AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannadathiಎಂಡಿ ಸೀಟ್ ಪಡೆಯಲು ಹೋದ ಕನ್ನಡತಿ ಸಾನಿಯಾಗೆ ಒಟ್ಟೊಟ್ಟಿಗೆ ಬಂತು 4 ಸಂಕಷ್ಟಗಳು!

ಸಾನಿಯಾ ಮಾಡಿದ ಕಂತ್ರಿ ಕೆಲಸಗಳು ಬಯಲಾಗುವ ಎಲ್ಲಾ ಲಕ್ಷಣ ಗೋಚವಾಗುತ್ತಿದೆ. ಅಷ್ಟಕ್ಕೂ ಸಾನಿಯಾಗೆ ಉಂಟಾಗಿರುವ ನಾಲ್ಕು ತೊಂದರೆಗಳು ಯಾವವು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ!

Kannadathiಎಂಡಿ ಸೀಟ್ ಪಡೆಯಲು ಹೋದ ಕನ್ನಡತಿ ಸಾನಿಯಾಗೆ ಒಟ್ಟೊಟ್ಟಿಗೆ ಬಂತು 4 ಸಂಕಷ್ಟಗಳು!
ಸಾನಿಯಾ
ರಾಜೇಶ್ ದುಗ್ಗುಮನೆ
|

Updated on:Feb 06, 2021 | 4:48 PM

Share

‘ಕನ್ನಡತಿ’ ಧಾರಾವಾಹಿಯ ವಿಲನ್​ ಪಾತ್ರಧಾರಿ ಸಾನಿಯಾಗೆ ಒಂದೇ ಹಠ. ಹೇಗಾದರೂ ಮಾಡಿ ಮಾಲಾ ಇನ್​​​ಸ್ಟಿಟ್ಯೂಟ್​ನ ಎಂಡಿ ಪಟ್ಟಕ್ಕೆ ಏರಲೇಬೇಕು ಎಂದು. ಆದರೆ, ಸದ್ಯ, ಸಾನಿಯಾಗೆ ಒಟ್ಟೊಟ್ಟಿಗೆ ನಾಲ್ಕು ಸಂಕಷ್ಟಗಳು ಎದುರಾಗಿವೆ. ಎಂಡಿ ಪಟ್ಟ ಹಾಗಿರಲಿ, ಸಾನಿಯಾ ಮಾಡಿದ ಕಂತ್ರಿ ಕೆಲಸಗಳು ಬಯಲಾಗುವ ಎಲ್ಲಾ ಲಕ್ಷಣ ಗೋಚವಾಗುತ್ತಿದೆ. ಅಷ್ಟಕ್ಕೂ ಸಾನಿಯಾಗೆ ಉಂಟಾಗಿರುವ ನಾಲ್ಕು ತೊಂದರೆಗಳು ಯಾವವು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಕೈ ತಪ್ಪಿದ ಎಂಡಿ ಪಟ್ಟ: ರತ್ನಮಾಲಾ ಅವರು ನಡೆಸುತ್ತಿರುವ ಮಾಲಾ ಇನ್​​ಸ್ಟಿಟ್ಯೂಟ್​ನ ಎಂಡಿ ಆಗಬೇಕು ಎನ್ನುವುದು ಸಾನಿಯಾ ಕನಸಾಗಿತ್ತು. ಇದಕ್ಕಾಗಿ ರತ್ನಾಮಾಲಾ ಅವರ ಜತೆ ತುಂಬಾನೇ ಒಳ್ಳೆಯವರಂತೆ ನಡೆದುಕೊಂಡಿದ್ದರು. ಇನ್ನೇನು, ಎಂಡಿ ಪಟ್ಟ ಸಿಗಬೇಕಿತ್ತು. ಆಗ ಸಾನಿಯಾ ಮಾಡಿಕೊಂಡ ಸಣ್ಣ ಎಡವಟ್ಟಿನಿಂದ ಎಂಡಿ ಪಟ್ಟ ಕೈತಪ್ಪಿ ಹೋಗಿದೆ.

