AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಲಿದೆ Indian Railway Finance Corporation IPO: ಹೇಗಿದೆ ಈ ಕಂಪೆನಿ?

ಕಳೆದ ವರ್ಷ ಸಾಲುಸಾಲು ಐಪಿಒಗಳು ಮಾರುಕಟ್ಟೆಗೆ ಬಂದಿದ್ದವು. ಈ ವರ್ಷದ ಮೊದಲ ಐಪಿಒ ಆಗಿ ಇಂಡಿಯನ್​ ರೈಲ್ವೆ ಫೈನಾನ್ಸ್​ ಕಾರ್ಪೋರೇಷನ್ ಬರುತ್ತಿದೆ. ಈ ಕಂಪೆನಿ ಕೆಲಸ ಏನು? ಈ ಕಂಪೆನಿ ಹೇಗಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಬರಲಿದೆ Indian Railway Finance Corporation IPO: ಹೇಗಿದೆ ಈ ಕಂಪೆನಿ?
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Updated By: ಪೃಥ್ವಿಶಂಕರ|

Updated on: Jan 18, 2021 | 7:19 AM

Share

ಸರ್ಕಾರಿ ಸ್ವಾಮ್ಯದ ಇಂಡಿಯನ್​ ರೈಲ್ವೆ ಫೈನಾನ್ಸ್​ ಕಾರ್ಪೋರೇಷನ್ (IRFC)​ ಐಪಿಒಗೆ ಬಿಡ್​ ಮಾಡಲು ನಾಳೆಯಿಂದ ಸಾರ್ವಜನಿಕರಿಗೆ ಅವಕಾಶ ಮುಕ್ತವಾಗಲಿದೆ. ಬಿಡ್​ ಮಾಡಲು ಜನವರಿ 20 ಕೊನೆಯ ದಿನಾಂಕ. ಇದು 2021ರ ಮೊದಲ ಐಪಿಒ ಅನ್ನೋದು ವಿಶೇಷ.

ಆರಂಭಿಕವಾಗಿ IRFC ಸುಮಾರು 1,78 ಕೋಟಿ (1,78,20,69,000) ಷೇರುಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಈ ಪೈಕಿ ಸುಮಾರು 1,18 ಕೋಟಿ (1,18,80,46,000) ಹೊಸ ಷೇರುಗಳಾದರೆ, ಸುಮಾರು 59 ಕೋಟಿ (59,40,23,000) ಷೇರುಗಳನ್ನು ಸರ್ಕಾರ ಮಾರಾಟ ಮಾಡುತ್ತಿದೆ.

ಷೇರುಗಳ ಬ್ಯಾಂಡ್​ ತುಂಬಾನೇ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ. ಪ್ರತಿ ಷೇರುಗಳ ಬ್ಯಾಂಡ್​ ಅನ್ನು 25-26 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಕನಿಷ್ಠ ಬಿಡ್​ ದರ 14,950 ರೂಪಾಯಿ (1 ಲಾಟ್)​ ಹಾಗೂ ಗರಿಷ್ಠ ಬಿಡ್​ ದರ 1,94,350 (13 ಲಾಟ್) ರೂಪಾಯಿ. ಅಂದರೆ, ಒಂದು ಲಾಟ್​ನಲ್ಲಿ 575 ಷೇರುಗಳು ಇರಲಿವೆ. ಭವಿಷ್ಯದಲ್ಲಿ ಉಂಟಾಗುವ ಹಣದ ಅವಶ್ಯಕತೆಗಳಿಗೆ IRFC ಈ ಹಣ ಬಳಕೆ ಮಾಡಿಕೊಳ್ಳಲಿದೆ.

ಕಂಪೆನಿ ಕೆಲಸ ಏನು? ಭಾರತೀಯ ರೈಲ್ವೆಗೆ IRFC ಸಾಲ ನೀಡುವ ಕೆಲಸ ಮಾಡುತ್ತದೆ. ಅಂದರೆ, ಬಜೆಟ್​ನಲ್ಲಿ ರೈಲ್ವೆಗೆ ಒಂದಷ್ಟು ಹಣವನ್ನು ಸರ್ಕಾರ ಮೀಸಲಿಡುತ್ತದೆ. ಕೊರತೆ ಆಗುವ ಹಣವನ್ನು IRFC ಬಳಿ ಭಾರತೀಯ ರೈಲ್ವೆ ಸಾಲ ಪಡೆಯಲಿದೆ. ಬೋಗಿ​​ ಹಾಗೂ ಇತರ ಅವಶ್ಯಕತೆ ಎದುರಾದಾಗ ಭಾರತೀಯ ರೈಲ್ವೆ IRFC ಸಂಪರ್ಕಿಸುತ್ತದೆ. IRFC ಬೋಗಿಯನ್ನು 30 ವರ್ಷಗಳ ಗುತ್ತಿ​ಗೆ ನೀಡುತ್ತದೆ. ಭಾರತೀಯ ರೈಲ್ವೆಯಿಂದ IRFC ಗುತ್ತಿಗೆ ಹಣವನ್ನೂ ಪಡೆಯುತ್ತದೆ. ಇದು IRFCಯ ಪ್ರಮುಖ ಕೆಲಸ.

ವರ್ಷದಿಂದ ವರ್ಷಕ್ಕೆ ಈ ಸಂಸ್ಥೆಯ ಆದಾಯ ಹೆಚ್ಚುತ್ತಿದೆ. 2018ರಲ್ಲಿ IRFC ನಿವ್ವಳ ಆದಾಯ 2,569 ಕೋಟಿ ರೂಪಾಯಿ ಇತ್ತು. 2019ರಲ್ಲಿ ಈ ಆದಾಯ 2,804 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. 2020ರಲ್ಲಿ ಈ ಆದಾಯ 3,258ಕ್ಕೆ ಜಿಗಿದಿದೆ. ವರ್ಷದಿಂದ ವರ್ಷಕ್ಕೆ ನಿವ್ವಳ ಆದಾಯ ಹೆಚ್ಚುತ್ತಿದೆ.

ಚಿಕ್ಕ ರೌಂಡ್​ ಅಪ್​: ಐಪಿಒ ಹೆಸರು: ಇಂಡಿಯನ್​ ರೈಲ್ವೇ ಫೈನಾನ್ಸ್​ ಕಾರ್ಪೋರೇಷನ್ ಬಿಡ್​ ದಿನಾಂಕ: 181-2021ರಿಂದ 20-01-2021ರವರೆಗೆ ಷೇರುಗಳ ಬೆಲೆ: ಪ್ರತಿ ಷೇರಿಗೆ 25-26 ರೂಪಾಯಿ ಬಿಡ್ ದರ: ಕನಿಷ್ಠ ಬಿಡ್​ ದರ 14, 950 ರೂಪಾಯಿ (1 ಲಾಟ್)​ ಹಾಗೂ ಗರಿಷ್ಠ ಬಿಡ್​ ದರ 1,94,350 (13 ಲಾಟ್) ರೂಪಾಯಿ ಹಂಚಿಕೆ ಆಗಲಿರುವ ಒಟ್ಟು ಷೇರುಗಳು: 1,78,20,69,000

ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