ಫಾಲೋವರ್ಸ್ ವಿಚಾರದಲ್ಲಿ ಶಾರುಖ್ನ ಹಿಂದಿಕ್ಕಿದ ಬಾಲ ನಟಿ; ಇವರ ಆಸ್ತಿ 25 ಕೋಟಿ ರೂಪಾಯಿ
ಜನ್ನತ್ ಇನ್‌ಸ್ಟಾಗ್ರಾಮ್‌ನಲ್ಲಿ ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಫಾಲೋವರ್ಸ್ ವಿಷಯದಲ್ಲಿ ಶಾರುಖ್ ಖಾನ್ ಅವರನ್ನೂ ಮೀರಿಸಿದ್ದಾರೆ. ಜನ್ನತ್ ಇನ್‌ಸ್ಟಾಗ್ರಾಮ್‌ನಲ್ಲಿ 49.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅಂದರೆ 4.92 ಕೋಟಿ. ಶಾರುಖ್ 46.5 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಬಾಲ ಕಲಾವಿದರಾಗಿ ಪ್ರೇಕ್ಷಕರ ಮನದಲ್ಲಿ ವಿಶೇಷ ಛಾಪು ಮೂಡಿಸಿದ ಅನೇಕರು ಇದ್ದಾರೆ. ಅವರು ಬೆಳೆದು ದೊಡ್ಡವಾರದ ಬಳಿಕ ಉದ್ಯಮಕ್ಕೆ ಮರಳಿ ಗೆದ್ದವರೂ ಅನೇಕರಿದ್ದಾರೆ. ಈ ಪಟ್ಟಿಯಲ್ಲಿ ಆಲಿಯಾ ಭಟ್ (Alia Bhatt) ಅವರಿಂದ ಹಿಡಿದು ಶ್ರೀದೇವಿಯವರೆಗೆ ಅನೇಕ ಕಲಾವಿದರು ಇದ್ದಾರೆ. ಜನ್ನತ್ ಜುಬೇರ್ ತಮ್ಮ ಏಳನೇ ವಯಸ್ಸಿಗೆ ಧಾರಾವಾಹಿ ಲೋಕಕ್ಕೆ ಕಾಲಿಟ್ಟರು. ಈಗ ಬೆಳೆದು ದೊಡ್ಡವರಾದ ಬಳಿಕವೂ ಅವರಿಗೆ ಬೇಡಿಕೆ ಹಾಗೆಯೇ ಇದೆ. ಈ ನಟಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಅನುಯಾಯಿಗಳ ಸಂಖ್ಯೆಯಲ್ಲಿ ಬಾಲಿವುಡ್ ಕಿಂಗ್ ಅಂದರೆ ಶಾರುಖ್ ಖಾನ್ ಅವರನ್ನು ಮೀರಿಸಿದ್ದಾರೆ.
ಜನ್ನತ್ ಏಳನೇ ವಯಸ್ಸಿಗೆ ‘ಚಾಂದ್ ಕೆ ಪರ್ ಚಲೋ’ ಧಾರಾವಾಹಿಯ ಮೂಲಕ ಸಣ್ಣ ಪರದೆಗೆ ಪಾದಾರ್ಪಣೆ ಮಾಡಿದರು. ಅದರ ನಂತರ ಅವರು ಜನಪ್ರಿಯ ಧಾರಾವಾಹಿ ‘ದಿಲ್ ಮಿಲ್ ಗಯೆ’ ನಲ್ಲಿ ಅತಿಥಿ ಕಲಾವಿದೆಯಾಗಿ ಕಾಣಿಸಿಕೊಂಡರು. ಈ ಸರಣಿಯು ಜನ್ನತ್ ಅವರ ಜನಪ್ರಿಯತೆ ಹೆಚ್ಚಿಸಿತು. ‘ಕಾಶಿ ಅಬ್ ನಾ ರಹೇ ತೇರಾ ಕಾಗಜ್ ಕೋರಾ’ ಧಾರಾವಾಹಿ ಕೂಡ ಪ್ರೇಕ್ಷಕರಿಂದ ಅಪಾರ ಪ್ರೀತಿ ಗಳಿಸಿದೆ. ಅದರ ನಂತರ ಅವರು ‘ಫುಲ್ವಾ’ ಧಾರಾವಾಹಿಯಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದರು. ಈ ಎರಡು ಧಾರಾವಾಹಿಗಳಿಂದಾಗಿ ಜನ್ನತ್ ಅವರ ಅದೃಷ್ಟ ಬದಲಾಯಿತು. ಬಾಲಿವುಡ್‌ನ ಹಾದಿಯೂ ಸುಗಮವಾಯಿತು. ‘ಲವ್ ಕಾ ದಿ ಎಂಡ್’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಅವರ ತಂಗಿ ಪಾತ್ರದಲ್ಲಿ ನಟಿಸಿದ್ದರು.
