ಮದ್ಯ ಸೇವನೆಗೆ ಹಣ ನೀಡದಿದ್ದಕ್ಕೆ ತಾಯಿಯನ್ನೇ ಕೊಂದ ಮಗ.. ನಾಪತ್ತೆಯಾಗಿದ್ದ ವೃದ್ದೆ ಶವ ನದಿಯಲ್ಲಿ ಪತ್ತೆ

ಮದ್ಯ ಕುಡಿಯಲು ಹಣ ನೀಡದಕ್ಕೆ ಹೆತ್ತ ಮಗನೇ ತಾಯಿಯನ್ನ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರು ಕೆ ಗ್ರಾಮದಲ್ಲಿ ನಡೆದಿದೆ.

ಮದ್ಯ ಸೇವನೆಗೆ ಹಣ ನೀಡದಿದ್ದಕ್ಕೆ ತಾಯಿಯನ್ನೇ ಕೊಂದ ಮಗ.. ನಾಪತ್ತೆಯಾಗಿದ್ದ ವೃದ್ದೆ ಶವ ನದಿಯಲ್ಲಿ ಪತ್ತೆ
ತಾಯಿಯನ್ನ ಕೊಂದ ಮಗ ಯಲ್ಲಪ್ಪ ಪೂಜಾರಿ

Updated on: Mar 20, 2021 | 9:51 AM

ಕಲಬುರಗಿ: ಮದ್ಯ ಕುಡಿಯಲು ಹಣ ನೀಡದಕ್ಕೆ ಹೆತ್ತ ಮಗನೇ ತಾಯಿಯನ್ನ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರು ಕೆ ಗ್ರಾಮದಲ್ಲಿ ನಡೆದಿದೆ. ಭೀಮಬಾಯಿ ಪೂಜಾರಿ 75 ಕೊಲೆಯಾದ ವೃದ್ದೆಯಾಗಿದ್ದು, ಇಂದು ನಸುಕಿನ ಜಾವದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಭೀಮಬಾಯಿ ಕಿರಿಯ ಪುತ್ರ ಯಲ್ಲಪ್ಪ ಪೂಜಾರಿಯಿಂದ ಈ ಕೃತ್ಯ ಎಸಗಲಾಗಿದ್ದು, ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನದಿಯಲ್ಲಿ ವೃದ್ದೆ ಶವ ಪತ್ತೆ..
ಮೈಸೂರು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ದೆ ಶವ ನದಿಯ ಬದಿಯಲ್ಲಿ ಗೋಣಿಚೀಲದಲ್ಲಿ ಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕು ಬಿಳಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ತಾಲೂಕು ಕುಪ್ಪೇಗಾಲ ಗ್ರಾಮದ ನಿವಾಸಿ ಪುಟ್ಟಮ್ಮ(65) ಮೃತ ದುರ್ದೈವಿಯಾಗಿದ್ದು, ಯಾರೋ ಕೊಲೆ ಮಾಡಿರಬಹುದೆಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಫೋನ್ ಕರೆಯೊಂದು ಬಂದ ಹಿನ್ನೆಲೆಯಿಂದಾಗಿ ಮೂರು ದಿನಗಳ ಹಿಂದೆ ಪುಟ್ಟಮ್ಮ ಮನೆ ಬಿಟ್ಟಿದ್ದರು. ಪರಿಚಯಸ್ಥರಿಗೆ ನೀಡಿದ್ದ ಸಾಲವನ್ನು ವಸೂಲಿ ಮಾಡುವ ಸಲುವಾಗಿ ಪುಟ್ಟಮ್ಮ ತೆರಳಿದ್ದರು. ಆದರೆ ಮೂರು ದಿನಗಳ ನಂತರ ಗೋಣಿಚೀಲದಲ್ಲಿ ಪುಟ್ಟಮ್ಮನವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬಿಳಿಗೆರೆ ಠಾಣಾ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಮೃತ ದೇಹ ಪತ್ತೆ: ಪತಿಯ ವಿರುದ್ಧ ಕುಟುಂಬಸ್ಥರಿಂದ ಕೊಲೆ ಆರೋಪ

Published On - 9:51 am, Sat, 20 March 21

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us