Over Thinking: ಅತಿಯಾಗಿ ಚಿಂತಿಸುವವರು ಗಮನಿಸಲೇಬೇಕಾದ ಎಂಟು ಅಂಶಗಳಿವು

ನಾವು ಹಲವು ಬಾರಿ ಯಾವುದನ್ನು ಸಮಸ್ಯೆ ಎಂದು ಅಂದುಕೊಳ್ಳುತ್ತೇವೋ ಅದು ನಿಜವಾಗಿಯೂ ಸಮಸ್ಯೆ ಆಗಿರುವುದಿಲ್ಲ. ನಾವೇ ಚಿಂತೆ ಮಾಡಿ ಅದನ್ನು ಕಗ್ಗಂಟಾಗಿಸಿ, ಸಮಸ್ಯೆ ಅಂದುಕೊಂಡಿರುತ್ತೇವೆ. ಸಮಸ್ಯೆ ಅಲ್ಲದ ವಿಚಾರಕ್ಕೆ ಹೆಚ್ಚು ಸಮಯ ನೀಡುವುದನ್ನು ಬಿಟ್ಟುಬಿಡಬೇಕು.

Over Thinking: ಅತಿಯಾಗಿ ಚಿಂತಿಸುವವರು ಗಮನಿಸಲೇಬೇಕಾದ ಎಂಟು ಅಂಶಗಳಿವು
Follow us
TV9 Web
| Updated By: ganapathi bhat

Updated on:Apr 05, 2022 | 1:17 PM

ಓವರ್ ಥಿಂಕಿಂಗ್ ಅಥವಾ ಅತಿಯಾಗಿ ಯೋಚಿಸುವ ಜನರು ನಮ್ಮ ನಡುವೆ ಹಲವರಿರಬಹುದು. ಏನಾದರೂ ಆದರೆ, ಆಗಬೇಕಿದ್ದರೆ ಅದನ್ನು ಅತಿಯಾಗಿ ಚಿಂತಿಸುವುದು ಅಂಥವರ ಅಭ್ಯಾಸ. ಹೆಚ್ಚು ಹೆಚ್ಚು ಯೋಚಿಸುತ್ತಾ, ಹೆಚ್ಚು ಹೆಚ್ಚು ನೋವು ಅನುಭವಿಸುತ್ತಾ, ಹೆಚ್ಚು ಹೆಚ್ಚೇ ಮೌನಕ್ಕೆ ಜಾರುತ್ತಾರೆ. ಚಿಂತೆ ಹೆಚ್ಚಾದಷ್ಟು ಮನಸ್ಸಿಗೆ ಭಾರ. ಅದೇ ಕಾರಣಕ್ಕೆ ನಮ್ಮ ಹಿರಿಯರೂ ಚಿಂತೆಯನ್ನು ಚಿತೆಗೆ ಹೋಲಿಸಿಬಿಟ್ಟಿದ್ದಾರೆ. ಅತಿಯಾಗಿ ಯೋಚನೆಗೆ ಇಳಿದು, ಚಿಂತಿಸುತ್ತಾ ಮರುಗುವವರು ನೀವಾಗಿದ್ದರೆ ಈ ಕೆಳಗಿನ ಅಂಶಗಳನ್ನು ಗಮನಿಸಿ. ಓವರ್ ಥಿಂಕಿಂಗ್ ಕಡಿಮೆ ಮಾಡಲು ಈಗಿನಿಂದಲೇ ಪ್ರಯತ್ನಿಸಿ. 

