ಮಲೆಯಮಾರುತದ ಬಳಿ ವ್ಯಕ್ತಿ ಅನುಮಾನಾಸ್ಪದ ಸಾವು, ಕಾರಿನಲ್ಲಿ ಮೃತದೇಹ ಪತ್ತೆ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಯಮಾರುತ ಬಳಿ ಕಾರು ಒಂದರಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಬೆಳಕಿಗೆ ಬಂದಿದೆ. KA 05 MT 4877 ನೋಂದಣಿ ಸಂಖ್ಯೆಯ ಕಾರು ನಿನ್ನೆ ಸಂಜೆಯಿಂದ ಚಾರ್ಮಾಡಿ ಘಾಟ್ನ ಮಲೆಯಮಾರುತದಲ್ಲೇ ನಿಲ್ಲಿಸಲಾಗಿದ್ದು ಅದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಇನ್ನು ಕಾರು ನಿಲ್ಲಿಸಿದ್ದ ಪಕ್ಕದ ರಸ್ತೆಯಲ್ಲೇ ವಿಷದ ಬಾಟಲಿಯೊಂದು ಸಹ ಸಿಕ್ಕಿದೆ. ಹೀಗಾಗಿ, ಮೃತನು ಡ್ರೈವಿಂಗ್ ಸೀಟ್ನಲ್ಲಿ ಕುಳಿತು ವಿಷ ಸೇವಿಸಿದ್ದಾನೆ ಎಂಬ ಅನುಮಾನ ಹುಟ್ಟಿದೆ. ಸ್ಥಳಕ್ಕೆ ಬಣಕಲ್ ಠಾಣೆ ಪೊಲೀಸರು ಭೇಟಿ […]

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಯಮಾರುತ ಬಳಿ ಕಾರು ಒಂದರಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಬೆಳಕಿಗೆ ಬಂದಿದೆ.
KA 05 MT 4877 ನೋಂದಣಿ ಸಂಖ್ಯೆಯ ಕಾರು ನಿನ್ನೆ ಸಂಜೆಯಿಂದ ಚಾರ್ಮಾಡಿ ಘಾಟ್ನ ಮಲೆಯಮಾರುತದಲ್ಲೇ ನಿಲ್ಲಿಸಲಾಗಿದ್ದು ಅದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಇನ್ನು ಕಾರು ನಿಲ್ಲಿಸಿದ್ದ ಪಕ್ಕದ ರಸ್ತೆಯಲ್ಲೇ ವಿಷದ ಬಾಟಲಿಯೊಂದು ಸಹ ಸಿಕ್ಕಿದೆ. ಹೀಗಾಗಿ, ಮೃತನು ಡ್ರೈವಿಂಗ್ ಸೀಟ್ನಲ್ಲಿ ಕುಳಿತು ವಿಷ ಸೇವಿಸಿದ್ದಾನೆ ಎಂಬ ಅನುಮಾನ ಹುಟ್ಟಿದೆ. ಸ್ಥಳಕ್ಕೆ ಬಣಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow Us



