Kannada News » Latest news » Kadalekayi parishe groundnut fair to be held in a simple manner due to covid19
ಐತಿಹಾಸಿಕ ಕಡಲೇಕಾಯಿ ಪರಿಷೆಗೆ ಬ್ರೇಕ್: ಈ ಬಾರಿ ಸಾಂಪ್ರದಾಯಿಕ ಪೂಜೆ ಅಷ್ಟೇ..
ಬೆಂಗಳೂರು: ನಗರದ ಐತಿಹಾಸಿಕ ಕಡಲೇಕಾಯಿ ಪರಿಷೆಗೆ ಈ ಬಾರಿ ಬ್ರೇಕ್ ಬಿದ್ದಿದೆ. ಕೊರೊನಾ ಹಿನ್ನೆಲೆಯಲ್ಲಿ ಕಡಲೇಕಾಯಿ ಪರಿಷೆಗೆ ಬ್ರೇಕ್ ಬಿದ್ದಿದ್ದು ಈ ಬಾರಿ ಕೇವಲ ದೊಡ್ಡ ಗಣಪತಿ ಮತ್ತು ಬಸವಣ್ಣನಿಗೆ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಡಲೇಕಾಯಿ ವ್ಯಾಪಾರ ವಹಿವಾಟಿಗೆ ಅವಕಾಶವಿರುವುದಿಲ್ಲ. ಕಾರ್ತಿಕ ಮಾಸದ ಕಡೆ ಸೋಮವಾರ ನಡೀತಾ ಇದ್ದ ಪರಿಷೆ ಬಸವನಗುಡಿಯಲ್ಲಿ ಅದ್ದೂರಿಯಾಗಿ ನಡೀತಾ ಇತ್ತು. ಈ ಬಾರಿ ಭಕ್ತರು ಕೇವಲ ದೇವರ ದರ್ಶನ ಪಡಿಯಬಹುದು. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಪರಿಷೆ ಆಚರಿಸಲು […]
ಬೆಂಗಳೂರು: ನಗರದ ಐತಿಹಾಸಿಕ ಕಡಲೇಕಾಯಿ ಪರಿಷೆಗೆ ಈ ಬಾರಿ ಬ್ರೇಕ್ ಬಿದ್ದಿದೆ. ಕೊರೊನಾ ಹಿನ್ನೆಲೆಯಲ್ಲಿ ಕಡಲೇಕಾಯಿ ಪರಿಷೆಗೆ ಬ್ರೇಕ್ ಬಿದ್ದಿದ್ದು ಈ ಬಾರಿ ಕೇವಲ ದೊಡ್ಡ ಗಣಪತಿ ಮತ್ತು ಬಸವಣ್ಣನಿಗೆ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಯಾವುದೇ ಕಡಲೇಕಾಯಿ ವ್ಯಾಪಾರ ವಹಿವಾಟಿಗೆ ಅವಕಾಶವಿರುವುದಿಲ್ಲ. ಕಾರ್ತಿಕ ಮಾಸದ ಕಡೆ ಸೋಮವಾರ ನಡೀತಾ ಇದ್ದ ಪರಿಷೆ ಬಸವನಗುಡಿಯಲ್ಲಿ ಅದ್ದೂರಿಯಾಗಿ ನಡೀತಾ ಇತ್ತು. ಈ ಬಾರಿ ಭಕ್ತರು ಕೇವಲ ದೇವರ ದರ್ಶನ ಪಡಿಯಬಹುದು. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಪರಿಷೆ ಆಚರಿಸಲು ಧಾರ್ಮಿಕ ದತ್ತಿ ಇಲಾಖೆ ನಿರ್ಧರಿಸಿದೆ.