ಸಮಸ್ಯೆಗಳು ಬಹಳಷ್ಟು ಬಾರಿ ಸಮಸ್ಯೆಯೇ ಆಗಿರುವುದಿಲ್ಲ ನಾವು ಹಲವು ಬಾರಿ ಯಾವುದನ್ನು ಸಮಸ್ಯೆ ಎಂದು ಅಂದುಕೊಳ್ಳುತ್ತೇವೋ ಅದು ನಿಜವಾಗಿಯೂ ಸಮಸ್ಯೆ ಆಗಿರುವುದಿಲ್ಲ. ನಾವೇ ಚಿಂತೆ ಮಾಡಿ ಅದನ್ನು ಕಗ್ಗಂಟಾಗಿಸಿ, ಸಮಸ್ಯೆ ಅಂದುಕೊಂಡಿರುತ್ತೇವೆ. ಸಮಸ್ಯೆ ಅಲ್ಲದ ವಿಚಾರಕ್ಕೆ ಹೆಚ್ಚು ಸಮಯ ನೀಡುವುದನ್ನು ಬಿಟ್ಟುಬಿಡಬೇಕು. ಯಾವುದಕ್ಕೆ ನಿಜವಾಗಿಯೂ ಸಮಯ ಬೇಕೋ ಆ ಕೆಲಸಕ್ಕೆ ಸಮಯ ನೀಡಿ.

ಕೀಳರಿಮೆ ಬಿಟ್ಹಾಕಿ ಅತಿಯಾಗಿ ಯೋಚಿಸುವವರ ಮತ್ತೊಂದು ಸಮಸ್ಯೆ ಎಂದರೆ ಅದು ಕೀಳರಿಮೆ. ಅಥವಾ ತಮ್ಮ ಬಗ್ಗೆ ತಮಗೆ ನಂಬಿಕೆ ಇಲ್ಲದಿರುವುದು. ನಿಮ್ಮ ಬಗ್ಗೆ ನಿಮಗೆ ವಿಶ್ವಾಸ ಇಲ್ಲದಿದ್ದರೆ ಆಗಬೇಕಾದ ಕೆಲಸಕ್ಕೆ ಮುನ್ನುಗ್ಗುವುದು ಕಷ್ಟ. ಮಾಡುವ ಕೆಲಸವನ್ನೂ ಮಾಡದಂತೆ ಅದು ತಡೆಯುತ್ತದೆ. ಹಾಗಾಗಿ, ನಿಮ್ಮ ಬಗ್ಗೆ ನೀವು ಅತಿಯಾಗಿ ಯೋಚಿಸಬೇಡಿ. ಉಳಿದಂತೆ, ನಿಮ್ಮ ಬಣ್ಣ, ಎತ್ತರ, ಗಾತ್ರ, ದೇಹ, ರೂಪ, ಆರ್ಥಿಕ ಸ್ಥಿತಿ, ಮನೆ ಯಾವುದರ ಬಗ್ಗೆಯೂ ಅತಿಯಾಗಿ ಋಣಾತ್ಮಕ ಚಿಂತೆ ಮಾಡಬೇಡಿ. ಧನಾತ್ಮಕ ಭಾವ ಬೆಳೆಸಿಕೊಳ್ಳಿ.

ಸಮಯಕ್ಕೆ ಬೆಲೆ ಕೊಡಿ ಕೆಲವೊಮ್ಮೆ ನಮ್ಮ ಸ್ಥಿತಿ ಹೇಗಿರುತ್ತದೆ ಅಂದರೆ, ಯೋಚಿಸುತ್ತಾ ಯೋಚಿಸುತ್ತಾ ಎಷ್ಟು ಸಮಯ ಕಳೆದೆವು ಎಂದೇ ನಮಗೆ ಗೊತ್ತಾಗುವುದಿಲ್ಲ. ಹಗಲುಗನಸಿಗೂ ಅತಿಯಾದ ಸಮಯ ಕೊಟ್ಟಿರುತ್ತೇವೆ. ಸಮಯಕ್ಕೆ ಪ್ರಾಮುಖ್ಯತೆ ಕೊಡಿ. ಅನಾವಶ್ಯಕವಾಗಿ ಚಿಂತಿಸುವುದನ್ನು ಗಂಟೆಗಟ್ಟಲೆ ಮಾಡಿದರೆ ಅದರಿಂದ ಸಮಯ ಹಾಳು. ಆ ಹೊತ್ತಿನಲ್ಲಿ ನೀವು ಬೇರೇನೋ ಒಳ್ಳೆಯ ಕೆಲಸವನ್ನು ಮಾಡಬಹುದು.

