ಹಳೆ ಸಂಪ್ರದಾಯಕ್ಕೆ ಅಂತ್ಯ ಹೇಳಿದ DG & IGP, ಅವರಿಗಾಗಿ ಪೊಲೀಸರು ಇನ್ಮುಂದೆ ರಸ್ತೆ ಬದಿ ನಿಲ್ಲುವಂತಿಲ್ಲ

  • TV9 Web Team
  • Published On - 12:23 PM, 5 Jun 2020
ಹಳೆ ಸಂಪ್ರದಾಯಕ್ಕೆ ಅಂತ್ಯ ಹೇಳಿದ DG & IGP, ಅವರಿಗಾಗಿ ಪೊಲೀಸರು ಇನ್ಮುಂದೆ ರಸ್ತೆ ಬದಿ ನಿಲ್ಲುವಂತಿಲ್ಲ

ಬೆಂಗಳೂರು: ಪೊಲೀಸ್ ಇಲಾಖೆಯ ಹಳೆ ಸಂಪ್ರದಾಯಕ್ಕೆ ಡಿಜಿ & ಐಜಿಪಿ ಪ್ರವೀಣ್ ಸೂದ್ ಅಂತ್ಯ ಹಾಡಿದ್ದಾರೆ. ಇನ್ನು ಮುಂದೆ ಐಜಿಪಿ ತಮ್ಮ ಕಚೇರಿಯಿಂದ ಹೊರ ಬಂದಾಗ ಮತ್ತು ರಾಜ್ಯ ಪ್ರವಾಸ ಮಾಡುವಾಗ ಸ್ಥಳೀಯ ಪೊಲೀಸರು ರಸ್ತೆ ಬದಿ ಅಲ್ಲಲ್ಲಿ ಶಿಸ್ತಾಗಿ ನಿಂತು ಸೆಲ್ಯೂಟ್​ ಹೊಡೆಯುತ್ತಿದ್ದರು. ಆದ್ರೆ ಇನ್ಮುಂದೆ ಹಾಗೆಲ್ಲ ನಿಲ್ಲುವಂತೆಯೇ ಇಲ್ಲ.

ಡಿಜಿ & ಐಜಿಪಿ ಯಾವುದೇ ವೇಳೆ ರಾಜ್ಯ ಪ್ರವಾಸ ಮಾಡುವಾಗ ಜಿಲ್ಲಾ ಸರಹದ್ದು ದಾಟುವವರೆಗೂ ಪೊಲೀಸರನ್ನು ಕಳುಹಿಸಲಾಗುತ್ತಿತ್ತು. ಈ ವೇಳೆ ಆಯಾ ಜಿಲ್ಲೆಗಳ ಡಿಎಸ್​ಪಿ, ಇನ್ಸ್​ಪೆಕ್ಟರ್​, ಸಬ್ ಇನ್ಸ್​ಪೆಕ್ಟರ್​ಗಳು ರಸ್ತೆ ಬದಿ ನಿಲ್ಲುತ್ತಿದ್ರು. ಇನ್ನು ಮುಂದೆ ಯಾವ ಅಧಿಕಾರಿಯೂ ಹೀಗೆ ರಸ್ತೆಯಲ್ಲಿ ನಿಂತು ಕಾಯುವ ಹಾಗಿಲ್ಲ. ತಮ್ಮ ಪಾಡಿಗೆ ತಾವು ಕೆಲಸ ಮಾಡಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೂಚಿಸಿದ್ದಾರೆ.