ತುಮಕೂರು: ಮುಖ್ಯಮಂತ್ರಿ ಬಿಎಸ್ ಯಡಿಯರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುತ್ತಾರೆ ಎನ್ನುವ ಬಿಜೆಪಿ ವಲಯದಲ್ಲಿನ ಗುಸು ಗುಸು ಸುದ್ದಿಗೆ ವೀರಶೈವ ಲಿಂಗಾಯತ ವಲಯ ಎಚ್ಚೆತ್ತುಕೊಂಡಿದ್ದು, ಹತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಬಿಎಸ್‌ವೈ ಅವರನ್ನು ಬದಲಾಯಿಸದಂತೆ ಬಿಜೆಪಿ ನಾಯಕತ್ವಕ್ಕೆ ಎಚ್ಚರಿಕೆ ನೀಡಿವೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್ ಯಡಿಯೂರಪ್ಪ ಕಾರಣ. ಅವರಿಂದಾಗಿಯೇ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕಿದ್ದಾರೆ. ಬಿಎಸ್‌ವೈ ಇರೋವರೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತೆ. ಅವರನ್ನು ಕೆಳಗಿಳಿಸಿದರೆ ವೀರಶೈವರು ತಿರುಗಿ ಬಿಳುತ್ತಾರೆ. ಹೀಗಾಗಿ ಅವರನ್ನು ಬದಲಾಯಿಬೇಡಿ ಎಂದು ಯಡಿಯೂರಪ್ಪ ಪರ ವೀರಶೈವ ಸಾಮೀಜಿಗಳು ಬ್ಯಾಟ್ ಮಾಡಿದ್ದಾರೆ.
ಸುಮಾರು ಹತ್ತಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮಠಾಧೀಶರು ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಎಸ್‌ವೈಗೆ ಬೆಂಬಲ ಸೂಚಿಸಿದರು. ತಿಪಟೂರು ರುದ್ರಮುನಿ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಡಾಕ್ಟರ್ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಸೇರಿದ್ದ ಸ್ವಾಮೀಜಿಗಳು ಬಿಎಸ್‌ವೈ ಅವರನ್ನು ಬದಲಾಯಿಸುವ ಕೆಲವರ ಪ್ರಯತ್ನವನ್ನ ತೀವ್ರವಾಗಿ ಖಂಡಿಸಿದರು.