ಸಾಕು ಪ್ರಾಣಿಗಳನ್ನ ತಿಂದು, ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಅಂದರ್!
ವಿಜಯಪುರ: ಎಲ್ಲೆಡೆ ಮಹಾಮಾರಿ ಕೊರೊನಾ ಕಾಟ. ಕಳೆದ ಎರಡು ತಿಂಗಳಿನಿಂದ ಮನೆಯಿಂದ ಆಚೆಬಾರದ ಸ್ಥಿತಿ ಉಂಟಾಗಿತ್ತು. ಸದ್ಯ ಲಾಕ್ಡೌನ್ ಸಡಿಲಿಕೆಯಾದರೂ ಸಹ ಕೊರೊನಾ ಮಾರಿ ಭಯ ಜನರಲ್ಲಿ ಇನ್ನೂ ಮನೆ ಮಾಡಿದೆ. ಇದಕ್ಕೆ ಕಾರಣ ಈ ಭಾಗದಲ್ಲಿ ಕಂಡು ಬಂದ ಚಿರತೆ. ಕಳೆದ 15 ದಿನಗಳಿಂದ ಚಿರತೆಯ ಕಾಟದಿಂದ ಇಲ್ಲಿನ ಜನರು ಹೈರಾಣಾಗಿದ್ದರು. ತೋಟದ ಮನೆಗಳಲ್ಲಿ ಸಾಕಿದ್ದ ನಾಯಿ, ಮೇಕೆ, ಕುರಿ, ಕರುಗಳು ಹಾಗೂ ಎಮ್ಮೆಯನ್ನು ಹೊತ್ತೊಯ್ದಿದ್ದ ಚಿರತೆ ಎಲ್ಲವನ್ನು ತಿಂದು ತೇಗಿತ್ತು. ಇಲ್ಲಿಯವರೆಗೆ 20 ಕ್ಕೂ […]
ವಿಜಯಪುರ: ಎಲ್ಲೆಡೆ ಮಹಾಮಾರಿ ಕೊರೊನಾ ಕಾಟ. ಕಳೆದ ಎರಡು ತಿಂಗಳಿನಿಂದ ಮನೆಯಿಂದ ಆಚೆಬಾರದ ಸ್ಥಿತಿ ಉಂಟಾಗಿತ್ತು. ಸದ್ಯ ಲಾಕ್ಡೌನ್ ಸಡಿಲಿಕೆಯಾದರೂ ಸಹ ಕೊರೊನಾ ಮಾರಿ ಭಯ ಜನರಲ್ಲಿ ಇನ್ನೂ ಮನೆ ಮಾಡಿದೆ. ಇದಕ್ಕೆ ಕಾರಣ ಈ ಭಾಗದಲ್ಲಿ ಕಂಡು ಬಂದ ಚಿರತೆ. ಕಳೆದ 15 ದಿನಗಳಿಂದ ಚಿರತೆಯ ಕಾಟದಿಂದ ಇಲ್ಲಿನ ಜನರು ಹೈರಾಣಾಗಿದ್ದರು.
ತೋಟದ ಮನೆಗಳಲ್ಲಿ ಸಾಕಿದ್ದ ನಾಯಿ, ಮೇಕೆ, ಕುರಿ, ಕರುಗಳು ಹಾಗೂ ಎಮ್ಮೆಯನ್ನು ಹೊತ್ತೊಯ್ದಿದ್ದ ಚಿರತೆ ಎಲ್ಲವನ್ನು ತಿಂದು ತೇಗಿತ್ತು. ಇಲ್ಲಿಯವರೆಗೆ 20 ಕ್ಕೂ ಆಧಿಕ ಸಾಕು ಪ್ರಾಣಿಗಳು ಚಿರತೆಯ ಹೊಟ್ಟೆ ಸೇರಿವೆ. 35 ರಿಂದ 50 ರಷ್ಟು ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು. ಸಾಕು ಪ್ರಾಣಿಗಳು ಚಿರತೆಗೆ ಆಹಾರವಾಗುತ್ತಿರುವುದರಿಂದ ಹಾಗೂ ಚಿರತೆ ಎಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂಬ ಭಯ ದೇವರಗೆಣ್ಣೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಭಯ ಉಂಟು ಮಾಡಿತ್ತು.
