ನೆರೆಯೇ ಇರಲಿ ಮಳೆಯೇ ಬರಲಿ… ಕೆಲಸಕ್ಕೆ ರೆಡಿಯಾದ್ರು ಲೈನ್ಮನ್!
GESCOM ನೌಕರರು ವಿಭಿನ್ನವಾಗಿ ಕೆಸರು ಗದ್ದೆಯ ಜಮೀನಿನಲ್ಲಿ ತೆರಳಿ ವಿದ್ಯುತ್ ದುರಸ್ತಿ ಮಾಡಿರುವ ಕಾರ್ಯಕ್ಕೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಬಳಿ ಜಮೀನಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ GESCOM ನೌಕರರಾದ ಶರಣಬಸವ ಮತ್ತು ಸಿದ್ದಯ್ಯ ಇಬ್ಬರು ವಿದ್ಯುತ್ ದುರಸ್ತಿಗಾಗಿ ಒಬ್ಬರ ಬೆನ್ನ ಮೇಲೆ ಒಬ್ಬರು ಹತ್ತಿ ಜಮೀನಿನ ಒಳಕ್ಕೆ ತೆರಳಿದ್ದಾರೆ. ಜಮೀನಿನಲ್ಲಿ ಕೆಸರು ಮಿಶ್ರಿತ ನೀರು ನಿಂತಿದ್ದ ಕಾರಣ ವಿದ್ಯುತ್ ಕಂಬ ಏರುವಾಗ ಅವಘಡ ಸಂಭವಿಸಬಾರದು ಅಂತಾ […]

GESCOM ನೌಕರರು ವಿಭಿನ್ನವಾಗಿ ಕೆಸರು ಗದ್ದೆಯ ಜಮೀನಿನಲ್ಲಿ ತೆರಳಿ ವಿದ್ಯುತ್ ದುರಸ್ತಿ ಮಾಡಿರುವ ಕಾರ್ಯಕ್ಕೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಬಳಿ ಜಮೀನಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ GESCOM ನೌಕರರಾದ ಶರಣಬಸವ ಮತ್ತು ಸಿದ್ದಯ್ಯ ಇಬ್ಬರು ವಿದ್ಯುತ್ ದುರಸ್ತಿಗಾಗಿ ಒಬ್ಬರ ಬೆನ್ನ ಮೇಲೆ ಒಬ್ಬರು ಹತ್ತಿ ಜಮೀನಿನ ಒಳಕ್ಕೆ ತೆರಳಿದ್ದಾರೆ. ಜಮೀನಿನಲ್ಲಿ ಕೆಸರು ಮಿಶ್ರಿತ ನೀರು ನಿಂತಿದ್ದ ಕಾರಣ ವಿದ್ಯುತ್ ಕಂಬ ಏರುವಾಗ ಅವಘಡ ಸಂಭವಿಸಬಾರದು ಅಂತಾ ಈ ರೀತಿ ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಇವರಿಬ್ಬರ ಪ್ಲಾನ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತ ಬೆಳಿಗಾವಿಯಲ್ಲಿ ನವಿಲುತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಮುನವಳ್ಳಿಯ ಯಲಿಗಾರ ಓಣಿಗೆ ನದಿಯ ನೀರು ನುಗ್ಗಿದೆ. ಜೊತೆಗೆ, ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲೂ ಸಹ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ಈ ನಡುವೆ ಜಲಾವೃತವಾಗಿರುವ ಪ್ರದೇಶದಲ್ಲಿ ಸಹ ಲೈನ್‌ಮ್ಯಾನ್‌ಗಳು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ.
ನೀರಿನಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ದುರಸ್ತಿ ಕಾರ್ಯ ಮಾಡುತ್ತಿರುವ ಬೆಳಗಾವಿಯ ಲೈನ್ಮನ್ಗಳು ನೀರಿನ ಮಧ್ಯೆ ಇರುವ ವಿದ್ಯುತ್ ಕಂಬಗಳನ್ನ ಏರಿ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಮುಳಗಡೆಯಾದ ಪ್ರದೇಶದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪವರ್ಮನ್ಗಳ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.



