BJPಗೆ ತಲೆನೋವಾದ ಶಿರಾ ಉಪ ಸಮರದ ಟಿಕೆಟ್ ಹಂಚಿಕೆ

ತುಮಕೂರು: ನವೆಂಬರ್​ 3ರಂದು ನಡೆಯಲಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ BJP ಗೆ ಚುನಾವಣೆಯ ಟಿಕೆಟ್ ಹಂಚಿಕೆ ಪ್ರಕ್ರಿಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ, ಪಕ್ಷದ ಟಿಕೆಟ್​ನ ಕಾಡುಗೊಲ್ಲರಿಗೆ ನೀಡಬೇಕೆಂದು ಸಮುದಾಯದವರು ಪಟ್ಟು ಹಿಡಿದಿದ್ದು ಒಂದು ವೇಳೆ ಟಿಕೆಟ್​ ನೀಡದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಿರಾದ ತೊಗರಿಗುಂಟೆಯ ಗೊಲ್ಲರಹಟ್ಟಿ ಗ್ರಾಮಸ್ಥರ ಆಗ್ರಹ ಇದಾಗಿದೆ. ಶಿರಾದಲ್ಲಿ 40 ಸಾವಿರಕ್ಕೂ ಹೆಚ್ಚು ಕಾಡುಗೊಲ್ಲ ಸಮುದಾಯದ ಮತದಾರರಿದ್ದಾರೆ. ಟಿಕೆಟ್ ನೀಡಿದ್ರೆ ಎಲ್ಲರೂ ಒಟ್ಟಾಗಿ ನಮ್ಮ ಅಭ್ಯರ್ಥಿ ಗೆಲ್ಲಿಸ್ತೇವೆ. ನಮ್ಮ […]

BJPಗೆ ತಲೆನೋವಾದ ಶಿರಾ ಉಪ ಸಮರದ ಟಿಕೆಟ್ ಹಂಚಿಕೆ
Edited By:

Updated on: Oct 03, 2020 | 10:31 AM

ತುಮಕೂರು: ನವೆಂಬರ್​ 3ರಂದು ನಡೆಯಲಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ BJP ಗೆ ಚುನಾವಣೆಯ ಟಿಕೆಟ್ ಹಂಚಿಕೆ ಪ್ರಕ್ರಿಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದೀಗ, ಪಕ್ಷದ ಟಿಕೆಟ್​ನ ಕಾಡುಗೊಲ್ಲರಿಗೆ ನೀಡಬೇಕೆಂದು ಸಮುದಾಯದವರು ಪಟ್ಟು ಹಿಡಿದಿದ್ದು ಒಂದು ವೇಳೆ ಟಿಕೆಟ್​ ನೀಡದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಿರಾದ ತೊಗರಿಗುಂಟೆಯ ಗೊಲ್ಲರಹಟ್ಟಿ ಗ್ರಾಮಸ್ಥರ ಆಗ್ರಹ ಇದಾಗಿದೆ.

ಶಿರಾದಲ್ಲಿ 40 ಸಾವಿರಕ್ಕೂ ಹೆಚ್ಚು ಕಾಡುಗೊಲ್ಲ ಸಮುದಾಯದ ಮತದಾರರಿದ್ದಾರೆ. ಟಿಕೆಟ್ ನೀಡಿದ್ರೆ ಎಲ್ಲರೂ ಒಟ್ಟಾಗಿ ನಮ್ಮ ಅಭ್ಯರ್ಥಿ ಗೆಲ್ಲಿಸ್ತೇವೆ. ನಮ್ಮ ಸಮುದಾಯದ ವಿದ್ಯಾವಂತ ಡಾ.ಶಿವಕುಮಾರ್ ಇದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ನಾವೆಲ್ಲರೂ ಸೇರಿ ಗೆಲ್ಲಿಸುತ್ತೇವೆ‌‌‌. ಬೇರೆ ಯಾರಿಗೇ ಟಿಕೆಟ್ ನೀಡಿದ್ರೂ ಅವ್ರು ಗೆಲ್ಲೋಕೆ‌ ಆಗಲ್ಲ ಎಂದು ಕಮಲ ಪಕ್ಷಕ್ಕೆ ಕಾಡುಗೊಲ್ಲ ಸಮುದಾಯದ ಮುಖಂಡರ ಎಚ್ಚರಿಕೆ ಕೊಟ್ಟಿದ್ದಾರೆ.