ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸದಂತೆ ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ: ಸತೀಶ್ ಜಾರಕಿಹೊಳಿ, ಸಚಿವ

ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸದಂತೆ ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ: ಸತೀಶ್ ಜಾರಕಿಹೊಳಿ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 30, 2023 | 5:33 PM

ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಬದಲಾಗುತ್ತಾರಾ? ಅಂತ ಕೇಳಿದಾಗಲಂತೂ ಅವರು ಸಿಡಿಮಿಡಿಗೊಂಡರು. ಈ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸಬೇಕು, ತಾವು ಉತ್ತರಿಸಲಾಗಲ್ಲ, ಅಲ್ಲದೆ ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಅಂತ ಹೇಳಿದರು.

ವಿಜಯಪುರ: ವಿಜಯಪುರ ಜಿಲ್ಲೆ ಪ್ರವಾಸದಲ್ಲಿರುವ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರ ನೀಡಿದರು. ರಾಜಾ ವೆಂಕಟಪ್ಪ ನಾಯಕ್ (Raja Venkatappa Nayak) ಸರ್ಕಾರ ಬದಲಾವಣೆ ಮಾಡುವ ಸಾಮರ್ಥ್ಯ ತಮ್ಮ ಸಮುದಾಯಕ್ಕಿದೆ ಅಂತ ಹೇಳಿರುವ ಬಗ್ಗೆ ಕೇಳಿದಾಗ ಸತೀಶ್, ಅವರು ಹೇಳಿದ್ದು ಅವರನ್ನೇ ಕೇಳಿ ಎಂದರು. ಸತೀಶ್ ಸಹೋದರ ಮತ್ತು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಇನ್ನು ಕೆಲವೇ ದಿನಗಳಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾಜಿ ಆಗಲಿದ್ದಾರೆ ಅಂತ ಪತ್ರಕರ್ತರು ಹೇಳಿದಾಗಲೂ ಅವರು, ಯಾಕೆ ಹೇಳಿದ್ದಾರೋ ತನಗಂತೂ ಗೊತ್ತಿಲ್ಲ, ಅವರನ್ನೇ ಕೇಳಿ ಅಂದರು. ದುಬೈ ಪ್ರವಾಸದ ಬಗ್ಗೆ ಮಾತಾಡಿದ ಅವರು ಆದು ಖಾಸಗಿ ವಿಷಯ, ಯಾವ ಶಾಸಕನೂ ತನ್ನೊಂದಿಗೆ ಬರುತ್ತಿಲ್ಲ ಎಂದು ಹೇಳಿದರು. ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಬದಲಾಗುತ್ತಾರಾ? ಅಂತ ಕೇಳಿದಾಗಲಂತೂ ಅವರು ಸಿಡಿಮಿಡಿಗೊಂಡರು. ಈ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸಬೇಕು, ತಾವು ಉತ್ತರಿಸಲಾಗಲ್ಲ, ಅಲ್ಲದೆ ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