ಕೊರೊನಾ ಮಾರಿಯಿಂದ ಇನ್ನೂ ಎಂತೆಂಥ ಸಾವು ಸಂಭವಿಸಲಿದೆಯೋ? ಇದನ್ನ ನೋಡಿ..
ಕೊಲಂಬಿಯಾ: ಕೊರೊನಾ ಮಾರಿಯಿಂದ ಇನ್ನೂ ಎಂತೆಂಥ ಸಾವುಗಳು ಸಂಭವಿಸಲಿವೆಯೋ? ಒಂದು ಕಡೆ ಕೊರೊನಾ ಕ್ರಮಿಯೇ ನೇರವಾಗಿ ಮಾನುಷ್ಯನ ದೇಹದೊಳಕ್ಕೆ ಪ್ರವೇಶಿಸಿ, ಸಾವನ್ನು ತಂದಿಡುತ್ತಿದೆ. ಮತ್ತೊಂದೆಡೆ ಜನ ಹಟ್ಟೆಪಾಡಿಗಾಗಿ ಅಲೆಯುವಂತಾಗಿದ್ದು, ಭಾರತದಲ್ಲಿ ವಲಸೆ ಕಾರ್ಮಿಕರಂತೂ ಅನೇಕ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಇದುವರೆಗೂ ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಂಡ ಕಾರ್ಮಿಕರ ಸಂಖ್ಯೆಯೇ 350ಕ್ಕೂ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ದೂರದ ಕೊಲಂಬಿಯಾದಲ್ಲಿ ಕೆನಡಾ ಜೆಟ್ ವಿಮಾನವೊಂದು ಸೀದಾ ಮನೆಯೊಳಕ್ಕೆ ನುಗ್ಗಿದ್ದು, ಅಪಘಾತದಲ್ಲಿ ಒಬ್ಬ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ತೀವ್ರವಾಗಿ […]
ಕೊಲಂಬಿಯಾ: ಕೊರೊನಾ ಮಾರಿಯಿಂದ ಇನ್ನೂ ಎಂತೆಂಥ ಸಾವುಗಳು ಸಂಭವಿಸಲಿವೆಯೋ? ಒಂದು ಕಡೆ ಕೊರೊನಾ ಕ್ರಮಿಯೇ ನೇರವಾಗಿ ಮಾನುಷ್ಯನ ದೇಹದೊಳಕ್ಕೆ ಪ್ರವೇಶಿಸಿ, ಸಾವನ್ನು ತಂದಿಡುತ್ತಿದೆ. ಮತ್ತೊಂದೆಡೆ ಜನ ಹಟ್ಟೆಪಾಡಿಗಾಗಿ ಅಲೆಯುವಂತಾಗಿದ್ದು, ಭಾರತದಲ್ಲಿ ವಲಸೆ ಕಾರ್ಮಿಕರಂತೂ ಅನೇಕ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಇದುವರೆಗೂ ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಂಡ ಕಾರ್ಮಿಕರ ಸಂಖ್ಯೆಯೇ 350ಕ್ಕೂ ಹೆಚ್ಚಾಗಿದೆ.
ಪರಿಸ್ಥಿತಿ ಹೀಗಿರುವಾಗ ದೂರದ ಕೊಲಂಬಿಯಾದಲ್ಲಿ ಕೆನಡಾ ಜೆಟ್ ವಿಮಾನವೊಂದು ಸೀದಾ ಮನೆಯೊಳಕ್ಕೆ ನುಗ್ಗಿದ್ದು, ಅಪಘಾತದಲ್ಲಿ ಒಬ್ಬ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಕೊರೊನಾದಿಂದಾದ ಸಾವು ಎಂದೇ ಪರಿಗಣಿಸಬೇಕಿದೆ. ಏಕೆಂದ್ರೆ ಆ ಜೆಟ್ ಹಾರಾಟ ನಡೆಸುತ್ತಾ ಇದ್ದಿದ್ದು ಕೊರೊನಾ ಸಮರ ಸೇನಾನಿಗಳಿಗೆ ಗೌರವ ಸೂಚಿಸಲು ಅದು ನಿನ್ನೆ ಭಾನುವಾರ ವಂದನಾ ಹಾರಾಟ ನಡೆಸಿತ್ತು. ಆ ವೇಳೆ ಏನು ಅಚಾತುರ್ಯವಾಯಿತೋ ಅಂತೂ ಅದು ಸೀದಾ ಮನೆಯೊಂದಕ್ಕೆ ನುಗ್ಗಿ ಅಪಘಾತಕ್ಕೀಡಾಗಿದೆ. ಬ್ರಿಟಿಷ್ ಕೊಲಂಬಿಯಾದ ಕಾಮಲೂಪ್ಸ್ ನಗರದಲ್ಲಿ ಈ ದುರ್ಘಟನೆ ನಡೆದಿದೆ.
ಅಪಘಾತ ಹೇಗಾಯಿತು? ಎರಡು ಜೆಟ್ ವಿಮಾನಗಳು ಆಗಸಕ್ಕೆ ಚಿಮ್ಮಿ ಪ್ರದರ್ಶನ ಆರಂಭಿಸಬೇಕಿತ್ತು. ಆದ್ರೆ ಮೇಲಕ್ಕೆ ಹಾರುತ್ತಿದ್ದಂತೆ ಒಂದಕ್ಕೊಂದು ಚಿಕ್ಕದಾಗಿ ಡಿಕ್ಕಿ ಹೊಡೆದುಕೊಂಡಿವೆ. ಆಗ ಒಂದು ಜೆಟ್ ಬೆಂಕಿಯುಂಡೆಯಾಗಿದೆ. ಮತ್ತೊಂದು ಕೆಳಗೆ ಮನೆಯೊಂದರ ಮೇಲೆ ಬಿದ್ದು ಅಪಘಾತಕ್ಕೀಡಾಗಿದೆ. ಅವಘಡದಲ್ಲಿ ಜೆಟ್ ಹಾರಾಟ ನಡೆಸುತ್ತಿದ್ದ ಪೈಲೆಟ್ ಜೆನ್ನಿಫರ್ ಕೇಸಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಿಬ್ಬಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
The RCAF has suffered another tragic loss of a dedicated member of the RCAF team. We are deeply saddened and grieve alongside Jenn’s family and friends. Our thoughts are also with the loved ones of Captain MacDougall. We hope for a swift recovery from his injuries. – Comd RCAF pic.twitter.com/8U41bdVqcU
— Royal Canadian Air Force (@RCAF_ARC) May 18, 2020
Published On - 11:49 am, Mon, 18 May 20