ಮನೆಯವರೆಲ್ಲಾ ಹೊಸ ಬಟ್ಟೆ ಖರೀದಿ ಮಾಡಿ -ಮಳೆ ಸಂತ್ರಸ್ತರಿಗೆ 25 ಸಾವಿರ ರೂ. ಚೆಕ್ ವಿತರಣೆ
ಬೆಂಗಳೂರು: ನಗರದಲ್ಲಿ ಭಾರಿ ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಗುರುದತ್ತ ಲೇಔಟ್, ಕುಮಾರಸ್ವಾಮಿ ಲೇಔಟ್ ಹಾಗೂ ದತ್ತಾತ್ರೇಯ ನಗರದ ನಿವಾಸಿಗಳಿಗೆ ಇಂದು ಕಂದಾಯ ಸಚಿವ R.ಅಶೋಕ್ ಪರಿಹಾರದ ಚೆಕ್ ವಿತರಿಸಿದರು. ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವ R.ಅಶೋಕ್ ಭೇಟಿಕೊಟ್ಟು ಹಬ್ಬದ ದಿನವೇ ಸಂತ್ರಸ್ತರಿಗೆ ಚೆಕ್ ವಿತರಿಸಿದರು. ಗುರುದತ್ತ ಲೇಔಟ್, ಕುಮಾರ ಸ್ವಾಮಿ ಲೇಔಟ್ ಹಾಗೂ ದತ್ತಾತ್ರೇಯ ನಗರದಲ್ಲಿ ಮಳೆಯಿಂದ ಹಾನಿಗೊಳಗಾಗಿದ್ದ ಮನೆಯ ನಿವಾಸಿಗಳಿಗೆ ಚೆಕ್ ವಿತರಣೆ ಮಾಡಿದರು. ಹಾನಿಗೊಳಗಾದ ಪ್ರತಿ ಮನೆಗೆ ತಲಾ 25 ಸಾವಿರ ರೂಪಾಯಿ […]
ಬೆಂಗಳೂರು: ನಗರದಲ್ಲಿ ಭಾರಿ ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಗುರುದತ್ತ ಲೇಔಟ್, ಕುಮಾರಸ್ವಾಮಿ ಲೇಔಟ್ ಹಾಗೂ ದತ್ತಾತ್ರೇಯ ನಗರದ ನಿವಾಸಿಗಳಿಗೆ ಇಂದು ಕಂದಾಯ ಸಚಿವ R.ಅಶೋಕ್ ಪರಿಹಾರದ ಚೆಕ್ ವಿತರಿಸಿದರು. ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವ R.ಅಶೋಕ್ ಭೇಟಿಕೊಟ್ಟು ಹಬ್ಬದ ದಿನವೇ ಸಂತ್ರಸ್ತರಿಗೆ ಚೆಕ್ ವಿತರಿಸಿದರು. ಗುರುದತ್ತ ಲೇಔಟ್, ಕುಮಾರ ಸ್ವಾಮಿ ಲೇಔಟ್ ಹಾಗೂ ದತ್ತಾತ್ರೇಯ ನಗರದಲ್ಲಿ ಮಳೆಯಿಂದ ಹಾನಿಗೊಳಗಾಗಿದ್ದ ಮನೆಯ ನಿವಾಸಿಗಳಿಗೆ ಚೆಕ್ ವಿತರಣೆ ಮಾಡಿದರು. ಹಾನಿಗೊಳಗಾದ ಪ್ರತಿ ಮನೆಗೆ ತಲಾ 25 ಸಾವಿರ ರೂಪಾಯಿ ಮೊತ್ತದ ಚೆಕ್ ವಿತರಣೆ ಮಾಡಿದ ಸಚಿವರು ಜನರಿಗೆ ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಪರಿಹಾರದ ಚೆಕ್ ಪಡೆಯಲು ಮನವಿ ಮಾಡಿದರು.
ಇದು ಹಬ್ಬಕ್ಕೆ ಕೊಡ್ತಿರೋ ಚೆಕ್ ಅಲ್ಲ. ಅಗತ್ಯ ವಸ್ತುಗಳನ್ನ ಖರೀದಿ ಮಾಡೋಕೆ ಕೊಡ್ತಿರೋ ಚೆಕ್. ಮಳೆಯಿಂದ ಹಾನಿಯಾಗಿರೋ ವಸ್ತುಗಳನ್ನ ಖರೀದಿ ಮಾಡಿ. ಯಾರೂ ದುಡ್ಡನ್ನ ಅನಾವಶ್ಯಕವಾಗಿ ಖರ್ಚು ಮಾಡ್ಬೇಡಿ. ಮನೆಯವರೆಲ್ಲಾ ಹೊಸ ಬಟ್ಟೆ ಖರೀದಿ ಮಾಡಿ ಎಂದು ಸಚಿವ ಅಶೋಕ್ ಚೆಕ್ ನೀಡುವ ವೇಳೆ ಮನವಿ ಮಾಡಿದರು.