈ ಮಧ್ಯೆ ಇನ್ನೊಂದು ಬ್ಯಾಡ್ ನ್ಯೂಸ್​ ಎಂದರೆ, ಕೊರೊನಾ ವೈರಸ್​ ಪ್ರಸರಣ ಜೂನ್​ ತಿಂಗಳ ಮೊದಲ ವಾರದಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ ಎಂದು ಲ್ಯಾನ್ಸೆಟ್​ ಮೆಡಿಕಲ್​​ ಜರ್ನಲ್​ ವರದಿ ಮಾಡಿದೆ. ಸದ್ಯ ದೇಶದಲ್ಲಿ ಒಂದು ದಿನಕ್ಕೆ ಕೊರೊನಾದಿಂದ […]

ಕೊರೊನಾ ಎರಡನೇ ಅಲೆಯನ್ನು ನಿರ್ಲಕ್ಷ್ಯ ಮಾಡಬೇಡಿ..; ಜೂನ್​ ಮೊದಲ ವಾರದ ಹೊತ್ತಿಗೆ ಮತ್ತಷ್ಟು ಭೀಕರತೆ ಸೃಷ್ಟಿಸಲಿದೆ ಸೋಂಕು !
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Apr 16, 2021 | 11:40 AM

ಕೊರೊನಾ ವೈರಸ್​ ಎರಡನೇ ಅಲೆ ದೇಶದಲ್ಲಿ ವಿಪರೀತವಾಗಿದೆ. ಕೆಲವು ರಾಜ್ಯದಲ್ಲಿ ಮತ್ತೆ ನೈಟ್​ ಕರ್ಫ್ಯೂ ಸೇರಿ, ಕೊರೊನಾ ನಿಯಂತ್ರಣದ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಒಂದು ದಿನದಲ್ಲಿ ಕೊರೊನಾದಿಂದ ಸಾಯುವವರ ಸಂಖ್ಯೆ ಸಾವಿರವನ್ನೂ ಮೀರಿಸುತ್ತಿದೆ. ಒಂದೆಡೆ ವ್ಯಾಕ್ಸಿನೇಶನ್​ ನಡೆಯುತ್ತಿದ್ದರೂ ಕೊರೊನಾ ನಿಯಂತ್ರಣವಾಗುತ್ತಿಲ್ಲ. ಈ ಮಧ್ಯೆ ಇನ್ನೊಂದು ಬ್ಯಾಡ್ ನ್ಯೂಸ್​ ಎಂದರೆ, ಕೊರೊನಾ ವೈರಸ್​ ಪ್ರಸರಣ ಜೂನ್​ ತಿಂಗಳ ಮೊದಲ ವಾರದಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ ಎಂದು ಲ್ಯಾನ್ಸೆಟ್​ ಮೆಡಿಕಲ್​​ ಜರ್ನಲ್​ ವರದಿ ಮಾಡಿದೆ.

ಸದ್ಯ ದೇಶದಲ್ಲಿ ಒಂದು ದಿನಕ್ಕೆ ಕೊರೊನಾದಿಂದ ಸಾವಿರಕ್ಕೂ ಹೆಚ್ಚು ಮಂದಿ ಮೃತಪಡುತ್ತಿದ್ದಾರೆ. ಇದೀಗ ಲ್ಯಾನ್ಸೆಟ್​ ಮಾಡಿರುವ ವರದಿಯ ಪ್ರಕಾರ ಜೂನ್​ ಮೊದಲವಾರದಲ್ಲಿ ಕೊರೊನಾದಿಂದ ಸಾಯುವವರ ಸಂಖ್ಯೆ ಇನ್ನಷ್ಟು ಏರಲಿದೆ. ಅಂದರೆ ಒಂದು ದಿನಕ್ಕೆ ಅಂದಾಜು 2,320 ಮಂದಿ ಕೊರೊನಾ ಸೋಂಕಿನಿಂದ ಮೃತಪಡಬಹುದು ಎಂದು ವರದಿ ಹೇಳಿದೆ. ಲ್ಯಾನ್ಸೆಟ್ ಮೆಡಿಕಲ್ ಜರ್ನಲ್​ Managing India’s second Covid-19 wave: Urgent steps ಎಂಬ ತಲೆಬರಹದಡಿಯಲ್ಲಿ ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ನಿಯಮಗಳನ್ನೂ ಉಲ್ಲೇಖಿಸಿದೆ.