ಜನ್ನತ್ ಇನ್‌ಸ್ಟಾಗ್ರಾಮ್‌ನಲ್ಲಿ ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಫಾಲೋವರ್ಸ್ ವಿಷಯದಲ್ಲಿ ಶಾರುಖ್ ಖಾನ್ ಅವರನ್ನೂ ಮೀರಿಸಿದ್ದಾರೆ. ಜನ್ನತ್ ಇನ್‌ಸ್ಟಾಗ್ರಾಮ್‌ನಲ್ಲಿ 49.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅಂದರೆ 4.92 ಕೋಟಿ. ಶಾರುಖ್ 46.5 ಮಿಲಿಯನ್ (4.65 ಕೋಟಿ) ಹಿಂಬಾಲಕರನ್ನು ಹೊಂದಿದ್ದಾರೆ. ಶಾರುಖ್ ಮಾತ್ರವಲ್ಲದೆ ಕರೀನಾ ಕಪೂರ್ ಮತ್ತು ಸಾರಾ ಅಲಿ ಖಾನ್ ಅವರಂತಹ ನಟಿಯರನ್ನು ಸಹ ಜನ್ನತ್ ಹಿಂದಿಕ್ಕಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಾರಾ 4.5 ಕೋಟಿ ಫಾಲೋವರ್ಸ್ ಹೊಂದಿದ್ದರೆ, ಕರೀನಾ ಕಪೂರ್ 1.2 ಕೋಟಿ ಫಾಲೋವರ್ಸ್ ಹೊಂದಿದ್ದಾರೆ.
ಇದನ್ನೂ ಓದಿ: ಸಹೋದರನಿಗಾಗಿ ಮಾಡೆಲ್ ಆದ ಶಾರುಖ್ ಪುತ್ರಿ ಸುಹಾನಾ ಖಾನ್
ಕೆಲವು ವರದಿಗಳ ಪ್ರಕಾರ, ಜನ್ನತ್ ಅವರ ಒಟ್ಟೂ ಆಸ್ತಿ 25 ಕೋಟಿ ರೂಪಾಯಿ. ಅವರು ತಿಂಗಳಿಗೆ ಸುಮಾರು 25 ಲಕ್ಷ ರೂಪಾಯಿ ದುಡಿಯುತ್ತಾರೆ. ‘ಖತ್ರೋನ್ ಕೆ ಕಿಲಾಡಿ’ ಕಾರ್ಯಕ್ರಮಕ್ಕಾಗಿ ಜನ್ನತ್ ಇತರ ಸ್ಪರ್ಧಿಗಳಿಗಿಂತ ಹೆಚ್ಚಿನ ಸಂಭಾವನೆಯನ್ನು ಪಡೆದಿದ್ದರು. ಈ ಕಾರ್ಯಕ್ರಮದ ಒಂದು ಸಂಚಿಕೆಗೆ ಅವರು 18 ಲಕ್ಷ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಚಾರದ ಪೋಸ್ಟ್ ಗೆ ಒಂದೂವರೆಯಿಂದ ಎರಡು ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ. ಅಂದಹಾಗೆ ಅವರಿಗೆ ಈಗ ವಯಸ್ಸು ಕೇವಲ 22. ತಮ್ಮ ವಯಸ್ಸಿಗಿಂತ ಹೆಚ್ಚಿನ ಹಣ ಅವರ ಬಳಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