ಮದುವೆಯಾಗಿ ಒಂದೇ ತಿಂಗಳಿಗೆ ನವವಿವಾಹಿತೆ ಕಿಡ್ನಾಪ್!
ಚಿಕ್ಕಬಳ್ಳಾಪುರ: ಸಿನಿಮಾ ಸ್ಟೈಲ್ನಲ್ಲಿ ಕಾರು ಮತ್ತು 6 ಬೈಕ್ಗಳಲ್ಲಿ ಬಂದು ನವವಿವಾಹಿತೆಯ ಅಪಹರಣ ಮಾಡಿರುವ ಘಟನೆ ಜಾತವಾರಹೊಸಹಳ್ಳಿ ಬಳಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ಮರಿಹಳ್ಳಿ ನಿವಾಸಿ ರಂಜಿತಾ ಪತಿ ಜೊತೆ ಚಿಕ್ಕಬಳ್ಳಾಫುರಕ್ಕೆ ಆಗಮಿಸುತ್ತಿದ್ದಾಗ ಜಾತವಾರಹೊಸಹಳ್ಳಿ ಬಳಿ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ರಂಜಿತಾ ಒಂದು ತಿಂಗಳ ಹಿಂದೆ ಪ್ರೀತಿಸಿ ಮರಿಹಳ್ಳಿ ಗ್ರಾಮದ ವೆಂಕಟೇಶ ಎನ್ನುವವರನ್ನು ಮದುವೆಯಾಗಿದ್ದಳು. . ಅಂತರ್ಜಾತಿ ವಿವಾಹ ಎನ್ನುವ ಕಾರಣ ಇಬ್ಬರ ಮನೆಯಲ್ಲಿ ಮದುವೆಗೆ ವಿರೋಧವಿತ್ತು. ಆದರೆ ಗ್ರಾಮದ ಮುಖಂಡರು ಸೇರಿ ಎರಡು ಕುಟುಂಬಗಳಲ್ಲಿ ನ್ಯಾಯ […]

ಚಿಕ್ಕಬಳ್ಳಾಪುರ: ಸಿನಿಮಾ ಸ್ಟೈಲ್ನಲ್ಲಿ ಕಾರು ಮತ್ತು 6 ಬೈಕ್ಗಳಲ್ಲಿ ಬಂದು ನವವಿವಾಹಿತೆಯ ಅಪಹರಣ ಮಾಡಿರುವ ಘಟನೆ ಜಾತವಾರಹೊಸಹಳ್ಳಿ ಬಳಿ ನಡೆದಿದೆ.
ಶಿಡ್ಲಘಟ್ಟ ತಾಲೂಕಿನ ಮರಿಹಳ್ಳಿ ನಿವಾಸಿ ರಂಜಿತಾ ಪತಿ ಜೊತೆ ಚಿಕ್ಕಬಳ್ಳಾಫುರಕ್ಕೆ ಆಗಮಿಸುತ್ತಿದ್ದಾಗ ಜಾತವಾರಹೊಸಹಳ್ಳಿ ಬಳಿ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ರಂಜಿತಾ ಒಂದು ತಿಂಗಳ ಹಿಂದೆ ಪ್ರೀತಿಸಿ ಮರಿಹಳ್ಳಿ ಗ್ರಾಮದ ವೆಂಕಟೇಶ ಎನ್ನುವವರನ್ನು ಮದುವೆಯಾಗಿದ್ದಳು. .
ಅಂತರ್ಜಾತಿ ವಿವಾಹ ಎನ್ನುವ ಕಾರಣ ಇಬ್ಬರ ಮನೆಯಲ್ಲಿ ಮದುವೆಗೆ ವಿರೋಧವಿತ್ತು. ಆದರೆ ಗ್ರಾಮದ ಮುಖಂಡರು ಸೇರಿ ಎರಡು ಕುಟುಂಬಗಳಲ್ಲಿ ನ್ಯಾಯ ಪಂಚಾಯತಿ ಮಾಡಿ ಮದುವೆ ಮಾಡಿಸಿದ್ದರು. ಹೀಗಾಗಿ ರಂಜಿತಾ ಹಾಗೂ ವೆಂಕಟೇಶ್ ಎರಡೂ ಕುಟುಂಬಗಳಿಂದ ರಕ್ಷಣೆ ಕೋರಿ ಎಸ್ಪಿಗೆ ದೂರು ನೀಡಿದ್ದರು. ಮದದುವೆಯಾಗಿ ಒಂದು ತಿಂಗಳ ಬಳಿಕ ರಂಜಿತಾ ಈಗ ಕಿಡ್ನಾಪ್ ಆಗಿದ್ದಾಳೆ. ಇದರ ಹಿಂದೆ ಯಾರ ಕೈವಾಡವಿದೆ. ಅಪಹರಣಕ್ಕೆ ಕಾರಣವೇನು ಎಂಬುವುದು ತಿಳಿದು ಬಂದಿಲ್ಲ.

Published On - 8:32 am, Fri, 11 September 20




