ಡ್ರಾಪ್ ಪಡೆಯುವ ಮುನ್ನ ಎಚ್ಚರ! ಕೊರೊನಾ ಅಟ್ಯಾಕ್ ಆಗಬಹುದು! ಈ ಯುವಕನ ಕತೆ ಕೇಳಿ
ಮಂಗಳೂರು: ಕೊರೊನಾ ಕ್ರೂರಿ ಇಡೀ ದೇಶಾದ್ಯಂತ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಸಿಕ್ಕಸಿಕ್ಕವರ ದೇಹ ಹೊಕ್ಕು ಕೊರೊನಾ ಕ್ರಿಮಿ ಅಟ್ಟಹಾಸ ಮೆರೆಯುತ್ತಿದೆ. ಅದರಲ್ಲಿ ಮಂಗಳೂರಿನಲ್ಲಿ ಪೇಷಂಟ್ ನಂಬರ್ 1094 ಕೇಸ್ ಟ್ವಿಸ್ಟ್ ಪಡೆದುಕೊಂಡಿದೆ. ಸಿಕ್ಕ ಸಿಕ್ಕ ವಾಹನಗಳಿಂದ ಡ್ರಾಪ್: 1094ನೇ ಸೋಂಕಿತ ಕಳೆದ 10 ದಿನಗಳ ಹಿಂದೆ ದೆಹಲಿಯಿಂದ ಮಂಗಳೂರಿಗೆ ಬಂದಿದ್ದ. ಕಾಲ್ನಡಿಗೆಯಲ್ಲಿ ದೆಹಲಿಯಿಂದ ಹೊರಟು, ಅಲ್ಲಲ್ಲಿ ಸಿಕ್ಕ ಸಿಕ್ಕ ವಾಹನಗಳಿಂದ ಡ್ರಾಪ್ ಪಡೆದುಕೊಂಡಿದ್ದ. ಚೆಕ್ಪೋಸ್ಟ್ಗಳಲ್ಲಿ ವಂಚಿಸಿ ಕೊನೆಗೂ ಮಂಗಳೂರು ಹೊರವಲಯದ ಜೆಪ್ಪಿನಮೊಗೆರು ತಲುಪಿದ್ದ. ಮನೆಯಿಂದ ಹೊರಗಿಟ್ಟಿದ್ದ ತಂದೆ-ತಾಯಿ: ಊರಿಗೆ […]
ಮಂಗಳೂರು: ಕೊರೊನಾ ಕ್ರೂರಿ ಇಡೀ ದೇಶಾದ್ಯಂತ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಸಿಕ್ಕಸಿಕ್ಕವರ ದೇಹ ಹೊಕ್ಕು ಕೊರೊನಾ ಕ್ರಿಮಿ ಅಟ್ಟಹಾಸ ಮೆರೆಯುತ್ತಿದೆ. ಅದರಲ್ಲಿ ಮಂಗಳೂರಿನಲ್ಲಿ ಪೇಷಂಟ್ ನಂಬರ್ 1094 ಕೇಸ್ ಟ್ವಿಸ್ಟ್ ಪಡೆದುಕೊಂಡಿದೆ.
ಸಿಕ್ಕ ಸಿಕ್ಕ ವಾಹನಗಳಿಂದ ಡ್ರಾಪ್: 1094ನೇ ಸೋಂಕಿತ ಕಳೆದ 10 ದಿನಗಳ ಹಿಂದೆ ದೆಹಲಿಯಿಂದ ಮಂಗಳೂರಿಗೆ ಬಂದಿದ್ದ. ಕಾಲ್ನಡಿಗೆಯಲ್ಲಿ ದೆಹಲಿಯಿಂದ ಹೊರಟು, ಅಲ್ಲಲ್ಲಿ ಸಿಕ್ಕ ಸಿಕ್ಕ ವಾಹನಗಳಿಂದ ಡ್ರಾಪ್ ಪಡೆದುಕೊಂಡಿದ್ದ. ಚೆಕ್ಪೋಸ್ಟ್ಗಳಲ್ಲಿ ವಂಚಿಸಿ ಕೊನೆಗೂ ಮಂಗಳೂರು ಹೊರವಲಯದ ಜೆಪ್ಪಿನಮೊಗೆರು ತಲುಪಿದ್ದ.
ಮನೆಯಿಂದ ಹೊರಗಿಟ್ಟಿದ್ದ ತಂದೆ-ತಾಯಿ: ಊರಿಗೆ ಬಂದ ಮಗನನ್ನು ತಂದೆ-ತಾಯಿ ಮನೆಗೆ ಸೇರಿಸಲಿಲ್ಲ. ಮೊದಲು ಹೋಗಿ ಕೊವಿಡ್ ಟೆಸ್ಟ್ ಮಾಡಿಸಿ ಬಾ ಎಂದು ಮನೆಯಿಂದ ಹೊರಗಿಟ್ಟಿದ್ದರು. ಕಳದ 10 ದಿನಗಳಿಂದ 31 ವರ್ಷದ ಸೋಂಕಿತ ಅಜ್ಜಿ ಮನೆಯಲ್ಲಿದ್ದ. ಬಳಿಕ ಮನೆಯವರ ಒತ್ತಾಯದ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದ.
ನಿನ್ನೆ ಬಂದ ವರದಿಯಲ್ಲಿ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಆಸಾಮಿ ಬಂಟ್ವಾಳ ಸೇರಿ ಹಲವು ಕಡೆ ಓಡಾಡಿದ್ದಾನೆ. ಸೋಂಕಿತನ ಈ ನಡೆಯಿಂದ ಜಿಲ್ಲೆಯ ವಿವಿಧ ಕಡೆ ಕೊರೊನಾ ಹರಡುವ ಆತಂಕದ ವಾತಾವರಣ ನಿರ್ಮಾಣವಾಗಿದೆ.
Published On - 10:53 am, Mon, 18 May 20