ಬೆಂಗಳೂರು: ನಿನ್ನೆ ನಡೆದ 65ನೇ ಕನ್ನಡ ರಾಜ್ಯೋತ್ಸವದಂದು ಬೆಂಗಳೂರಿನ ಯುವ ಕಾಂಗ್ರೆಸ್ನ ಅಧ್ಯಕ್ಷರಾದ ಮೊಹ್ಮದ್ ಹ್ಯಾರಿಸ್ ನಲಪಾಡ್ ವಿವಿಧ ಸಮಸ್ಯೆಗಳಿಗೆ ಪರಿಹಾರೋಪಾಯವನ್ನು ಕಂಡುಕೊಳ್ಳುವ ‘ಲೆಟ್ಸ್ ಟೇಕ್ ಚಾರ್ಜ್’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಈ ಅಭಿಯಾನದ ಮೂಲ ಉದ್ದೇಶವೆಂದರೆ ನಲಪಾಡ್ ಅವರು ಜನರ ಮುಂದಿಡುವ ಸಮಸ್ಯೆಗಳಿಗೆ ನವ ಪೀಳಿಗೆಯ ಯುವಕ ಯುವತಿಯರು ತಮ್ಮ ಪರಿಹಾರೋಪಾಯವನ್ನು ತಿಳಿಸುವ ವಿಭಿನ್ನ ಪ್ರಯತ್ನ ಇದಾಗಿದೆ. ಅಭಿಯಾನದ ಪ್ರಾರಂಭದಲ್ಲಿ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಮೂಲಸೌಕರ್ಯದ ಕೊರತೆಯಿಂದ ಅಪಾರ ಆಸ್ತಿಪಾಸ್ತಿ ಹಾಗೂ ಜೀವಹಾನಿ ಉಂಟಾಗುತ್ತಿರುವ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವ ಕರ್ನಾಟಕದ ಯುವ ಜನರ ಧ್ವನಿಗೆ ಈ ಅಭಿಯಾನದ ಮೂಲಕ ವೇದಿಕೆ ಸಿಗಲಿದೆ. ನಾವು ಇಂದು ಮಾಡುವ ಆಯ್ಕೆ, ನಾಳಿನ ನಮ್ಮ ಭವಿಷ್ಯ ಹೀಗಾಗಿ ನಮ್ಮ ಆಯ್ಕೆಯು ಸಶಕ್ತವಾಗಿರಲು ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನ ಮಾಡುತ್ತಿದ್ದೇವೆ ಎಂದು ನಲಪಾಡ್ ತಿಳಿಸಿದ್ದಾರೆ.