AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋದಲ್ಲಿ ಬಟಾಬಯಲು.. ಆಸ್ಟ್ರೇಲಿಯಾ ಆಟಗಾರ ಸ್ಮಿತ್​ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು

ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಳ್ಳುತ್ತದೆಯಂತೆ. ಸ್ಮಿತ್​ ಕತೆಯೂ ಅದೇ ರೀತಿ ಆಗಿದೆ. ಸ್ಮಿತ್​ ಮಾಡಿದ ಕೀಳುಮಟ್ಟದ ಕೆಲಸ ಸ್ಟಂಪ್​ ಕ್ಯಾಮೆರಾದಲ್ಲಿ ಸೆರಯಾಗಿದೆ.

ವಿಡಿಯೋದಲ್ಲಿ ಬಟಾಬಯಲು.. ಆಸ್ಟ್ರೇಲಿಯಾ ಆಟಗಾರ ಸ್ಮಿತ್​ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು
ಸ್ಮಿತ್​ ಮಾಡಿದ ಕೆಳಮಟ್ಟದ ಗಿಮಿಕ್
ರಾಜೇಶ್ ದುಗ್ಗುಮನೆ
| Edited By: |

Updated on: Jan 11, 2021 | 3:42 PM

Share

ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಬೌಲರ್​ಗಳ ಬೆವರಿಳಿಸಿದ್ದಾರೆ. ರಿಷಬ್​ ಪಂತ್​, ಚೇತೇಶ್ವರ ಪೂಜಾರ ಆಸ್ಟ್ರೇಲಿಯಾ ಬೌಲರ್​ಗಳನ್ನು ಬೆಂಡೆತ್ತಿದರೆ, ಹನುಮ ವಿಹಾರಿ ಹಾಗೂ ರವೀಂದ್ರಚಂದ್ರ ಅಶ್ವಿನ್​ ಕಾಂಗರೂ ಬೌಲರ್​ಗಳು ಬೆವರು ಹರಿಸುವಂತೆ ಮಾಡಿದ್ದರು. ಈ ಮಧ್ಯೆ ಆಸ್ಟ್ರೇಲಿಯಾ ಟೀಂ ಇಂಡಿಯಾವನ್ನು ಸೋಲಿಸಲು ತೀರಾನೆ ಕೆಳಮಟ್ಟಕ್ಕೆ ಇಳಿದಿದ್ದು ಬಯಲಾಗಿದೆ.

ಅದು ಎರಡನೇ ಸೆಷನ್​ ಸಮಯ. ಡ್ರಿಂಕ್​ ಬ್ರೇಕ್​ ಬಿಡಲಾಗಿತ್ತು. ಎಲ್ಲರೂ ತಂಪು ಪಾನೀಯ ಕುಡಿಯುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಕಳ್ಳ ಬೆಕ್ಕಿನಂತೆ ಸುಮ್ಮನೆ ಎಲ್ಲರ ಕಣ್ಣ ತಪ್ಪಿಸಿ ಸ್ಟಂಪ್​ ಬಳಿ ಬಂದ ಸ್ಟೀವ್​ ಸ್ಮಿತ್​, ರಿಷಬ್​ ಪಂತ್​ ಹಾಕಿದ್ದ ಬ್ಯಾಟಿಂಗ್​ ಗಾರ್ಡ್​ಅನ್ನು ಅಳಿಸಿ ಹಾಕಿದ್ದಾರೆ. ಕೆಲಸ ಮುಗಿದ ನಂತರ ಬಂದಷ್ಟೇ ಸೈಲೆಂಟ್​ ಆಗಿ ಸ್ಥಳದಿಂದ ಕಾಲ್ಕಿತ್ತಿತ್ತಿದ್ದಾರೆ. ನಂತರ ಬಂದ ರಿಷಬ್​ ಪಂತ್​ ಮತ್ತೆ, ಬ್ಯಾಟಿಂಗ್​ ಗಾರ್ಡ್​ ಹಾಕಿಕೊಂಡಿದ್ದಾರೆ.

ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲ ಎಂದುಕೊಳ್ಳುತ್ತದೆಯಂತೆ. ಸ್ಮಿತ್​ ಕತೆಯೂ ಅದೇ ರೀತಿ ಆಗಿದೆ. ಸ್ಮಿತ್​ ಮಾಡಿದ ಕೀಳುಮಟ್ಟದ ಕೆಲಸ ಸ್ಟಂಪ್​ ಕ್ಯಾಮೆರಾದಲ್ಲಿ ಸೆರಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಸ್ಟ್ರೇಲಿಯಾ ಕೀಳುಮಟ್ಟದ ಗಿಮಿಕ್​ಗೆ ವೀರೇದ್ರ ಸೆಹ್ವಾಗ್​ ಸಹ ಛೀಮಾರಿ ಹಾಕಿದ್ದಾರೆ. ಸ್ಮಿತ್​ ಮಾಡಿರುವ ಕೆಲಸದಿಂದ ಯಾವುದೇ ಪ್ರಯೋಜವಾಗಿಲ್ಲ ಎಂದು ಟೀಕೆ ಮಾಡಿದ್ದಾರೆ.

ಸ್ಟೀವ್​ ಸ್ಮಿತ್​ ಪರವಾಗಿ ನಿಂತಿದ್ದ ಕೊಹ್ಲಿ ನಮ್ಮ ಎದುರು ಆಡುವವರು ಎದುರಾಳಿ ಮಾತ್ರ ವೈರಿ ಅಲ್ಲ ಎನ್ನುವುದನ್ನು ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಸಾಬೀತು ಮಾಡಿದ್ದರು. ಬಾಲ್​ ಟ್ಯಾಂಪರಿಂಗ್​ ಪ್ರಕರಣದ ಜವಾಬ್ದಾರಿ ಹೊತ್ತು ಸ್ಟೀವ್​ ಸ್ಮಿತ್​ ಕ್ರಿಕೆಟ್​ನಿಂದ ಒಂದು ವರ್ಷ ಹೊರಗುಳಿದಿದ್ದರು. 2019ರ ವರ್ಲ್ಡ್​​ ಕಪ್​ಗೆ ಸ್ಮಿತ್​ ಮರಳಿದ್ದರು. ಸ್ಮಿತ್​ ಭಾರತದ ವಿರುದ್ಧ ಮೈದಾನಕ್ಕೆ ಇಳಿದಾಗ ಅಭಿಮಾನಿಗಳು ಮೋಸಗಾರ ಎಂದು ಕೂಗಿದ್ದರು. ಈ ವೇಳೆ ಕೊಹ್ಲಿ ಅಭಿಮಾನಿಗಳಿಗೆ ಸ್ಮಿತ್​ ಅವರನ್ನು ಹೊಗಳುವಂತೆ ಹುರಿದುಂಬಿಸಿದ್ದರು. ಇದಕ್ಕೆ ತದ್ವಿರುದ್ಧವಾಗಿ ಸ್ಮಿತ್​ ನಡೆದುಕೊಂಡಿದ್ದಾರೆ.

ತಂಡವನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದ ವಿಹಾರಿ- ಅಶ್ವಿನ್​; 3ನೇ ಟೆಸ್ಟ್​ ಡ್ರಾನಲ್ಲಿ ಅಂತ್ಯ

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!