ಸಾನಿಯಾ

ಕೋರ್ಟ್​​ನಲ್ಲಿ ಸಾಕ್ಷಿ ಹೇಳೋಕೆ ಹೊರಟ ಪೂಜಾ! ಹರ್ಷನನ್ನು ಸಿಕ್ಕಿ ಹಾಕಿಸಲು ಮನೆಯಲ್ಲಿ ಡ್ರಗ್ಸ್​ ಇಟ್ಟಿದ್ದರು ಸಾನಿಯಾ. ಆದರೆ, ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದು ವರುಧಿನಿ. ಈಗ ವರುಧಿನಿ ಜೈಲಿನಲ್ಲಿದ್ದಾಳೆ. ವರುಧಿನಿ ಪ್ರಕರಣ ಸದ್ಯ ಕೋರ್ಟ್​ನಲ್ಲಿದೆ. ಇದು ಕೂಡ ಸಾನಿಯಾಗೆ ಸಂಕಷ್ಟ ತಂದೊಡ್ಡಬಹುದು. ಏಕೆಂದರೆ ಕೋರ್ಟ್​ನಲ್ಲಿ ಸಾಕ್ಷಿ ಹೇಳುತ್ತಿರುವುದು ಪತ್ರಕರ್ತೆ ಪೂಜಾ. ಸಾನಿಯಾ ಮಾತು ಕೇಳಿ ಪೂಜಾ, ಹರ್ಷನ ಮನೆಯಲ್ಲಿ ಡ್ರಗ್ಸ್​ ಇದೆ ಎಂದು ಪೊಲೀಸರಿಗೆ ಕರೆ ಮಾಡಿದ್ದಳು. ಈಗ ಪೂಜಾ ಕೋರ್ಟ್​ನಲ್ಲಿ ಸಾಕ್ಷಿ ಹೇಳೋಕೆ ಹೊರಟಿರುವುದು ಸಾನಿಯಾರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಹರ್ಷ

ವರುಧಿನಿ ಜೈಲಿನಿಂದ ಹೊರ ಬಂದ್ರೆ ಅಪಾಯ! ಹರ್ಷನನ್ನು ಸಿಕ್ಕಿ ಹಾಕಿಸಲು ಡ್ರಗ್ಸ್​ ಇಟ್ಟಿದ್ದು ಸಾನಿಯಾಳೇ ಎನ್ನುವ ವಿಚಾರ ಜೈಲಿನಲ್ಲಿರುವ ವರುಧಿನಿಗೆ ಗೊತ್ತಿದೆ. ಒಂದೊಮ್ಮೆ ವರುಧಿನಿ ಜೈಲಿನಿಂದ ಹೊರ ಬಂದರೆ, ಸಾನಿಯಾಗೆ ಅಪಾಯ ಕಟ್ಟಿಟ್ಟಬುತ್ತಿ. ವರುಧಿನಿ ಈಗಾಗಲೇ ಸಾನಿಯಾ ಮೇಲೆ ಸಾಕಷ್ಟು ದ್ವೇಷ ಸಾಧಿಸುತ್ತಿದ್ದಾಳೆ. ಹೀಗಾಗಿ, ವರುಧಿನಿ ಜೈಲಿನಿಂದ ಬಿಡುಗಡೆ ಆದರೆ, ಸಾನಿಯಾಗೆ ಅಪಾಯ ಆಗೋದು ಖಚಿತ.

ವರುಧಿನಿ

ವೈರಿ ಜತೆ ಕೈ ಜೋಡಿಸಿದ ಆದಿ ಈ ಮೊದಲು ಹರ್ಷನನ್ನು ಸಾಯಿಸಲು ಸಾನಿಯಾ ರೌಡಿ ಒಬ್ಬನಿಗೆ ಸುಪಾರಿ ನೀಡಿದ್ದರು. ಈಗ ಇದೇ ರೌಡಿ ಜತೆ ಸಾನಿಯಾ ಗಂಡ ಆದಿ ಕ್ಲೋಸ್​ ಆಗಿದ್ದಾನೆ. ಒಂದೊಮ್ಮೆ ಆ ರೌಡಿ ನಿಜಾಂಶ ಬಾಯ್ಬಿಟ್ಟರೆ ಸಾನಿಯಾಳ ಅಸಲಿ ಮುಖ ಬಯಲಾಗಲಿದೆ.

ಸಿನಿಮಾ ಚಾನ್ಸ್ ನೆಪದಲ್ಲಿ ರೇಪ್, ಕಿರುತೆರೆ ನಟಿಯಿಂದ ಆರೋಪ

Published On - 4:33 pm, Sat, 6 February 21

ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