ಇದು ಕ್ರಿಕೆಟ್ ಧರ್ಮ! ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿ ಉಳಿದಿಲ್ಲ ಎಂಬುದಕ್ಕೆ ಕ್ರಿಕೆಟಿಗ ಸಿರಾಜ್ ಕಣ್ಣೀರೆ ಸಾಕ್ಷಿ..
ಹೌದು.. ಕಳೆದ ವಾರವಷ್ಟೇ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಬಲಗೈ ವೇಗಿ ಸಿರಾಜ್ ರಾಷ್ಟ್ರಗೀತೆ ಹಾಡುವ ವೇಳೆ ಬಾವುಕರಾಗಿ ಕಣ್ಣೀರು ಒರೆಸುತ್ತಿದಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

ಸಿಡ್ನಿ: ಇದು ಕ್ರಿಕೆಟ್ ಧರ್ಮ ಅಂದ್ರೆ.. ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿ ಉಳಿದಿಲ್ಲ. ಬದಲಾಗಿ ಅದು ಪ್ರತಿಯೊಬ್ಬ ಭಾರತೀಯನ ಭಾವನೆಗಳಲ್ಲಿ ಬೆರೆತು ಹೋಗಿದೆ. ರಾಷ್ಟ್ರ ಧರ್ಮವಾಗಿದೆ. ಹೀಗಾಗಿಯೇ ಭಾರತದಲ್ಲಿ ಕ್ರಿಕೆಟ್, ರಾಷ್ಟ್ರೀಯ ಕ್ರೀಡೆಗಿಂತ ಹೆಚ್ಚು ಜನಮನ್ನಣೆ ಗಳಿಸಿರುವುದು. ಕೇವಲ ರೋಮಾಂಚನಗೊಳಿಸುವ ಹೊಡಿಬಡಿ ಆಟದಿಂದ ಕ್ರಿಕೆಟ್ ಭಾರತದಲ್ಲಿ ನೆಲೆಯೂರಿಲ್ಲ. ಬದಲಿಗೆ ಕ್ರಿಕೆಟ್ನಲ್ಲಿರುವ ಶಿಸ್ತುಬದ್ಧ ನಿಯಮಗಳೇ ಇದನ್ನು ಜಂಟಲ್ಮೆನ್ ಗೇಮ್ ಎಂದು ಕರೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.
ಅದರಲ್ಲೂ ಟೀಂ ಇಂಡಿಯಾ ಆಟಗಾರರು ಈ ಕ್ರಿಕೆಟ್ ಜೊತೆ ಎಷ್ಟು ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂಬುದು ಇಡೀ ಜಗತ್ತಿಗೆ ತಿಳಿದಿರುವ ವಿಷಯವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪ್ರಾರಂಭವಾಗುವ ಮುನ್ನ ಎರಡು ತಂಡದ ಆಟಗಾರರು ರಾಷ್ಟ್ರಗೀತೆ ಹೇಳುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾಗಿ ಕಣ್ಣೀರು ಹರಿಸಿದರು.
ಸಿರಾಜ್‌ಗೆ ಇದು ಭಾವನಾತ್ಮಕ ಸರಣಿ.. ಹೌದು.. ಕಳೆದ ವಾರವಷ್ಟೇ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಬಲಗೈ ವೇಗಿ ಸಿರಾಜ್ ರಾಷ್ಟ್ರಗೀತೆ ಹಾಡುವ ವೇಳೆ ಭಾವುಕರಾಗಿ ಕಣ್ಣೀರು ಒರೆಸುತ್ತಿದಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಆಸಿಸ್ ನೆಲದಲ್ಲಿ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಪ್ರಾರಂಭದ ಮೊದಲು ತನ್ನ ತಂದೆಯನ್ನು ಕಳೆದುಕೊಂಡ ಸಿರಾಜ್‌ಗೆ ಇದು ಒಂದು ಭಾವನಾತ್ಮಕ ಸರಣಿ ಯಾಗಿದೆ. ಸಿರಾಜ್‌ಗೆ ತನ್ನ ಮನೆಗೆ ಹಿಂದಿರುಗುವ ಆಯ್ಕೆಯನ್ನು ನೀಡಲಾಗಿದ್ದರೂ ಸಹ ಅವರು ಆಸಿಸ್ ನಾಡಲ್ಲೇ ಉಳಿದು ಟೆಸ್ಟ್ ಆಡಲು ನಿರ್ಧರಿಸಿದರು.
ವೇಗ ಮತ್ತು ಸ್ವಿಂಗ್ ಬೌಲಿಂಗ್ ಮಾಡುವ ಮುಖಾಂತರ ಎಲ್ಲರನ್ನೂ ಮೆಚ್ಚಿಸಿದ ಸಿರಾಜ್, ಭಾರತ ಎರಡನೇ ಟೆಸ್ಟ್ ಪಂದ್ಯವನ್ನು ಎಂಟು ವಿಕೆಟ್‌ಗಳಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರ ನಡೆದ ಮೊಹಮ್ಮದ್ ಶಮಿ ಅವರ ಸ್ಥಾನದಲ್ಲಿ ಅವಕಾಶ ಪಡೆದ ಸಿರಾಜ್, 2ನೇ ಟೆಸ್ಟ್ ಮ್ಯಾಚ್ನಲ್ಲಿ 77 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದು ಮಿಂಚಿದರು. ಸಿರಾಜ್ ಅವರ ಈ ಅದ್ಭುತ ಪ್ರದರ್ಶನದಿಂದ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಪ್ರಸ್ತುತ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್, ಆಸಿಸ್ನ ಆರಂಭಿಕ ದೈತ್ಯ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ವಿಕೆಟ್ ತೆಗಿಯುವಲ್ಲಿ ಯಶಸ್ವಿಯಾಗಿದ್ದಲ್ಲದೆ ತಂಡಕ್ಕೆ ಮತ್ತೊಮ್ಮೆ ಆಸರೆಯಾಗಿದ್ದಾರೆ.
✊ #AUSvIND pic.twitter.com/4NK95mVYLN
— cricket.com.au (@cricketcomau) January 6, 2021




