ಕೊಡಿಗೇಹಳ್ಳಿ ಅಂಡರ್​ಪಾಸ್​ನಲ್ಲಿ ಸಿಲುಕಿದ ಇನೋವಾ ಕಾರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಿಗೇಹಳ್ಳಿಯ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದು, ಇನ್ನೋವಾ ಕಾರೊಂದು ಸಿಕ್ಕಿ ಹಾಕಿಕೊಂಡಿದೆ. ಕೊಡಿಗೇಹಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಜೆ 4 ಘಂಟೆಯಿಂದಲೇ ಆರಂಭವಾದ ಮಳೆಯಿಂದಾಗಿ ಅಂಡರ್‌ಪಾಸ್‌ನಲ್ಲಿ ಸಾಕಷ್ಟು ನೀರು ನಿಂತಿದೆ. ಈ ನಡುವೆ ಸಂಜೆ 5 ಘಂಟೆಯ ವೇಳೆಗೆ ಅಂಡರ್‌ಪಾಸ್ ಕ್ರಾಸ್ ಮಾಡಲು ಹೋದ ಇನ್ನೋವಾ ಅಂಡರ್‌ಪಾಸ್‌ನಲ್ಲಿಯೇ ಸಿಕ್ಕಿಹಾಕಿಕೊಂಡಿದೆ. ನೀರಿನಲ್ಲಿ ಕಾರು ಸಿಕ್ಕಿಕೊಳ್ಳುತ್ತಿದ್ದಂತೆ ತೇಲಾಡಲಾರಂಭಿಸಿದ್ದು ಮುಂದೆಯೂ ಹೋಗಲಾಗದೇ, ಹಿಂದೆಯೂ ಬರಲಾಗದೇ ಸಿಲುಕಿಕೊಂಡಿದೆ. ಕೊಡುಗೆ ಹಳ್ಳಿ ಮಾತ್ರವಲ್ಲ ಬೆಂಗಳೂರಿನ ವಿವಿಧೆಡೆ ಮಳೆಯಿಂದಾಗಿ ನೀರು […]

ಕೊಡಿಗೇಹಳ್ಳಿ ಅಂಡರ್​ಪಾಸ್​ನಲ್ಲಿ ಸಿಲುಕಿದ ಇನೋವಾ ಕಾರು

Updated on: Sep 09, 2020 | 10:05 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಿಗೇಹಳ್ಳಿಯ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದು, ಇನ್ನೋವಾ ಕಾರೊಂದು ಸಿಕ್ಕಿ ಹಾಕಿಕೊಂಡಿದೆ.

ಕೊಡಿಗೇಹಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಜೆ 4 ಘಂಟೆಯಿಂದಲೇ ಆರಂಭವಾದ ಮಳೆಯಿಂದಾಗಿ ಅಂಡರ್‌ಪಾಸ್‌ನಲ್ಲಿ ಸಾಕಷ್ಟು ನೀರು ನಿಂತಿದೆ. ಈ ನಡುವೆ ಸಂಜೆ 5 ಘಂಟೆಯ ವೇಳೆಗೆ ಅಂಡರ್‌ಪಾಸ್ ಕ್ರಾಸ್ ಮಾಡಲು ಹೋದ ಇನ್ನೋವಾ ಅಂಡರ್‌ಪಾಸ್‌ನಲ್ಲಿಯೇ ಸಿಕ್ಕಿಹಾಕಿಕೊಂಡಿದೆ.

ನೀರಿನಲ್ಲಿ ಕಾರು ಸಿಕ್ಕಿಕೊಳ್ಳುತ್ತಿದ್ದಂತೆ ತೇಲಾಡಲಾರಂಭಿಸಿದ್ದು ಮುಂದೆಯೂ ಹೋಗಲಾಗದೇ, ಹಿಂದೆಯೂ ಬರಲಾಗದೇ ಸಿಲುಕಿಕೊಂಡಿದೆ. ಕೊಡುಗೆ ಹಳ್ಳಿ ಮಾತ್ರವಲ್ಲ ಬೆಂಗಳೂರಿನ ವಿವಿಧೆಡೆ ಮಳೆಯಿಂದಾಗಿ ನೀರು ನಿಂತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.