ಈ ಪ್ರಶ್ನೆಗಳನ್ನು ಹಾಕಿಕೊಳ್ಳಿ ಆಗಿ ಹೋಗಿರುವ ಘಟನೆಯನ್ನು ಸರಿಪಡಿಸಲು ನೀವು ‘ಈಗ’ ಏನಾದರೂ ಮಾಡಬಲ್ಲಿರಾ? ಅಥವಾ ಅತಿಯಾಗಿ ಯೋಚಿಸಿ ಮುಂದಿನ ಬದುಕಿಗೆ ಖಂಡಿತವಾಗಿ ಉಪಯೋಗ ಆಗಲಿದೆಯಾ? ಇಲ್ಲ ಎಂದಾದಮೇಲೆ ಅತಿಯಾದ ಯೋಚನೆ ಸುಮ್ಮನೆ ಎಂದಾಯಿತಲ್ಲವೇ? ನೀವು ಚಿಂತಿಸುವುದರಿಂದ ಒಳ್ಳೆಯದಾಗುವುದಿದ್ದರೆ ಧೈರ್ಯವಾಗಿ ಚಿಂತನೆ ಮುಂದುವರಿಸಿ. ಇಲ್ಲವಾದರೆ ಅಷ್ಟೇ ಕಟುವಾಗಿ ಚಿಂತೆ ಕೈ ಬಿಟ್ಟುಬಿಡಿ.

ಈಗ ಎಂಬುದಕ್ಕೆ ಪ್ರಾಮುಖ್ಯತೆ ಕೊಡಿ ನಿನ್ನೆ ಏನಾಯಿತು, ಹಾಗಾಯಿತು, ಹೀಗಾಯಿತು.. ನಾಳೆ ಏನಾಗುತ್ತೋ ಏನೋ.. ಈ ಯೋಚನೆಗಳು, ಭಯ ಅಥವಾ ಆತಂಕ ಬೇಕೇ? ನಿನ್ನೆ ಆಗಿದ್ದು ಆಗಿಹೋಯ್ತು. ಅದರ ಯೋಚನೆಯನ್ನು ಸೀಮಿತ ಸಮಯದಲ್ಲಿ ಮುಗಿಸಿ ಬಿಡಿ. ಹಾಗೇ, ನಾಳೆ ಏನು ಎಂದೂ ಭಯ ಬೇಡ. ನಿಜವಾಗಿಯೂ ನಿಮ್ಮ ನಾಳೆಗಳು ಚೆನ್ನಾಗಿರಬೇಕು ಎಂದರೆ ಇಂದು ಅದಕ್ಕಾಗಿ ಶ್ರಮ ಪಡಬೇಕು. ಚಿಂತೆಯ ಕಾಲಹರಣದಿಂದ ಪ್ರಯೋಜನವಿಲ್ಲ.

ನಿಮ್ಮ ಯೋಚನೆಗಳನ್ನೇ ಮರುಪರಿಶೀಲಿಸಿ ನೀವು ಎಷ್ಟು ಯೋಚಿಸುತ್ತೀರಿ. ಏನು ಯೋಚಿಸುತ್ತೀರಿ. ಯಾವ ಯೋಚನೆಗೆ ಎಷ್ಟು ಸಮಯ ಕೊಡುತ್ತೀರಿ. ಈ ಅಂಶಗಳನ್ನು ಮರುಪರಿಶೀಲನೆ ಮಾಡಿಕೊಳ್ಳಿ. ನಿಮ್ಮ ಯೋಚನೆ ಅಷ್ಟು ಸಮಯ ಪಡೆದುಕೊಳ್ಳುವುದು ಸರಿಯೇ? ಮುಖ್ಯ ಯೋಚನೆಗೆ ಕಡಿಮೆ ಸಮಯ ನೀಡಿ, ಬೇಡದ ಯೋಚನೆಗೆ ಹೆಚ್ಚು ಸಮಯ ವ್ಯಯಿಸಿದ್ದೀರಾ? ಇದೆಲ್ಲವನ್ನೂ ಅವಲೋಕನ ಮಾಡಿಕೊಳ್ಳಿ.

