ವರ್ಷಾಂತ್ಯಕ್ಕಿಲ್ಲ ಸ್ಟಾರ್ ಸಿನಿಮಾಗಳ ಅಬ್ಬರ.. ಸದ್ದಿಲ್ಲದೆ ಸೈಲೆಂಟ್ ಆದ ಬಿಗ್ ಸ್ಟಾರ್ಸ್
ಕೊರೊನಾ ಅವಾತಂರದ ಬಳಿಕ ಸಿನಿಮಾರಂಗ ಚೇತರಿಕೊಳ್ತಿದೆ. ಈ ವರ್ಷಾಂತ್ಯಕ್ಕೆ ನಾ ಮುಂದು, ತಾ ಮುಂದು ಅಂತಿದ್ದ ಸ್ಟಾರ್ ಸಿನಿಮಾಗಳು ಸೈಲೆಂಟ್ ಆಗಿ ಬಿಟ್ಟಿದೆ. ಈ ಡಿಸೆಂಬರ್ಗೆ ಸ್ಟಾರ್ ಸಿನಿಮಾಗಳಿಗಾಗಿ ಕಾಯ್ತಿದ್ದ ಪ್ರೇಕ್ಷಕರಿಗೆ ನಿರಾಸೆ ಆಗಿದೆ.

ಕೊರೊನಾ ಸಂಕಷ್ಟದಿಂದಾಗಿ ಬಣ್ಣದ ಲೋಕ ಅಕ್ಷರಶಃ ನಲುಗಿ ಹೋಗಿತ್ತು. ಚಿತ್ರರಂಗ ಈಗೀಗ ಕೊಂಚ ಚೇತರಿಸಿಕೊಳ್ತಿದೆ. ಥಿಯೇಟರ್ ಓಪನ್ ಆದ್ಮೆಲೆ ಒಂದೊಂದೇ ಸಿನಿಮಾಗಳು ತೆರೆಕಾಣೋ ಧೈರ್ಯ ಮಾಡ್ತಿವೆ. ಒಂದಲ್ಲಾ ಒಂದು ರೀತಿಯಲ್ಲಿ ಪ್ರೇಕ್ಷಕರನ್ನ ಸೆಳೆಯೋ ಪ್ರಯತ್ನ ಕೂಡ ಮಾಡ್ತಿವೆ. ಅನ್ಲಾಕ್ ಬಳಿಕ ತೆರೆಕಂಡ ಮೊದಲ ಸಿನಿಮಾ ಆ್ಯಕ್ಟ್ 1978 ಸಿನಿಮಾ ಪ್ರೇಕ್ಷಕರನ್ನ ಮೆಚ್ಚಿಸುವಲ್ಲಿ ಜಯ ಕಂಡಿದೆ. ಆದ್ರೆ ಸ್ಟಾರ್ ಸಿನಿಮಾಗಳು ಮಾತ್ರ ಪ್ರೇಕ್ಷಕರ ಅಗಾಧ ನಿರೀಕ್ಷೆಯನ್ನ ಹುಸಿ ಮಾಡಿ ಬಿಟ್ಟಿವೆ.
ಸದ್ಯಕ್ಕೆ ರಿಲೀಸ್ ಆಗಲ್ಲ ರಾಬರ್ಟ್ ಮತ್ತು ಪೊಗರು: 2020 ಡಿಸೆಂರ್ನಲ್ಲಿ ರಾಬರ್ಟ್ ಮತ್ತು ಪೊಗರು ಹವಾ ಜೋರಾಗಿರುತ್ತೆ ಅನ್ನೋ ನಿರೀಕ್ಷೆ ಇತ್ತು. ಮೊದಮೊದಲು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾನೇ ಮೊದಲು ಚಿತ್ರಮಂದಿರಕ್ಕೆ ಬರ್ಬೇಕು ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿತ್ತು. ದರ್ಶನ್ ಮೊದಲು ಥಿಯೇಟರ್ಗೆ ಬಂದ್ರೆ ಪ್ರೇಕ್ಷಕರು ಭಯವಿಲ್ದೇ ಸಿನಿಮಾ ಹಾಲ್ಗೆ ಬರ್ತಾರೆ ಅಂದಿತ್ತು ಗಾಂಧಿನಗರ. ಆದ್ರೆ ರಾಬರ್ಟ್ ಡಿಸೆಂಬರ್ಗೆ ಬರೋ ಯೋಜನೆಯನ್ನ ಕೈ ಬಿಟ್ಟಿದೆ.
ಇನ್ನೂ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಕ್ರಿಸ್‌ಮಸ್ ರಂಗು ಹೆಚ್ಚಿಸಲು ಬರೋದು ಪಕ್ಕಾ ಅಂತಿತ್ತು ಚಿತ್ರತಂಡ. ಡಿಸೆಂಬರ್ 25ಕ್ಕೆ ಪೊಗರು ರಿಲೀಸ್ ಆಗುತ್ತೆ ಅಂತ ಚಿತ್ರತಂಡ ಹೇಳಿಕೊಂಡಿತ್ತು. ಆದ್ರೆ ಈಗ ಪೊಗರು ಕೊಡ ಕೊರೊನಾ ಆಫ್ಟರ್ ಎಫೆಕ್ಟ್ಗೆ ಹೆದರಿ ಮಂಕಾಗಿದೆ. ರಿಲೀಸ್ ಡೇಟ್ ಪೋಸ್ಟ್ ಮಾಡಿರೋ ಪೊಗರು ಚಿತ್ರತಂಡ ಜನವರಿಯಲ್ಲಿ ತೆರೆಕಾಣೋಕೆ ಪ್ಲ್ಯಾನ್ ಮಾಡ್ತಿದೆ.
ಇನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಮುಂದಿನ ವರ್ಷ ಮಾರ್ಚ್ಗೆ ಗುರಿ ಇಟ್ಟಿದೆ. ಇದು ಬಿಟ್ರೆ ಶಿವರಾಜ್ಕುಮಾರ್ ಅಭಿನಯದ ಭಜರಂಗಿ 2, ಸುದೀಪ್ ಅಭಿನಯದ ಕೋಟಿಗೊಬ್ಬ3, ಯಶ್ರ ಕೆಜಿಎಫ್2 ಸಿನಿಮಾಗಳು ಇನ್ನೂ ಸದ್ಯಕ್ಕೆ ಸಿನಿಮಾ ಮಂದಿರಕ್ಕೆ ಲಗ್ಗೆ ಇಡೋ ಚಿಂತನೆ ಮಾಡಿಲ್ಲ.
ಒಟ್ಟಾರೆ ಕೊರೊನಾ ಇರೋದ್ರಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಾರೋ ಇಲ್ವೋ ಅನ್ನೋ ಲೆಕ್ಕಾಚಾರ ಹಾಕುತ್ತಿವೆ ಸ್ಟಾರ್ ಸಿನಿಮಾಗಳು. ಈ ವರ್ಷಾಂತ್ಯಕ್ಕೆ ಸಿನಿ ಪ್ರಿಯರಿಗೆ ನಿರಾಸೆಯಾಗಿದ್ರೂ, ಮುಂದಿನ ವರ್ಷವಿಡೀ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನೋಡೋ ಅವಕಾಶ ಸಿಗಲಿದೆ.
ಪ್ರಭಾಸ್ ನಟನೆಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್.. ಕನ್ನಡದಲ್ಲಿ ಸಿಗಲಿಲ್ವಾ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕ?
Published On - 6:50 am, Thu, 10 December 20