ಎರಡನೇ ಅಲೆ ವಿಭಿನ್ನ ಲ್ಯಾನ್ಸೆಟ್ ಮೆಡಿಕಲ್​ ಜರ್ನಲ್ ಪ್ರಕಾರ ಕೊರೊನಾ ವೈರಸ್​ನ ಎರಡನೇ ಅಲೆ, ಮೊದಲ ಹಂತಕ್ಕಿಂತ ತುಂಬ ವಿಭಿನ್ನವಾಗಿದೆ. ಕೊರೊನಾ ವೈರಸ್ ಮೊದಲ ಅಲೆಗಿಂತ, ಈಗಿನ ಹಂತದಲ್ಲಿ ಪ್ರಸರಣದ ಏರಿಕೆಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ಒಂದು ದಿನದಲ್ಲಿ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರದಿಂದ 80 ಸಾವಿರಕ್ಕೆ ಏರಲು ಮೊದಲ ಹಂತದಲ್ಲಿ 83 ದಿನಗಳು ಬೇಕಾಗಿತ್ತು. ಆದರೆ ಎರಡನೇ ಅಲೆಯಲ್ಲಿ ಕೇವಲ 40 ದಿನಗಳಲ್ಲಿ ಈ ಪ್ರಮಾಣದ ಏರಿಕೆಯಾಗಿದೆ. ಇನ್ನು ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿನ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ. ಅನೇಕರಿಗೆ ಲಕ್ಷಣ ರಹಿತವಾಗಿದ್ದು, ಇನ್ನೂ ಹಲವರಿಗೆ ಸಣ್ಣಪ್ರಮಾಣದಲ್ಲಿ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಆದರೆ ಹೀಗೆ ಲಕ್ಷಣಗಳಿಲ್ಲ ಎಂಬ ಮಾತ್ರಕ್ಕೆ ಗಂಭೀರ ಸ್ವರೂಪದ್ದಲ್ಲ ಎಂದು ಹೇಳಲಾಗುವುದಿಲ್ಲ. ಸದ್ಯಕ್ಕೆ ಕೊರೊನಾದಿಂದ ಸಾಯುವವರ ಪ್ರಮಾಣ ಅತಿಯಾಗಿ ಇಲ್ಲದಿದ್ದರೂ, ಜೂನ್​ ಹೊತ್ತಿಗೆ ಒಂದು ದಿನದಲ್ಲಿ ದಾಖಲಾಗುವ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ತಿಳಿಸಿದೆ.

ಇನ್ನು ಕೊರೊನಾ ನಿಯಂತ್ರಣಕ್ಕಾಗಿ ಲ್ಯಾನ್ಸೆಟ್​ ಕೆಲವು ಸಲಹೆಗಳನ್ನು ನೀಡಿದೆ.. ಸದ್ಯ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಇನ್ನು ಕೂಡಲೇ 45 ವರ್ಷ ಒಳಗಿನವರಿಗೂ ಲಸಿಕೆ ನೀಡಲು ಪ್ರಾರಂಭಿಸಬೇಕು ಎಂದು ಅಭಿಪ್ರಾಯ ತಿಳಿಸಿದೆ. ಅಲ್ಲದೆ, ಲಸಿಕೆ ಉತ್ಪಾದನೆ ಮತ್ತು ನೀಡುವ ಪ್ರಮಾನದಲ್ಲಿ ಏರಿಕೆಯಾಗಬೇಕು ಎಂದು ಹೇಳಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗ್ತಿದೆ, ದಿನಕ್ಕೆ 20-22 ಶವ ಬರ್ತಿದೆ ಎಂದ ಚಿತಾಗಾರ ಸಿಬ್ಬಂದಿ 

ಕೊರೊನಾ ಸೋಂಕಿತರ ಪತ್ತೆಗೆ ಮೊಬೈಲ್ ಟೆಸ್ಟಿಂಗ್ ವ್ಯಾನ್​ಗಳ ಮೊರೆ ಹೋದ ಕಲಬುರಗಿ ಜಿಲ್ಲಾಡಳಿತ

(India may see above 2000 daily Covid19 deaths by first week of June)

Published On - 10:25 am, Fri, 16 April 21