ಇಂದು ನಡೆಯಬೇಕಿದ್ದ ಮದುವೆ ಕ್ಯಾನ್ಸಲ್, ಮದುಮಗಳು ಕ್ವಾರಂಟೈನ್ಗೆ ಶಿಫ್ಟ್
ಹಾವೇರಿ: ಇಡೀ ರಾಜ್ಯವೇ ಕೊರೊನಾ ಕೂಪಕ್ಕೆ ಬಿದ್ದು ಒದ್ದಾಡುತ್ತಿದೆ. ಹಾವೇರಿಯಲ್ಲಿ ಮದುವೆ ಮನೆಗೂ ಕೊರೊನಾ ವಕ್ಕರಿಸಿದ್ಯಾ ಎಂಬ ಆತಂಕ ಶುರುವಾಗಿದೆ. ಏಕೆಂದರೆ ಮದುಮಗಳು ಸೇರಿ ಇಪ್ಪತ್ತು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಹಾವೇರಿ ನಗರದಲ್ಲಿ ಇಂದು ಮದುವೆ ನಡೆಯಬೇಕಿತ್ತು. ಆದ್ರೆ ಮದುಮಗಳ ಸಂಬಂಧಿಗೆ ಕೊರೊನಾ ವಕ್ಕರಿಸಿರುವ ಕಾರಣ ಮದುಮಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆಗೆ ಎಂದು ಮಂಗಳೂರಿಗೆ ಹೋಗಿದ್ದರು. ಈ ವೇಳೆ ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್ ಆರೋಗ್ಯ ಇಲಾಖೆ ಕಳುಹಿಸಿತ್ತು. ಮದುಮಗಳ ಸಂಬಂಧಿಗೆ […]
ಹಾವೇರಿ: ಇಡೀ ರಾಜ್ಯವೇ ಕೊರೊನಾ ಕೂಪಕ್ಕೆ ಬಿದ್ದು ಒದ್ದಾಡುತ್ತಿದೆ. ಹಾವೇರಿಯಲ್ಲಿ ಮದುವೆ ಮನೆಗೂ ಕೊರೊನಾ ವಕ್ಕರಿಸಿದ್ಯಾ ಎಂಬ ಆತಂಕ ಶುರುವಾಗಿದೆ. ಏಕೆಂದರೆ ಮದುಮಗಳು ಸೇರಿ ಇಪ್ಪತ್ತು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಹಾವೇರಿ ನಗರದಲ್ಲಿ ಇಂದು ಮದುವೆ ನಡೆಯಬೇಕಿತ್ತು. ಆದ್ರೆ ಮದುಮಗಳ ಸಂಬಂಧಿಗೆ ಕೊರೊನಾ ವಕ್ಕರಿಸಿರುವ ಕಾರಣ ಮದುಮಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆಗೆ ಎಂದು ಮಂಗಳೂರಿಗೆ ಹೋಗಿದ್ದರು. ಈ ವೇಳೆ ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್ ಆರೋಗ್ಯ ಇಲಾಖೆ ಕಳುಹಿಸಿತ್ತು. ಮದುಮಗಳ ಸಂಬಂಧಿಗೆ ಕೊರೊನಾ ದೃಢಪಟ್ಟಿದೆ ಎನ್ನಲಾಗ್ತಿದೆ. ಹೀಗಾಗಿ ಮದುವೆಯನ್ನು ಮುಂದೂಡಲಾಗಿದೆ. ಸದ್ಯ ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನ ಪೊಲೀಸರು ಸೀಲ್ಡೌನ್ ಮಾಡುತ್ತಿದ್ದಾರೆ.
Published On - 12:05 pm, Sun, 28 June 20