ಮನೆಯಿಂದ ಹೊರಬರಲೂ ಹೆದರುತ್ತಿದ್ದರು: ಇದೇ ಕಾರಣದಿಂದ ಅವರೆಲ್ಲಾ ಜಮೀನಿಗೆ ತೆರಳುವುದು ಇರಲಿ, ಮನೆಯಿಂದ ಆಚೆ ಬರಲೂ ಹೆದರುವಂತಾಗಿತ್ತು. ಚಿರತೆಯನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯ ಶಾಸಕ ಎಂ.ಬಿ.ಪಾಟೀಲ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಅರಣ್ಯ ಇಲಾಖೆ ಆಧಿಕಾರಿಗಳಿಗೆ ಮನವಿ ಮಾಡಿ ಒತ್ತಡ ಹಾಕಿದ್ದರು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆಧಿಕಾರಿಗಳು ದೇವರಗೆಣ್ಣೂರು ಗ್ರಾಮದ ಸುತ್ತಲಿನ ಜಮೀನುಗಳಲ್ಲಿ ನಾಲ್ಕು ಬೋನ್ ಗಳನ್ನು ಇಟ್ಟಿದ್ದರು. ಚಿರತೆಯ ಚಲನವಲನ ಅರಿಯಲು ಇತರೆ 4 ಕಡೆಗಳಲ್ಲಿ ರಾತ್ರಿ ವಿಶೇಷ ಕ್ಯಾಮರಾ ಅಳವಡಿಸಿದ್ದರು.
ದೇವಗೆಣ್ಣೂರಿನ ಹೊರಭಾಗದ ಜಮೀನಿನಲ್ಲಿ ಬೋನ್ ಇರಿಸಲಾಗಿತ್ತು. ಇಂದು ನಸುಕಿನ ಜಾವ ಚಿರತೆ ಬೋನಿನಲ್ಲಿದ್ದ ಮೇಕೆಯನ್ನು ತಿನ್ನಲು ಆಗಮಿಸಿ ಲಾಕ್ ಆಗಿದೆ. ಚಿರತೆ ಸೆರೆ ಸಿಕ್ಕ ಸುದ್ದಿ ತಿಳಿದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನಗಳ ಕಾಲ ನಮಗೆ ಭಯ ಹುಟ್ಟಿಸಿದ್ದ ಚಿತರೆ ಕೊನೆಗೂ ಸೆರೆಯಾಯ್ತಲ್ಲ. ಇನ್ನು ನಮ್ಮ ಜಮೀನುಗಳ ಕೆಲಸ ಮಾಡಲು ಆರಂಭಿಸಬಹುದೆಂದು ಹೇಳಿದ್ದಾರೆ.
ಇಂದು ಸಾಯಂಕಾಲದ ವೇಳೆ ಚಿರತೆಯನ್ನು ಬೀಳಗಿಯ ಅರಣ್ಯ ಪ್ರದೇಶದಲ್ಲಿ ಅಥವಾ ಬೆಳಗಾವಿಯ ಖಾನಾಪುರ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಕಳೆದ ಹತ್ತು ದಿನಗಳಿಂದ ನಿರತಂರವಾಗಿ ಚಿರತೆಯನ್ನು ಸೆರೆ ಹಿಡಿಯಲು ಕರ್ತವ್ಯ ನಿರ್ವಹಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಜಿಲ್ಲಾ ಅರಣ್ಯ ಇಲಾಖೆಯ ಉಪ ಅರಣ್ಯಾಧಿಕಾರಿ ಸರೀನಾ ಶಿಕ್ಕಲಗೇರ ಅಭಿನಂದನೆ ತಿಳಿಸಿದ್ದಾರೆ.
Published On - 2:08 pm, Fri, 5 June 20