ಸ್ವೀಕರಿಸುವುದನ್ನು ಕಲಿತುಕೊಳ್ಳಿ ಏನೇ ಆಗಲಿ. ಅದನ್ನು ಸ್ವೀಕರಿಸುವ ಮನೋಭಾವ ಅತಿಮುಖ್ಯ. ಕಷ್ಟ-ನಷ್ಟ, ಸೋಲು-ಗೆಲುವು ಬದುಕಿನಲ್ಲಿ ಸಾಮಾನ್ಯ ಮತ್ತು ಸಹಜ. ಅದನ್ನು ಎದುರಿಸುವ, ಸ್ವೀಕರಿಸುವ ಮನಸ್ಸು ಮಾಡಬೇಕು. ಸೋತಾಗ ಕುಗ್ಗದೆ, ಗೆದ್ದಾಗ ಉಬ್ಬದೆ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಒಳ್ಳೆಯ ಹಾದಿಯಲ್ಲಿ ನಡೆವಾಗ ಒಂದೆರಡು ಕಷ್ಟಗಳು ಎದುರಾಗಬಹುದು. ನಿಮ್ಮ ದಾರಿ ಶುದ್ಧವಾಗಿದ್ದರೆ ಅದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಬಂದದ್ದನ್ನು ಸ್ವೀಕರಿಸಿ ಬದುಕಬೇಕು.

ಆರೋಗ್ಯದ ಮೂಲ ನಮ್ಮ ಮನಸಲ್ಲೇ ಇದೆ ದೇಹದ ಆರೋಗ್ಯ, ಮನಸ್ಸಿನ ಆರೋಗ್ಯ ಎರಡೂ ನಮ್ಮ ಮಾನಸಿಕ ಸ್ಥಿತಿಯನ್ನು ಅವಲಂಬಿಸಿ ಇರುತ್ತದೆ. ಹೆಚ್ಚು ಯೋಚಿಸುವುದು, ಚಿಂತೆ ಮಾಡುವುದು ಇತ್ಯಾದಿಗಳಿಂದ ನಮ್ಮ ಮನಸ್ಸಿಗೆ ಕಷ್ಟ ಅನಿಸಬಹುದು. ಹಾನಿ ಉಂಟಾಗಬಹುದು. ಅದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಏರುಪೇರು ಉಂಟಾಗಬಹುದು. ಹಾಗಾಗಿ, ನಮ್ಮ ಆರೋಗ್ಯ ನಮ್ಮ ಕೈಲಿದೆ. ನಮ್ಮ ಯೋಚನೆಗಳಲ್ಲಿದೆ.

ಇದನ್ನೂ ಓದಿ: ಈ ಗುಣಗಳು ನಿಮ್ಮ ಯಶಸ್ಸನ್ನು ಕಸಿದುಕೊಳ್ಳಬಹುದು; ಗರುಡ ಪುರಾಣದಲ್ಲೂ ಉಲ್ಲೇಖಿಸಿರುವ ಅಂಶಗಳೇನು?

How To | ಉಚಿತ ವೈದ್ಯಕೀಯ ಸೇವೆ ನೀಡುವ ಇ-ಸಂಜೀವನಿಗೆ ನೋಂದಣಿ ಹೇಗೆ?

Published On - 9:20 pm, Tue, 23 March 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