ಕೃಷ್ಣನ ಭಕ್ತರಿಗೆ ನಿರಾಸೆ, ಜೂನ್ 15ರ ನಂತರ ಇಸ್ಕಾನ್ ಓಪನ್

ಬೆಂಗಳೂರು: ಜೂನ್ 8ಅಂದ್ರೆ ನಾಳೆಯಿಂದ ಗರ್ಭ ಗುಡಿಯಲ್ಲಿ ಬಂಧಿಯಾಗಿದ್ದ ಭಗವಂತನಿಗೆ ಮುಕ್ತಿ ಸಿಗಲಿದೆ. ರಾಜ್ಯಾದ್ಯಂತ ಎಲ್ಲಾ ದೇವಾಲಯಗಳು ಓಪನ್ ಆಗಲಿವೆ. ಆದರೆ ಬೆಂಗಳೂರಿನ ಪ್ರತಿಷ್ಠಿತ ದೇವಾಲಯ ಇಸ್ಕಾನ್ ಜೂನ್ 15ರ ನಂತರ ತೆರೆಯಲು ಸಮಯಾವಕಾಶ ಕೋರಿದೆ. ಸಿಲಿಕಾನ್ ಸಿಟಿಯ ಇಸ್ಕಾನ್ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸಾಮಾಜಿಕ ಅಂತರ ಕಾಪಾಡಲು ತೊಂದರೆಯಾಗುತ್ತದೆ. ಹೀಗಾಗಿ ಸಂಪೂರ್ಣವಾಗಿ ತಯಾರಿ ಮಾಡಿಕೊಂಡು ದೇವಸ್ಥಾನ ತೆರೆಯುವುದಾಗಿ ಆಡಳಿತ ಮಂಡಳಿ ನಿರ್ಧರಿಸಿದೆ. ಹೀಗಾಗಿ ಇಸ್ಕಾನ್ ಬಾಗಿಲು ತೆರೆಯುವುದು ಕೆಲ ದಿನಗಳ ಕಾಲ ತಡವಾಗಲಿದೆ. ದೇವಸ್ಥಾನದ […]

ಕೃಷ್ಣನ ಭಕ್ತರಿಗೆ ನಿರಾಸೆ, ಜೂನ್ 15ರ ನಂತರ ಇಸ್ಕಾನ್ ಓಪನ್

Updated on: Jun 07, 2020 | 3:33 PM

ಬೆಂಗಳೂರು: ಜೂನ್ 8ಅಂದ್ರೆ ನಾಳೆಯಿಂದ ಗರ್ಭ ಗುಡಿಯಲ್ಲಿ ಬಂಧಿಯಾಗಿದ್ದ ಭಗವಂತನಿಗೆ ಮುಕ್ತಿ ಸಿಗಲಿದೆ. ರಾಜ್ಯಾದ್ಯಂತ ಎಲ್ಲಾ ದೇವಾಲಯಗಳು ಓಪನ್ ಆಗಲಿವೆ. ಆದರೆ ಬೆಂಗಳೂರಿನ ಪ್ರತಿಷ್ಠಿತ ದೇವಾಲಯ ಇಸ್ಕಾನ್ ಜೂನ್ 15ರ ನಂತರ ತೆರೆಯಲು ಸಮಯಾವಕಾಶ ಕೋರಿದೆ.

ಸಿಲಿಕಾನ್ ಸಿಟಿಯ ಇಸ್ಕಾನ್ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸಾಮಾಜಿಕ ಅಂತರ ಕಾಪಾಡಲು ತೊಂದರೆಯಾಗುತ್ತದೆ. ಹೀಗಾಗಿ ಸಂಪೂರ್ಣವಾಗಿ ತಯಾರಿ ಮಾಡಿಕೊಂಡು ದೇವಸ್ಥಾನ ತೆರೆಯುವುದಾಗಿ ಆಡಳಿತ ಮಂಡಳಿ ನಿರ್ಧರಿಸಿದೆ. ಹೀಗಾಗಿ ಇಸ್ಕಾನ್ ಬಾಗಿಲು ತೆರೆಯುವುದು ಕೆಲ ದಿನಗಳ ಕಾಲ ತಡವಾಗಲಿದೆ.

ದೇವಸ್ಥಾನದ ಬಾಗಿಲು ತೆರೆಯಲು ಈಗಾಗಲೇ ಸಿದ್ಧತೆ ಪ್ರಾರಂಭವಾಗಿದೆ. ಆದರೆ ಭಕ್ತರ ಆಗಮನಕ್ಕುಣವಾಗಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಹೀಗಾಗಿ ತಡವಾದರೂ ಪರವಾಗಿಲ್ಲ ಸೂಕ್ತ ಭದ್ರತೆ, ವ್ಯವಸ್ಥೆ ಮಾಡಿಕೊಂಡೇ ಬಾಗಿಲು ತೆರೆಯಲು ನಿರ್ಧರಿಸಿದೆ.

Published On - 9:47 am, Sun, 7 June 20