AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮಂಗಗಳ ಆರ್ತನಾದ ಕೇಳೋರಿಲ್ಲ.. ಹತ್ತಾರು ಮಂಗಗಳಿಗೆ ಜಲ ಕಂಟಕ

ಬಾಗಲಕೋಟೆ: ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಕ್ಕನಸಬಿ ಗ್ರಾಮ ಬಳಿ ಮಲಪ್ರಭಾ ನದಿ ನೀರಲ್ಲಿ ಇದೀಗ ಹತ್ತಾರು ಮಂಗಗಳು ಸಿಲುಕಿ ನರಳಾಡುತ್ತಿವೆ. ಮಲಪ್ರಭಾ ನದಿಯ ಹಿನ್ನೀರಿನ ನಡುಗಡ್ಡೆಯ ಕಂಟಿಯಲ್ಲಿ ಕುಳಿತಿರುವ 15ಕ್ಕೂ ಹೆಚ್ಚು ಮಂಗಗಳ ಗುಂಪು ಪರದಾಡತೊಡಗಿವೆ. ಎರಡು ದಿನದಿಂದ ಆಹಾರವಿಲ್ಲದೇ ಪರದಾಡುತ್ತಿರುವ ಮಂಗಗಳಿಗೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವ ನೀರಿನ ಮಟ್ಟ ಮತ್ತಷ್ಟು ಸಂಕಷ್ಟ ತಂದೊಡ್ದಿದೆ. ಇದೀಗ, ನಡುಗಡ್ಡೆ ಮುಳುಗುವ ಹಂತ ತಲುಪಿದ್ದು ಕಂಟಿ ಯಾವುದೇ ಕ್ಷಣದಲ್ಲಿ ಜಲಾವೃತಗೊಳ್ಳುವ ಸಾಧ್ಯತೆಯಿದೆ. […]

ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮಂಗಗಳ ಆರ್ತನಾದ ಕೇಳೋರಿಲ್ಲ.. ಹತ್ತಾರು ಮಂಗಗಳಿಗೆ ಜಲ ಕಂಟಕ
ಸಾಧು ಶ್ರೀನಾಥ್​
| Edited By: |

Updated on: Aug 19, 2020 | 10:55 AM

Share

ಬಾಗಲಕೋಟೆ: ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಕ್ಕನಸಬಿ ಗ್ರಾಮ ಬಳಿ ಮಲಪ್ರಭಾ ನದಿ ನೀರಲ್ಲಿ ಇದೀಗ ಹತ್ತಾರು ಮಂಗಗಳು ಸಿಲುಕಿ ನರಳಾಡುತ್ತಿವೆ.

ಮಲಪ್ರಭಾ ನದಿಯ ಹಿನ್ನೀರಿನ ನಡುಗಡ್ಡೆಯ ಕಂಟಿಯಲ್ಲಿ ಕುಳಿತಿರುವ 15ಕ್ಕೂ ಹೆಚ್ಚು ಮಂಗಗಳ ಗುಂಪು ಪರದಾಡತೊಡಗಿವೆ. ಎರಡು ದಿನದಿಂದ ಆಹಾರವಿಲ್ಲದೇ ಪರದಾಡುತ್ತಿರುವ ಮಂಗಗಳಿಗೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವ ನೀರಿನ ಮಟ್ಟ ಮತ್ತಷ್ಟು ಸಂಕಷ್ಟ ತಂದೊಡ್ದಿದೆ.

ಇದೀಗ, ನಡುಗಡ್ಡೆ ಮುಳುಗುವ ಹಂತ ತಲುಪಿದ್ದು ಕಂಟಿ ಯಾವುದೇ ಕ್ಷಣದಲ್ಲಿ ಜಲಾವೃತಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ನಡುಗಡ್ಡೆ ಸಂಪೂರ್ಣವಾಗಿ ಮುಳುಗಿದರೆ ಹದಿನೈದಕ್ಕೂ ಹೆಚ್ಚು ಮಂಗಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿದೆ.

ಅರಣ್ಯಾಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ.. ಹೀಗಾಗಿ, ಸ್ಥಳೀಯ ಯುವಕರು ಮಂಗಗಳ ರಕ್ಷಣೆ ಮಾಡಲು ಪ್ರಯತ್ನಿಸ್ತಿದಾರೆ. ಆದರೆ, ನೀರಿನ ಹರಿವು ಹೆಚ್ಚಾಗಿರುವುದರಿಂದ ಅದೂ ಸಾಧ್ಯವಾಗುತ್ತಿಲ್ಲ. ಈ ಕುರಿತು, ಅರಣ್ಯಾಧಿಕಾರಿಗಳಿಗೆ ತಿಳಿಸಿದರೂ ಅವರು ಕ್ಯಾರೇ ಅನ್ನುತ್ತಿಲ್ಲ. ಸ್ಥಳಕ್ಕೆ ಬರೋದಾಗಿ ಹೇಳಿದರೂ ಇತ್ತ ತಿರುಗಿ ನೋಡಿಲ್ಲ ಎಂದು ಯುವಕರು ಆಕ್ರೋಶ ಹೊರಹಾಕಿದ್ದಾರೆ. ಒಟ್ನಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯರ ಕ್ಷೇತ್ರದಲ್ಲಿ ಮಂಗಗಳ ಆರ್ತನಾದ ಕೇಳೋರಿಲ್ಲದಂತಾಗಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?