ಮಹಿಳೆ ಪದಕ್ಕೆ ಸಮಾನಾರ್ಥಕವಾಗಿದ್ದ ಅವಾಚ್ಯ ಶಬ್ದಗಳನ್ನು ಕೈಬಿಟ್ಟ ಆಕ್ಸ್​ಫರ್ಡ್ ನಿಘಂಟು!

ವಿಶ್ವದ ಅತ್ಯಂತ ಪ್ರತಿಷ್ಠಿತ ನಿಘಂಟು ಎಂದು ಹೆಸರಾಗಿರುವ ಆಕ್ಸ್​ಫರ್ಡ್ ನಿಘಂಟಿನಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಕೆಲ ಪದಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಮಹಿಳೆ ಎಂದರೆ ಪುರುಷನ ಪತ್ನಿ, ಸ್ನೇಹಿತೆ, ಪ್ರೇಯಸಿ ಎಂದು ಉಲ್ಲೇಖಿಸುವ ಬದಲು ವ್ಯಕ್ತಿಯ ಪತ್ನಿ, ಸ್ನೇಹಿತೆ, ಪ್ರೇಯಸಿ ಎಂದು ಗುರುತಿಸುವ ಮೂಲಕ ಮಹಿಳೆಗೆ ಪುರುಷನ ಹೊರತಾದ ಸ್ವತಂತ್ರ ಅಸ್ತಿತ್ವ ಇದೆ ಎಂಬುದನ್ನು ಎತ್ತಿಹಿಡಿಯಲಾಗಿದೆ. ಇದರೊಟ್ಟಿಗೆ ಪುರುಷ ಪದದ ವ್ಯಾಖ್ಯಾನಕ್ಕೂ ಕೆಲ ಮಾರ್ಪಾಡುಗಳನ್ನು ತರಲಾಗಿದ್ದು ಲಿಂಗ ಸಮಾನತೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಆಕ್ಸ್​ಫರ್ಡ್ ನಿಘಂಟಿನ ವಕ್ತಾರ […]

ಮಹಿಳೆ ಪದಕ್ಕೆ ಸಮಾನಾರ್ಥಕವಾಗಿದ್ದ ಅವಾಚ್ಯ ಶಬ್ದಗಳನ್ನು ಕೈಬಿಟ್ಟ ಆಕ್ಸ್​ಫರ್ಡ್ ನಿಘಂಟು!
Edited By:

Updated on: Nov 09, 2020 | 6:01 PM

ವಿಶ್ವದ ಅತ್ಯಂತ ಪ್ರತಿಷ್ಠಿತ ನಿಘಂಟು ಎಂದು ಹೆಸರಾಗಿರುವ ಆಕ್ಸ್​ಫರ್ಡ್ ನಿಘಂಟಿನಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಕೆಲ ಪದಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಮಹಿಳೆ ಎಂದರೆ ಪುರುಷನ ಪತ್ನಿ, ಸ್ನೇಹಿತೆ, ಪ್ರೇಯಸಿ ಎಂದು ಉಲ್ಲೇಖಿಸುವ ಬದಲು ವ್ಯಕ್ತಿಯ ಪತ್ನಿ, ಸ್ನೇಹಿತೆ, ಪ್ರೇಯಸಿ ಎಂದು ಗುರುತಿಸುವ ಮೂಲಕ ಮಹಿಳೆಗೆ ಪುರುಷನ ಹೊರತಾದ ಸ್ವತಂತ್ರ ಅಸ್ತಿತ್ವ ಇದೆ ಎಂಬುದನ್ನು ಎತ್ತಿಹಿಡಿಯಲಾಗಿದೆ. ಇದರೊಟ್ಟಿಗೆ ಪುರುಷ ಪದದ ವ್ಯಾಖ್ಯಾನಕ್ಕೂ ಕೆಲ ಮಾರ್ಪಾಡುಗಳನ್ನು ತರಲಾಗಿದ್ದು ಲಿಂಗ ಸಮಾನತೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಆಕ್ಸ್​ಫರ್ಡ್ ನಿಘಂಟಿನ ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಿಘಂಟಿನ ಹೊಸ ಆವೃತ್ತಿಯಲ್ಲಿ ಬದಲಾವಣೆಗಳು ಸೇರ್ಪಡೆ
ಗಾರ್ಡಿಯನ್ ವರದಿ ಹೇಳುವಂತೆ, ಲೈಂಗಿಕತೆಗೆ ಸಂಬಂಧಿಸಿದ ಅವಾಚ್ಯ ಶಬ್ದಗಳಿಗೆ (bi**h) ಮಹಿಳೆ ಎಂದು ಸಮಾನಾರ್ಥಕವಾಗಿ ಬಿಂಬಿಸುವುದು ಮಹಿಳೆಯರಿಗೆ ತೋರುವ ಅಗೌರವ ಹಾಗೂ ಅದು ಲಿಂಗ ತಾರತಮ್ಯತೆಯ ಸಂಕೇತ ಎಂದು 2019ರಲ್ಲಿ ಮೇರಿಯಾ ಎಂಬುವವರು ಸಹಿ ಸಂಗ್ರಹ ಚಳವಳಿ ಆರಂಭಿಸಿದ್ದರು. ಆಂಗ್ಲ ಭಾಷೆಯಲ್ಲಿ ವೇಶ್ಯೆ ಅರ್ಥ ನೀಡುವ ಪದಗಳಿಗೆ ಸಮಾನಾರ್ಥಕವಾಗಿ ಮಹಿಳೆ, ಹುಡುಗಿ ಎಂದು ಅರ್ಥ ನೀಡುವುದರ ವಿರುದ್ಧ ಆರಂಭವಾದ ಸಹಿ ಸಂಗ್ರಹ ಅಭಿಯಾನಕ್ಕೆ 30 ಸಾವಿರಕ್ಕೂ ಅಧಿಕ ಸಹಿಗಳು ಸಂಗ್ರವಾಗಿ ವ್ಯಾಪಕ ಬೆಂಬಲ ಸಿಕ್ಕಿತ್ತು. ಈ ಚಳವಳಿಯನ್ನು ಗಂಭೀರವಾಗಿ ಪರಿಗಣಿಸಿದ ಆಕ್ಸ್​ಫರ್ಡ್ ಕೊನೆಗೂ 2020ರ ತನ್ನ ಹೊಸ ಬದಲಾವಣೆಗಳಲ್ಲಿ ವೇಶ್ಯೆ ಎಂಬುದು ಮಹಿಳೆಗೆ ಸಮಾಮಾರ್ಥಕ ಎಂಬ ಅರ್ಥವನ್ನು ಕೈ ಬಿಟ್ಟು ಅದನ್ನು ಅವಾಚ್ಯ ಎಂದು ಪರಿಗಣಿಸಿದೆ.

ಆಕ್ಸ್​ಫರ್ಡ್ ಹೊಸ ಬದಲಾವಣೆಯ ಕುರಿತಾಗಿ ಸಂತಸ ವ್ಯಕ್ತಪಡಿಸಿರುವ ಅರ್ಜಿದಾರರು ಅಂತೂ ಇಂತೂ 2020ರಲ್ಲಿಯಾದರೂ ಮಹಿಳೆಯರಿಗೆ ಅಗೌರವ ತರುವ ಪದಗಳನ್ನು ಕೈಬಿಡಲು ಆಕ್ಸ್​ಫರ್ಡ್ ನಿರ್ಧರಿಸಿರುವುದು ಸ್ವಾಗತಾರ್ಹ. ನಮ್ಮ ಅಭಿಯಾನ ಶೇಕಡಾ 90ರಷ್ಟು ಯಶಸ್ವಿಯಾಗಿದೆ. ಆದರೆ, ಬದಲಾವಣೆಯ ನಂತರವೂ ಅವಾಚ್ಯ ಶಬ್ದವೊಂದಕ್ಕೆ ಹಗೆತನ ಸಾಧಿಸುವ ಮಹಿಳೆ, ಅಹಿತಕರ ಮಹಿಳೆ ಎಂಬ ಅರ್ಥವನ್ನು ಮುಂದುವರೆಸಲಾಗಿದ್ದು ಅದನ್ನು ಸಹ ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ. ಅಂತೆಯೇ, ಪುರುಷರಿಗೆ ಸಂಬಂಧಿಸಿದ ಪದಗಳಲ್ಲಿ ನಿಘಂಟಿನ ಅರ್ಥಗಳು ಹೆಚ್ಚು ಸಂವೇದನಾಶೀಲವಾಗಿರುವುದನ್ನು ಉಲ್ಲೇಖಿಸಿದ ಅವರು ಇದು ಪುರುಷ ಹಾಗೂ ಮಹಿಳೆಯ ನಡುವಿನ ವ್ಯತ್ಯಾಸಕ್ಕೆ ಸಾಕ್ಷಿ ಎಂದಿದ್ದಾರೆ.

ಬೆಳವಣಿಗೆಯ ಕುರಿತಾಗಿ ಪ್ರತಿಕ್ರಿಯಿಸಿದ ಆಕ್ಸ್​ಫರ್ಡ್ ಸಂಸ್ಥೆಯ ಅಧಿಕಾರಿಯೊಬ್ಬರು ನಿಘಂಟು ಎಂಬುದು ಬಳಕೆಯಲ್ಲಿರುವ ಪದಗಳ ಅರ್ಥವನ್ನು ಬಿಂಬಿಸುತ್ತದೆಯೇ ವಿನಃ ಬೇರಾವುದೋ ಅರ್ಥವನ್ನು ಬಳಸುವಂತೆ ಹೇರಿಕೆ ಮಾಡುವುದಿಲ್ಲ. ಆದರೂ, ಆಕ್ಸ್​ಫರ್ಡ್ ಬದಲಾವಣೆಗಳತ್ತ ಸದಾ ಗಮನ ಹರಿಸುತ್ತದೆ ಎಂದಿದ್ದಾರೆ.

Published On - 5:56 pm, Mon, 9 November 20