AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್ ಜಾರಕಿಹೊಳಿ ಭಿನ್ನಮತ ಚಟುವಟಿಕೆಗೆ ಸಿದ್ದರಾಮಯ್ಯ ಕುಮ್ಮಕ್ಕು: ಪ್ರಹ್ಲಾದ್​ ಜೋಶಿ

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಗಳ ತಾರಕಕ್ಕೆ ಏರಿದೆ. ಕಾಂಗ್ರೆಸ್ ಶಾಸಕರನ್ನು ಒಗ್ಗಟ್ಟಾಗಿ ಇಡುವಲ್ಲಿ ವಿಫಲ ಆಗಿದ್ದಾರೆ. ಡೈವರ್ಟ್ ಮಾಡಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್​​ ಪ್ರಭಾವ ಕುಗ್ಗಿಸಲು ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಮಾಡಲಾಗುತ್ತಿದೆ. ನಾವು ಸರ್ಕಾರ ತೆಗೆಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ಸತೀಶ್ ಜಾರಕಿಹೊಳಿ ಭಿನ್ನಮತ ಚಟುವಟಿಕೆಗೆ ಸಿದ್ದರಾಮಯ್ಯ ಕುಮ್ಮಕ್ಕು: ಪ್ರಹ್ಲಾದ್​ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
ಶಿವಕುಮಾರ್ ಪತ್ತಾರ್
| Updated By: ವಿವೇಕ ಬಿರಾದಾರ|

Updated on: Oct 29, 2023 | 1:07 PM

Share

ಹುಬ್ಬಳ್ಳಿ ಅ.29: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jrkiholi) ಭಿನ್ನಮತ ಚಟುವಟಿಕೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕುಮ್ಮಕ್ಕು ನೀಡುತ್ತಿದ್ದಾರೆ. ಎಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲ ಸೂತ್ರಧಾರ. ಎರಡು ವರ್ಷಗಳ ನಂತರ ಡಿಕೆ ಶಿವಕುಮಾರ್​ ಅಧಿಕಾರಕ್ಕೆ ಬರಬಾರದೆಂದು ಡ್ರಾಮಾ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆರೋಪ ಮಾಡಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್​ನವರು ಭ್ರಷ್ಟಾಚಾರ, ತುಷ್ಟೀಕರಣ ಬಿಟ್ಟು ಏನೂ ಮಾಡಿಲ್ಲ. ಬಿಎಸ್ ಯಡಿಯೂರಪ್ಪ ಅವರು ಬರ ಪರಿಹಾರ ಕೊಟ್ಟಿದ್ದರು. ಹಾಗೇ ನೀವು ಕೂಡ ಬರ ಪರಿಹಾರ ಕೊಡಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಪವರ್ ಕಟ್ ಆಗುತ್ತಿದೆ. ನಮ್ಮ ಸರ್ಕಾರದಲ್ಲಿ ಪರೀಕ್ಷಾ ಅಕ್ರಮ ಹೊರಗೆ ಬಂತು. ಈ ಅನುಭವದ ನಂತರವೂ ಮತ್ತೇಕೆ ಕಲಬುರಗಿ ಮತ್ತು ಯಾದಗಿರಿಯಲ್ಲಿ ಅಕ್ರಮ ನಡೆಯಿತು. ಅದರಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರದಲ್ಲಿ ಅಕ್ರಮಕ್ಕೆ ಮುಂದಾಗಿದ್ದು, ಬಹಳ ಗಂಭೀರವಾಗಿ ಯೋಚನೆ ಮಾಡಬೇಕಾದ ಸಂಗತಿ ಎಂದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರಿತು ಶಾಸಕ ಕೋನರೆಡ್ಡಿ ಮಾತಾಡಿರುವುದು ಸರಿ ಅಲ್ಲ. ಕುಚಿತ ಬುದ್ದಿಯ ಹೇಳಿಕೆ ನೀಡುವುದು ಸರಿ ಅಲ್ಲ. ಸಜ್ಜನಿಕೆ ಇರಬೇಕು. ಸಿಎಂ ಸಿದ್ದರಾಮಯ್ಯ ಸ್ವತಃ ಹೋಗಿ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದ್ದರು. ಬಹಳ ಘನತೆಯಿಂದ ನಾವು ಮಾತನಾಡಬೇಕು ಎಂದು ಶಾಸಕ ಕೋನರೆಡ್ಡಿ ವಿರುದ್ಧ ಚಾಟಿ ಬೀಸಿದರು.

ಸಿದ್ದರಾಮಯ್ಯ ಸ್ವಾಭಿಮಾನ ಕರ್ನಾಟಕ ಎಂದು ಟ್ವೀಟ್ ಕುರಿತು ಮಾತನಾಡಿದ ಅವರು ಕೇಂದ್ರ ಸರ್ಕಾರ ಏನು ಸ್ಪಷ್ಟೀಕರಣ ಕೇಳಿದೆ, ಅದನ್ನು ಸಿದ್ದರಾಮಯ್ಯ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಸಹಕರಿಸಿಲ್ಲ ಅಂತ ಡಿಕೆ ಶಿವಕುಮಾರ್​ ತಮ್ಮ ಎದೆಮೇಲೆ ಕೈಯಿಟ್ಟು ಹೇಳಲಿ. ಮೇಕೆದಾಟು ಯೋಜನೆಗೆ ನರೇಂದ್ರ ಮೋದಿ ಬಂದ ಮೇಲೆ ಕಾನೂನು ತಂದಿಲ್ಲ. ಅದು‌ ಯುಪಿಎ ಅವಧಿಯಲ್ಲಿನ ಕಾನೂನು. ಡಿಎಂಕೆ ಜೊತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತನಾಡಲಿ. ಡಿಎಂಕೆ ಪರ ಪ್ರಚಾರ ಮಾಡಿದ್ದೀರಿ, ಈಗ್ಯಾಕೆ ನೀವು ಮಾತಾಡುತ್ತಿಲ್ಲ. ಕರ್ನಾಟಕಕ್ಕೆ ಅನ್ಯಾಯ‌ ಮಾಡುತ್ತಿರುವುದು ಕಾಂಗ್ರೆಸ್ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಪ್ರತಿಯೊಂದು ಹುದ್ದೆಯೂ ಹರಾಜು, ಹೆಚ್ಚು ಹಣ ಕೊಡುವವರಿಗೆ ಪೋಸ್ಟಿಂಗ್; ಪ್ರಹ್ಲಾದ್ ಜೋಶಿ ಗಂಭೀರ ಆರೋಪ

ನೀಟ್​ ಮೋದಿ ಜಾರಿ ಮಾಡಿದ್ದಕ್ಕೆ ಕಾಂಗ್ರೆಸ್​ನವರು​ ವಿರೋಧಿಸುತ್ತಾರೆ. ಮಹದಾಯಿ ಹಿಡಿದು ಎಲ್ಲ ವಿಷಯದಲ್ಲಿ ಕಾಂಗ್ರೆಸ್​ನಿಂದ ಅನ್ಯಾಯವಾಗಿದೆ. ಸೋನಿಯಾ ಗಾಂಧಿ ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಅಂದಿದ್ದರು. ರಾಜ್ಯದಲ್ಲಿ ಯಾವುದೋ ಕಾರಣಕ್ಕೆ ಜನ ನಮ್ಮನ್ನು ಸೋಲಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿರಬಹುದು. ರಾಷ್ಟ್ರಮಟ್ಟದಲ್ಲಿ ನಿಮಗೆ ನಾಯಕತ್ವ ಇಲ್ಲ. ಮೂರನೇ ಬಾರಿಯೂ ಕಾಂಗ್ರೆಸ್​ ಪಕ್ಷದ ಸ್ಥಿತಿ ಹಾಗೇ ಆಗಲಿದೆ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಗಳ ತಾರಕಕ್ಕೆ ಏರಿದೆ. ಕಾಂಗ್ರೆಸ್ ಶಾಸಕರನ್ನು ಒಗ್ಗಟ್ಟಾಗಿ ಇಡುವಲ್ಲಿ ವಿಫಲ ಆಗಿದ್ದಾರೆ. ಡೈವರ್ಟ್ ಮಾಡಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್​​ ಪ್ರಭಾವ ಕುಗ್ಗಿಸಲು ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಮಾಡಲಾಗುತ್ತಿದೆ. ನಾವು ಸರ್ಕಾರ ತೆಗೆಯಲ್ಲ, ಐದು ವರ್ಷ ಚೆನ್ನಾಗಿ ಸರ್ಕಾರ ನಡೆಸಿ. ಸರ್ಕಾರ ತೆಗಿಬೇಕು ಅನ್ನೋದಾದರೇ 60-70 ಶಾಸಕರು ಬೇಕು. ‌ಸಿಎಂ ಸಿದ್ದರಾಮಯ್ಯನವರೇ ಬಾಲಿಶವಾಗಿ ಮಾತನಾಡಬೇಡಿ. ತಮ್ಮ ಒಳಜಗಳ ಮುಚ್ಚಲು ಇದೀಗ ಡೈವರ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