ಮುಂಬೈನಿಂದ ಬಂದು ಕ್ವಾರಂಟೈನ್ ಆಗಿದ್ದ ವ್ಯಕ್ತಿ ಒಂದೇ ದಿನದಲ್ಲಿ ಎಸ್ಕೇಪ್! ಎಲ್ಲಿ?
ಗದಗ: ಮುಂಬೈನಿಂದ ಬಂದಿದ್ದ ವ್ಯಕ್ತಿ ಒಂದೇ ದಿನದಲ್ಲಿ ಕ್ವಾರಂಟೈನ್ ಕೇಂದ್ರದಿಂದ ಎಸ್ಕೇಪ್ ಆಗಿರುವ ಘಟನೆ ಗದಗದಲ್ಲಿ ನಡೆದಿದೆ. ಇದರಿಂದ ಗದಗ ನಗರದ ಸುತ್ತಮುತ್ತ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಜೂನ್ 2ರಂದು ಮುಂಬೈನಿಂದ ಗದಗ್ಗೆ ವ್ಯಕ್ತಿ ಆಗಮಿಸಿದ್ದ. ಕ್ವಾರಂಟೈನ್ಗೆ ಒಳಗಾಗದೇ ಬುಧವಾರ ನಗರದಲ್ಲಿ ಎಲ್ಲೆಂದರಲ್ಲಿ ಓಡಾಟ ನಡೆಸುತ್ತಿದ್ದ. ಹಾಗಾಗಿ ಅಧಿಕಾರಿಗಳು ಹರಸಾಹಸ ಪಟ್ಟು ಆತನನ್ನು ಕ್ವಾರಂಟೈನ್ ಮಾಡಿದ್ದರು. ಆದ್ರೂ ಸಹ ಒಂದೇ ದಿನದಲ್ಲಿ ಕ್ವಾರಂಟೈನ್ ಕೇಂದ್ರದಿಂದ ಆಸಾಮಿ ಕಾಲ್ಕಿತ್ತಿದ್ದಾನೆ. ಆತನನ್ನು ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಎನ್ನಲಾಗಿದೆ. ಕೊರೊನಾ […]
Follow us on
ಗದಗ: ಮುಂಬೈನಿಂದ ಬಂದಿದ್ದ ವ್ಯಕ್ತಿ ಒಂದೇ ದಿನದಲ್ಲಿ ಕ್ವಾರಂಟೈನ್ ಕೇಂದ್ರದಿಂದ ಎಸ್ಕೇಪ್ ಆಗಿರುವ ಘಟನೆ ಗದಗದಲ್ಲಿ ನಡೆದಿದೆ. ಇದರಿಂದ ಗದಗ ನಗರದ ಸುತ್ತಮುತ್ತ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಜೂನ್ 2ರಂದು ಮುಂಬೈನಿಂದ ಗದಗ್ಗೆ ವ್ಯಕ್ತಿ ಆಗಮಿಸಿದ್ದ. ಕ್ವಾರಂಟೈನ್ಗೆ ಒಳಗಾಗದೇ ಬುಧವಾರ ನಗರದಲ್ಲಿ ಎಲ್ಲೆಂದರಲ್ಲಿ ಓಡಾಟ ನಡೆಸುತ್ತಿದ್ದ. ಹಾಗಾಗಿ ಅಧಿಕಾರಿಗಳು ಹರಸಾಹಸ ಪಟ್ಟು ಆತನನ್ನು ಕ್ವಾರಂಟೈನ್ ಮಾಡಿದ್ದರು. ಆದ್ರೂ ಸಹ ಒಂದೇ ದಿನದಲ್ಲಿ ಕ್ವಾರಂಟೈನ್ ಕೇಂದ್ರದಿಂದ ಆಸಾಮಿ ಕಾಲ್ಕಿತ್ತಿದ್ದಾನೆ.
ಆತನನ್ನು ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಎನ್ನಲಾಗಿದೆ. ಕೊರೊನಾ ಟೆಸ್ಟನಲ್ಲಿ ಆತನ ವರದಿ ನೆಗೆಟಿವ್ ಬಂದಿದೆ. ಆದರೂ ವಲಸಿಗರು 14 ದಿನ ಕ್ವಾರಂಟೈನಲ್ಲಿ ಇರಬೇಕು. ಹೀಗಾಗಿ ವ್ಯಕ್ತಿಯ ಪುಂಡಾಟಕ್ಕೆ ಅಧಿಕಾರಿಗಳು ಹೈರಾಣಾಗಿದ್ದಾರೆ.