‘ಧೋನಿ- ಇನ್ಫಿ ಜನಿಸಿದ್ದು ಒಂದೇ ದಿನ! Captain Cool ಧೋನಿ ಕಾರ್ಪೋರೇಟ್‌ ಜಗತ್ತಿಗೆ ರೋಲ್‌ ಮಾಡೆಲ್‌’

ಬೆಂಗಳೂರು: ಟೀಮ್‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಧೋನಿ ಬಗ್ಗೆ ಇನ್ಫೋಸಿಸ್‌ ಸ್ಥಾಪಕರಲ್ಲೊಬ್ಬರಾದ ನಾರಾಯಣಮೂರ್ತಿ ವಿಶೇಷ ಲೇಖನ ಬರೆದಿದ್ದಾರೆ. ತಮ್ಮ ಲೇಖನದಲ್ಲಿ ನಾರಾಯಣಮೂರ್ತಿ ಅವರು, ಟೀಂ‌ ಇಂಡಿಯಾದ ಮಾಜಿ ನಾಯಕ, Captain Cool ಮಹೇಂದ್ರ ಸಿಂಗ್‌ ಧೋನಿ ಇಂದಿನ ಭಾರತದಲ್ಲಿ ಸಾಮಾನ್ಯ ಕುಟುಂಬದಿಂದ ಬಂದಿದ್ರೂ ಕೂಡಾ ಪ್ರತಿಭೆ ಇದ್ದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಕಾರ್ಪೋರೇಟ್‌ ಜಗತ್ತಿಗೆ ಮಾಹೀ ಒಬ್ಬ ರೋಲ್‌ ಮಾಡೆಲ್‌ ಎಂದು ಕೊಂಡಾಡಿದ್ದಾರೆ. ವಿಶ್ವದ […]

‘ಧೋನಿ- ಇನ್ಫಿ ಜನಿಸಿದ್ದು ಒಂದೇ ದಿನ! Captain Cool ಧೋನಿ ಕಾರ್ಪೋರೇಟ್‌ ಜಗತ್ತಿಗೆ ರೋಲ್‌ ಮಾಡೆಲ್‌’
Updated By: ಸಾಧು ಶ್ರೀನಾಥ್​

Updated on: Aug 18, 2020 | 4:23 PM

ಬೆಂಗಳೂರು: ಟೀಮ್‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಧೋನಿ ಬಗ್ಗೆ ಇನ್ಫೋಸಿಸ್‌ ಸ್ಥಾಪಕರಲ್ಲೊಬ್ಬರಾದ ನಾರಾಯಣಮೂರ್ತಿ ವಿಶೇಷ ಲೇಖನ ಬರೆದಿದ್ದಾರೆ.

ತಮ್ಮ ಲೇಖನದಲ್ಲಿ ನಾರಾಯಣಮೂರ್ತಿ ಅವರು, ಟೀಂ‌ ಇಂಡಿಯಾದ ಮಾಜಿ ನಾಯಕ, Captain Cool ಮಹೇಂದ್ರ ಸಿಂಗ್‌ ಧೋನಿ ಇಂದಿನ ಭಾರತದಲ್ಲಿ ಸಾಮಾನ್ಯ ಕುಟುಂಬದಿಂದ ಬಂದಿದ್ರೂ ಕೂಡಾ ಪ್ರತಿಭೆ ಇದ್ದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಕಾರ್ಪೋರೇಟ್‌ ಜಗತ್ತಿಗೆ ಮಾಹೀ ಒಬ್ಬ ರೋಲ್‌ ಮಾಡೆಲ್‌ ಎಂದು ಕೊಂಡಾಡಿದ್ದಾರೆ.

ವಿಶ್ವದ ಐಟಿ ವಲಯದಲ್ಲಿ ತಮ್ಮ ಇನ್ಪೋಸಿಸ್‌ ಮೂಲಕ ಭಾರತದ ಕೀರ್ತಿ ಶಿಖರವನ್ನು ಪಸರಿಸಿದ ಮೂರ್ತಿ, ಧೋನಿಗೂ ಮತ್ತು ಇನ್ಫೋಸಿಸ್‌ಗೂ ಇರುವ ಸಾಮ್ಯತೆಯನ್ನು ಸ್ಮರಿಸಿದ್ದಾರೆ. ಧೋನಿ ಹುಟ್ಟಿದ್ದು ಜುಲೈ 7, 1981 ಹಾಗೂ ಇನ್ಫೋಸಿಸ್‌ ‌ ಸ್ಥಾಪನೆಯಾಗಿದ್ದೂ ಕೂಡಾ ಜುಲೈ 7, 1981 ಎಂದು ತಮ್ಮ ಲೇಖನದಲ್ಲಿ ಬರೆದಿದ್ದಾರೆ.

2007ರ ವಿಶ್ವಕಪ್‌ ಮತ್ತು 2011ರ ವಿಶ್ವಕಪ್‌ ಗೆಲುವಿನ ಸಂದರ್ಭದಲ್ಲಿ ಧೋನಿಯ ನಡವಳಿಕೆ ಒಬ್ಬ ಲೀಡರ್‌ ಆಗಿ ಹೇಗಿರಬೇಕು ಎಂದು ತೋರಿಸಿಕೊಟ್ಟಿದೆ. ಇದರಿಂದ ಭಾರತದ ಕಾರ್ಪೋರೇಟ್‌‌ ವಲಯ ಕಲಿಯುವುದು ಸಾಕಷ್ಟಿದೆ ಎಂದಿದ್ದಾರೆ ಇನ್ಫೋಸಿಸ್‌ ಸ್ಥಾಪಕ.

ಗೆಲುವೇ ಇರಲಿ, ಸೋಲೆ ಬರಲಿ ಅಂಥ ಸಂದರ್ಭದಲ್ಲಿ ನಾಯಕನಾದವನು ಹೇಗಿರಬೇಕು ಎಂದು ತಮ್ಮ ನಡವಳಿಕೆ ಮೂಲಕ ಧೋನಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಆಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ರೂ, ಕ್ರಿಕೆಟ್‌ನೊಂದಿಗಿನ ಅವರ ಸಂಬಂಧ ಮುಂದುವರಿಯುತ್ತೆ ಎಂಬ ವಿಶ್ವಾಸವನ್ನೂ ಕೂಡಾ ನಾರಾಯಣ ಮೂರ್ತಿ ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ.