ವರದಿ ಬರುವ ಮುನ್ನವೇ ಐಸೋಲೇಷನ್ ವಾರ್ಡ್‌ನಲ್ಲಿದ್ದ ವ್ಯಕ್ತಿ ನಾಪತ್ತೆ! ಎಲ್ಲಿ?

ಕೊಪ್ಪಳ: ಐಸೋಲೇಷನ್ ವಾರ್ಡ್‌ನಲ್ಲಿದ್ದ ವ್ಯಕ್ತಿ ಕೊರೊನಾ ವರದಿ ಬರುವ ಮುನ್ನವೇ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ 42 ವರ್ಷದ ವ್ಯಕ್ತಿಯನ್ನು ಐಸೋಲೇಷನ್ ವಾರ್ಡ್‌ನಲ್ಲಿ ಇಡಲಾಗಿತ್ತು. ಈತ ಮೇ 11ರಂದು ಮಹಾರಾಷ್ಟ್ರದಿಂದ ಕೊಪ್ಪಳಕ್ಕೆ ಬಂದಿದ್ದ. ಮೇ 11ರಂದು ಗಂಟಲು ದ್ರವ ಹಾಗೂ ರಕ್ತದ ಮಾದರಿಯ ಸ್ಯಾಂಪಲ್ ಕಳಿಸಲಾಗಿತ್ತು. ನಿನ್ನೆ ಸಂಜೆ ಈತನ ಸ್ಯಾಂಪಲ್ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಮುನ್ನವೇ ಎಸ್ಕೇಪ್ ಆಗಿದ್ದಾನೆ. ನಾಪತ್ತೆಯಾದ ವ್ಯಕ್ತಿಯ ವಿರುದ್ಧ ಜಿಲ್ಲಾಸ್ಪತ್ರೆಯ ವೈದ್ಯ ಪ್ರಕಾಶ್ ಎಂಬುವರು […]

ವರದಿ ಬರುವ ಮುನ್ನವೇ ಐಸೋಲೇಷನ್ ವಾರ್ಡ್‌ನಲ್ಲಿದ್ದ ವ್ಯಕ್ತಿ ನಾಪತ್ತೆ! ಎಲ್ಲಿ?
Follow us
ಸಾಧು ಶ್ರೀನಾಥ್​
|

Updated on:May 18, 2020 | 9:46 AM

ಕೊಪ್ಪಳ: ಐಸೋಲೇಷನ್ ವಾರ್ಡ್‌ನಲ್ಲಿದ್ದ ವ್ಯಕ್ತಿ ಕೊರೊನಾ ವರದಿ ಬರುವ ಮುನ್ನವೇ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ 42 ವರ್ಷದ ವ್ಯಕ್ತಿಯನ್ನು ಐಸೋಲೇಷನ್ ವಾರ್ಡ್‌ನಲ್ಲಿ ಇಡಲಾಗಿತ್ತು. ಈತ ಮೇ 11ರಂದು ಮಹಾರಾಷ್ಟ್ರದಿಂದ ಕೊಪ್ಪಳಕ್ಕೆ ಬಂದಿದ್ದ.

ಮೇ 11ರಂದು ಗಂಟಲು ದ್ರವ ಹಾಗೂ ರಕ್ತದ ಮಾದರಿಯ ಸ್ಯಾಂಪಲ್ ಕಳಿಸಲಾಗಿತ್ತು. ನಿನ್ನೆ ಸಂಜೆ ಈತನ ಸ್ಯಾಂಪಲ್ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಮುನ್ನವೇ ಎಸ್ಕೇಪ್ ಆಗಿದ್ದಾನೆ.

ನಾಪತ್ತೆಯಾದ ವ್ಯಕ್ತಿಯ ವಿರುದ್ಧ ಜಿಲ್ಲಾಸ್ಪತ್ರೆಯ ವೈದ್ಯ ಪ್ರಕಾಶ್ ಎಂಬುವರು ದೂರು ದಾಖಲಿಸಿದ್ದಾರೆ. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್188, 269, 270 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 9:41 am, Mon, 18 May 20