ಬೆಳೆ ನಾಶದಿಂದ ಬೇಸತ್ತು ನದಿ ಪಾಲಾಗ್ತೀವಿ ಅಂತಾ ಮರವೇರಿದ ತಾಯಿ-ಮಗ, ಮುಂದೇನಾಯ್ತು?
ವಿಜಯಪುರ: ಬೆಳೆ ನಾಶದಿಂದ ಬೇಸತ್ತು ತಾಯಿ ಮತ್ತು ಆಕೆಯ ಮಗ ಮರವೇರಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಣಿ ಗ್ರಾಮದಲ್ಲಿ ನಡೆದಿದೆ. ಬೆಳೆ ನಾಶದಿಂದ ಮನನೊಂದಿದ್ದ ತಾಯಿ ಹಾಗೂ ಮಗನನ್ನು ರಕ್ಷಣೆ ಮಾಡಲಾಗಿದೆ. ಭೀಮಾ ನದಿ ಪ್ರವಾಹಕ್ಕೆ ಸಿಲುಕಿ ತಮ್ಮ ಜಮೀನಿನಲ್ಲಿದ್ದ ಬಾಳೆ ಹಾಗೂ ಕಬ್ಬು ಬೆಳೆ ಹಾಳಾದ ಕಾರಣ ತನ್ನ 110 ವರ್ಷದ ತಾಯಿ ನೀಲಮ್ಮಳ ಜೊತೆ ಶಿವಮಲಪ್ಪ ಕೋಳಿ ಮರವೇರಿ ಕುಳಿತಿದ್ದ. ಇಡೀ ಬೆಳೆ ಹಾಳಾಗಿದೆ. ನಮ್ಮನ್ನ ರಕ್ಷಣೆ ಮಾಡೋಕೆ ಯಾರೂ ಬರಲಿಲ್ಲ. ನಾನು […]

ವಿಜಯಪುರ: ಬೆಳೆ ನಾಶದಿಂದ ಬೇಸತ್ತು ತಾಯಿ ಮತ್ತು ಆಕೆಯ ಮಗ ಮರವೇರಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಣಿ ಗ್ರಾಮದಲ್ಲಿ ನಡೆದಿದೆ. ಬೆಳೆ ನಾಶದಿಂದ ಮನನೊಂದಿದ್ದ ತಾಯಿ ಹಾಗೂ ಮಗನನ್ನು ರಕ್ಷಣೆ ಮಾಡಲಾಗಿದೆ.
ಭೀಮಾ ನದಿ ಪ್ರವಾಹಕ್ಕೆ ಸಿಲುಕಿ ತಮ್ಮ ಜಮೀನಿನಲ್ಲಿದ್ದ ಬಾಳೆ ಹಾಗೂ ಕಬ್ಬು ಬೆಳೆ ಹಾಳಾದ ಕಾರಣ ತನ್ನ 110 ವರ್ಷದ ತಾಯಿ ನೀಲಮ್ಮಳ ಜೊತೆ ಶಿವಮಲಪ್ಪ ಕೋಳಿ ಮರವೇರಿ ಕುಳಿತಿದ್ದ.
ಇಡೀ ಬೆಳೆ ಹಾಳಾಗಿದೆ. ನಮ್ಮನ್ನ ರಕ್ಷಣೆ ಮಾಡೋಕೆ ಯಾರೂ ಬರಲಿಲ್ಲ. ನಾನು ನನ್ನ ತಾಯಿ ನದಿ ಪಾಲಾಗ್ತೀವಿ ಎಂದು ಮನನೊಂದು ಶಿವಮಲ್ಲಪ್ಪ ತನ್ನ ತಾಯಿಯೊಂದಿಗೆ ಮರದ ಮೇಲೆ ಕುಳಿತುಬಿಟ್ಟ. ರಾತ್ರಿಯಿಡಿ ಮರವೇರಿ ಕುಳಿತಿದ್ದ ತಾಯಿ ಮಗ ಜೋಡಿಯನ್ನು ಕೊನೆಗೂ ಮನವೊಲಿಸಿ ಇಂದು ಸ್ಥಳಿಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.




