ಹಿರಿಯ ಪತ್ರಕರ್ತರ ಗೋಲ್ಡ್ ಚೈನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್ಆರ್ಟಿಸಿ ಕಂಡಕ್ಟರ್!
ಬಸ್ನಲ್ಲಿ ಸಿಕ್ಕ ಅಷ್ಟೂ ಗೋಲ್ಡ್ ಅನ್ನು ಘಟಕ ವ್ಯವಸ್ಥಾಪಕ ಎಂ.ಎಸ್.ಹಿರೇಮಠ ಮತ್ತು ಸಾರಿಗೆ ನಿರೀಕ್ಷಕ ರೇವಣಸಿದ್ದ ಅವರ ಸಮ್ಮುಖದಲ್ಲಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ..
ವಿಜಯಪುರ: ಹೈದ್ರಾಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಬಸ್ನಲ್ಲಿ ಸಿಕ್ಕ ಗೋಲ್ಡ್ ಚೈನ್ನ್ನು ವಾರಸುದಾರರಿಗೆ ಹಿಂತಿರುಗಿಸಿ ಕೆಎಸ್ಆರ್ಟಿಸಿ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರ ಈಶಾನ್ಯ ಕೆಎಸ್ಆರ್ಟಿಸಿ ಘಟಕದ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ತಮ್ಮ ಪ್ರಾಮಾಣಿಕತೆ ತೋರಿದ್ದಾರೆ.
ಇಂದು ಬೆಳಗಿನ ಜಾವ ಹೈದ್ರಾಬಾದ್ನಿಂದ ವಿಜಯಪುರಕ್ಕೆ ಬಂದ ಬಸ್ನಲ್ಲಿ ಹಿರಿಯ ಪತ್ರಕರ್ತ ಚಂದ್ರಕಾಂತ್ ಮಾವೂರ ಚೈನ್ ಕಳೆದುಕೊಂಡಿದ್ರು. ಆ ಚೈನ್ ನಿರ್ವಾಹಕರಿಗೆ ದೊರಕಿತ್ತು. ಈ ವೇಳೆ ಬಸ್ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ಪ್ರಯಾಣಿಕರ ರಿಸರ್ವೇಶನ್ ಟಿಕೆಟ್ನಲ್ಲಿನ ನಂಬರ್ಗೆ ಕರೆ ಮಾಡಿ ಚೈನ್ ಸಿಕ್ಕಿದ್ದು, ಅದನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಬಸ್ನಲ್ಲಿ ಸಿಕ್ಕ ಅಷ್ಟೂ ಗೋಲ್ಡ್ ಅನ್ನು ಘಟಕ ವ್ಯವಸ್ಥಾಪಕ ಎಂ.ಎಸ್.ಹಿರೇಮಠ ಮತ್ತು ಸಾರಿಗೆ ನಿರೀಕ್ಷಕ ರೇವಣಸಿದ್ದ ಅವರ ಸಮ್ಮುಖದಲ್ಲಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.
Published On - 10:27 am, Thu, 28 January 21