ಉತ್ತರ ಕನ್ನಡದಲ್ಲಿ ಮಳೆ ಮಳೆ: ಕಾಳಿ ನದಿ ತೀರದ ಜನರಿಗೆ ಎಚ್ಚರಿಕೆ
ಉತ್ತರ ಕನ್ನಡ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಜಿಲ್ಲೆಯ ಗೋಕರ್ಣದಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿ ಹೋಗಿದೆ. ಪಟ್ಟಣದ ಮುಖ್ಯರಸ್ತೆ ಜಲಾವೃತವಾಗಿದ್ದು ಸುಮಾರು ಅರ್ಧ ಅಡಿಗೂ ಅಧಿಕ ನೀರು ನಿಂತಿದೆ. ಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ ಹಲವಡೆ ವಿದ್ಯುತ್ ಸಹ ಕಡಿತವಾಗಿದೆ. ಅಲ್ಲಲ್ಲಿ ಮರ ಧರೆಗುರುಳಿವೆ. ಕೃಷಿ ಚಟುವಟಿಕೆಗೂ ಸಮಸ್ಯೆ ಎದುರಾಗಿದೆ.ಕೆಲವೆಡೆ ರಸ್ತೆ ಸಂಚಾರ ಬಂದ್ ಆಗಿದ್ದು ಮಾರ್ಗಮಧ್ಯೆ ಜನ ಸಿಲುಕಿದ್ದಾರೆ. ಇದಲ್ಲದೆ, ಕಾಳಿ ನದಿ ವ್ಯಾಪ್ತಿಯ ಪ್ರದೇಶಗಳಲ್ಲಿಯೂ ಮಳೆ ಜೋರಾಗಿದ್ದು, ಕದ್ರಾ ಜಲಾಶಯಕ್ಕೆ ನೀರಿನ ಒಳ ಹರಿವು […]

ಉತ್ತರ ಕನ್ನಡ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಜಿಲ್ಲೆಯ ಗೋಕರ್ಣದಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿ ಹೋಗಿದೆ. ಪಟ್ಟಣದ ಮುಖ್ಯರಸ್ತೆ ಜಲಾವೃತವಾಗಿದ್ದು ಸುಮಾರು ಅರ್ಧ ಅಡಿಗೂ ಅಧಿಕ ನೀರು ನಿಂತಿದೆ.
ಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ ಹಲವಡೆ ವಿದ್ಯುತ್ ಸಹ ಕಡಿತವಾಗಿದೆ. ಅಲ್ಲಲ್ಲಿ ಮರ ಧರೆಗುರುಳಿವೆ. ಕೃಷಿ ಚಟುವಟಿಕೆಗೂ ಸಮಸ್ಯೆ ಎದುರಾಗಿದೆ.ಕೆಲವೆಡೆ ರಸ್ತೆ ಸಂಚಾರ ಬಂದ್ ಆಗಿದ್ದು ಮಾರ್ಗಮಧ್ಯೆ ಜನ ಸಿಲುಕಿದ್ದಾರೆ.
ಇದಲ್ಲದೆ, ಕಾಳಿ ನದಿ ವ್ಯಾಪ್ತಿಯ ಪ್ರದೇಶಗಳಲ್ಲಿಯೂ ಮಳೆ ಜೋರಾಗಿದ್ದು, ಕದ್ರಾ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಆದ್ದರಿಂದ, ಮುಂಜಾಗೃತಾ ಕ್ರಮವಾಗಿ ಕದ್ರಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರನ್ನು 6 ಗೇಟ್ ಗಳ ಮೂಲಕ ಹೊರ ಬಿಡಲಾಗಿದೆ. ಜೊತೆಗೆ, ನದಿ ತೀರದ ಜನರಿಗೆ ಎಚ್ಚರಿಕೆ ನೀಡಿ ಸ್ಥಳಾಂತರಿಸಿರುವ ಕಾರ್ಯ ಭರದಿಂದ ಸಾಗಿದೆ.




