India vs England 2021: ಕ್ವಾರಂಟೈನ್ ಮುಗಿಸಿ ಅಭ್ಯಾಸದಲ್ಲಿ ನಿರತರಾದ ಸ್ಟೋಕ್ಸ್, ಆರ್ಚರ್, ರೋರಿ ಬರ್ನ್ಸ್.. ಉಳಿದ ಆಟಗಾರರ ಕೋವಿಡ್​ ವರದಿ ಏನಾಯ್ತು?

|

Updated on: Jan 30, 2021 | 12:36 PM

ಈ ಮೂವರನ್ನು ಹೊರತುಪಡಿಸಿ ಇಡೀ ಇಂಗ್ಲೆಂಡ್ ತಂಡಕ್ಕೆ ನಿನ್ನೆ ಎರಡನೇ ಪಿಸಿಆರ್ ಕೋವಿಡ್ -19 ಪರೀಕ್ಷೆಯನ್ನು ನಡೆಸಲಾಗಿದ್ದು, ಫಲಿತಾಂಶ ನೆಗೆಟಿವ್​ ಬಂದಿದೆ ಎಂದು ವರದಿಯಾಗಿದೆ.

India vs England 2021: ಕ್ವಾರಂಟೈನ್ ಮುಗಿಸಿ ಅಭ್ಯಾಸದಲ್ಲಿ ನಿರತರಾದ ಸ್ಟೋಕ್ಸ್, ಆರ್ಚರ್, ರೋರಿ ಬರ್ನ್ಸ್.. ಉಳಿದ ಆಟಗಾರರ ಕೋವಿಡ್​ ವರದಿ ಏನಾಯ್ತು?
ಸ್ಟೋಕ್ಸ್, ಆರ್ಚರ್ ಸಾಂದರ್ಭಿಕ ಚಿತ್ರ
Follow us on

ಚೆನ್ನೈ: ಕ್ರಿಕೆಟ್​ಗಾಗಿ ಇಂಡಿಯಾ ಪ್ರವಾಸದಲ್ಲಿರುವ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ವೇಗಿ ಜೋಫ್ರಾ ಆರ್ಚರ್ ಮತ್ತು ರಿಸರ್ವ್ ಓಪನರ್ ರೋರಿ ಬರ್ನ್ಸ್ ಆರು ದಿನಗಳ ಕ್ವಾರಂಟೈನ್​ ನಿಯಮವನ್ನು ಯಶಸ್ವಿಯಾಗಿ ಪೂರೈಸಿದ ನಂತರ ಚೆಪಾಕ್‌ನಲ್ಲಿ ಶನಿವಾರ ತಮ್ಮ ತರಬೇತಿ ಆರಂಭಿಸಿದ್ದಾರೆ.

ಈ ಮೂವರು ಶ್ರೀಲಂಕಾ ಟೆಸ್ಟ್ ಸರಣಿಯ ಭಾಗವಾಗಿರಲಿಲ್ಲ. ಸ್ಟೋಕ್ಸ್ ಮತ್ತು ಆರ್ಚರ್ ಅವರಿಗೆ ಇಂಡಿಯಾ ಪ್ರವಾಸಕ್ಕಾಗಿ ಶ್ರೀಲಂಕಾ ಟೆಸ್ಟ್ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಬರ್ನ್ಸ್ ತನ್ನ ಮೊದಲ ಮಗುವಿನ ಜನನದ ಕಾರಣ ಶ್ರೀಲಂಕಾ ಪ್ರವಾಸವನ್ನು ಕೈ ಬಿಟ್ಟಿದ್ದರು.

ಮೂರು ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ ಅಭ್ಯಾಸ ಮಾಡಲ್ಲಿದ್ದಾರೆ..
ಈ ಮೂವರು ತಮ್ಮ ಸಹೋದ್ಯೋಗಿಗಳಿಗಿಂತ ಮೊದಲೇ ಭಾರತವನ್ನು ತಲುಪಿದ್ದರು ಮತ್ತು ಈಗಾಗಲೇ ತಮ್ಮ ಮೂರು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ತೆರವುಗೊಳಿಸಿದ ನಂತರ ಶನಿವಾರ ತಮ್ಮ ಕ್ರಿಕೆಟ್​ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆರ್ಚರ್, ಬರ್ನ್ಸ್ ಮತ್ತು ಸ್ಟೋಕ್ಸ್ ಮುಂದಿನ ಮೂರು ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ ಅಭ್ಯಾಸ ಮಾಡಲ್ಲಿದ್ದಾರೆ. ಪ್ರತಿ ದಿನ ಎರಡು ಗಂಟೆಗಳ ಕಾಲ ಪ್ರಾಕ್ಟೀಸ್​ ನಡೆಸಲು ಅವರಿಗೆ ಅನುಮತಿ ನೀಡಲಾಗಿದೆ ಎಂದು ಇಂಗ್ಲೆಂಡ್‌ನ ಮಾಧ್ಯಮ ವ್ಯವಸ್ಥಾಪಕ ಡ್ಯಾನಿ ರೂಬೆನ್ ಮಾಹಿತಿ ನೀಡಿದರು.

ಉಳಿದವರ ಕೋವಿಡ್​ ವರದಿ ನೆಗೆಟಿವ್​ ಬಂದಿದೆ..
ಈ ಮೂವರನ್ನು ಹೊರತುಪಡಿಸಿ ಇಡೀ ಇಂಗ್ಲೆಂಡ್ ತಂಡಕ್ಕೆ ನಿನ್ನೆ ಎರಡನೇ ಪಿಸಿಆರ್ ಕೋವಿಡ್ -19 ಪರೀಕ್ಷೆಯನ್ನು ನಡೆಸಲಾಗಿದ್ದು, ಫಲಿತಾಂಶ ನೆಗೆಟಿವ್​ ಬಂದಿದೆ ಎಂದು ವರದಿಯಾಗಿದೆ. ಹೀಗಾಗಿ ಪೂರ್ಣ ಇಂಗ್ಲೆಂಡ್ ತಂಡ ಫೆಬ್ರವರಿ 2 ರಿಂದ ತಮ್ಮ ತರಬೇತಿಯನ್ನು ಪ್ರಾರಂಭಿಸಲಿದೆ. ಫೆಬ್ರವರಿ 5 ರಿಂದ ಚಪಕ್​ನಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ.

India vs England 2021: ಭಾರತಕ್ಕೆ ಬಂದಿಳಿದ ಇಂಗ್ಲೆಂಡ್ ತಂಡ, ಆಟಗಾರರಿಗೆ ಕಡ್ಡಾಯ ಕ್ವಾರಂಟೈನ್.. ಪ್ರೇಕ್ಷಕ ಪ್ರಭು ದೂರ ದೂರ